Monday, March 24, 2025

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4

ಮ್ಮಿಬ್ಬರ ನಡುವಣ ಪಂಥಾಹ್ವಾನದಲ್ಲಿ ತಾನು ಸೋತು ಈಗ ಈ ಅಗ್ನಿಕುಂಡಕ್ಕೆ ಹಾರುವ ಸ್ಥಿತಿ ಬಂದೊದಗಿದೆ ಎಂಬುದಾಗಿ ಪಾರ್ಥ ಹೇಳುತ್ತಿದ್ದಂತೆಯೇ ʼಇದೊಳ್ಳೆ ಕಥೆಯಾಯಿತಲ್ಲ. ನೀನು ಬಾಣದ ಸೇತುವೆ ನಿರ್ಮಿಸುವುದಂತೆ ಅದನ್ನು ಆ ಕೋತಿ ಮುರಿಯುವುದಂತೆ. ಇದರ ಚಂದವನ್ನು ನೋಡಬೇಕಪ್ಪ. ಯಾರಿದ್ದಾರಯ್ಯ ಇದನ್ನು ನೋಡಿದವರು? ಎಂಬ ಮರುಪ್ರಶ್ನೆ ಎಸೆಯುತ್ತಾನೆ ವೃದ್ಧ. ಮುಂದೇನಾಯಿತು?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ.

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-

Sunday, March 23, 2025

ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು

 ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು

ಭಾರತದ  ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಬಲಿದಾನದ ದಿನ ಮಾರ್ಚ್‌ ೨೩ರ ಈದಿನ. ೧೯೩೧ರ ಮಾರ್ಚ್‌ ೨೩ರಂದು ಬ್ರಿಟಿಷರು ಈ ಮೂರೂ ಮಂದಿ ದೇಶಭಕ್ತರನ್ನು ಗಲ್ಲಿಗೇರಿಸಿದ್ದರು.

ಬ್ರಿಟಿಷರನ್ನು ದುಃಸ್ವಪ್ನವಾಗಿ ಕಾಡಿದ್ದ ಈ ಮೂವರು ದೇಶಭಕ್ತರು ದೆಹಲಿಯ ಸೆಂಟ್ರಲ್‌ ಅಸೆಂಬ್ಲಿಯಲ್ಲಿ ಬಾಂಬ್‌ ಎಸೆದು ಬ್ರಿಟಿಷರ ಎದೆಯನ್ನೇ ನಡುಗಿಸಿದ್ದರು. ಅವರನ್ನು ೧೯೩೧ರ ಮಾರ್ಚ್‌ ೨೪ರಂದು ಗಲ್ಲಿಗೇರಿಸುವುದಾಗಿ ಪ್ರಕಟಿಸಿದ್ದರೂ ಒಂದು ದಿನ ಮುಂಚಿತವಾಗಿಯೇ ಅವರನ್ನು ಗಲ್ಲಿಗೇರಿಸಲಾಗಿತ್ತು.

ಈ ಹುತಾತ್ಮರ ಗೌರವಾರ್ಥವಾಗಿ ದೇಶದಲ್ಲಿ ಈದಿನವನ್ನು ʼಬಲಿದಾನ ದಿವಸʼವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಈ ಮೂವರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ʼಇಂದು ನಮ್ಮ ದೇಶವು ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಅಪ್ರತಿಮ ಹೋರಾಟ, ಪರಾಕ್ರಮ ಮತ್ತು ತ್ಯಾಗವನ್ನು ಸ್ಮರಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಅವರು ನಡೆಸಿದ ನಿರ್ಭೀತ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿದಾಯಕʼ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದರ ಸಹಿತವಾಗಿ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್)‌ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಇವುಗಳನ್ನೂ ಓದಿ:

Let us pay tribute to Great Patriots

Saturday, March 22, 2025

ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!

  ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!

ಪ್ರತಿ ವರ್ಷ 500,000 ಕ್ಕೂ ಹೆಚ್ಚು ಜನರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ.

2009 ರಲ್ಲಿ ನಿಗೂಢ ಘಟನೆಯೊಂದು ಸಂಭವಿಸಿತು.

ಒಬ್ಬ ವ್ಯಕ್ತಿ ಕಾಣಿಸಿಕೊಂಡ. ಆತನ ಗುರುತು ಇಲ್ಲ. ಭೂತಕಾಲದ ವಿವರವಿಲ್ಲ. ಅವನು ಎಲ್ಲಿಂದ ಬಂದ ಎಂಬುದರ ದಾಖಲೆ ಇಲ್ಲ. ಆತ ಹೇಳಿಕೊಂಡ ಪ್ರಕಾರ ಆತನ ಹೆಸರು ಪೀಟರ್‌ ಬರ್ಗ್‌ಮನ್.‌ ಆದರೆ ಇಂತಹ ವ್ಯಕ್ತಿ ಅಸ್ತಿತ್ವದಲ್ಲೇ ಇಲ್ಲ ಎಂಬುದು ದಾಖಲೆಗಳು ಬಹಿರಂಗ ಪಡಿಸಿದ ಸತ್ಯ. ಹೀಗಾಗಿ ಇದು ಸಾರ್ವಕಾಲಿಕ ಅಂತರ್ಜಾಲ ರಹಸ್ಯಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಹಾಗಿದ್ದರೆ ಈ ಘಟನೆ ಏನು?

ಅದು ಜೂನ್ 2009. ತನ್ನನ್ನು ಪೀಟರ್ ಬರ್ಗ್‌ಮನ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬ ಐರ್ಲೆಂಡಿನ ಸ್ಲಿಗೊ ಪಟ್ಟಣಕ್ಕೆ ಬಂದ. ಆತ  ಒಂದು ಸಣ್ಣ ಹೋಟೆಲ್‌ಗೆ ಭೇಟಿ ನೀಡಿ, ನಗದು ಪಾವತಿಸಿ ಕೊಠಡಿಯೊಂದನ್ನು ಪಡೆದ. ಆತನ ಬಳಿ ಸವೆದ ಒಂದೇ ಒಂದು ಹಳೆಯ ಚೀಲವಿತ್ತು.

(ವಿವರಗಳಿಗೆ  ಇಲ್ಲಿ ಕ್ಲಿಕ್‌ ಮಾಡಿ ಅಥವಾ ನಿಗೂಢ ಪುಟ ನೋಡಿ)

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩

ವೃದ್ಧ ಬ್ರಾಹ್ಮಣನ ಜೊತೆ ಮಾತನಾಡಿದ ಸದೃಢಕಾಯದ ವ್ಯಕ್ತಿ ತಾನು ಪಾಂಡು ರಾಜನ ಪುತ್ರ ಮಧ್ಯಮ ಪಾಂಡವ ಪಾರ್ಥ ಎಂಬುದಾಗಿ ಹೇಳುತ್ತಾನೆ. ಹಳೆಯ ಸೇತುವೆ ಇದ್ದ ಈ ಸಮುದ್ರ ತೀರಕ್ಕೆ ಬಂದಾಗ ಮುದಿ ಕೋತಿಯೊಂದಿಗೆ ನಡೆದ ಮಾತುಕತೆ ವಾಗ್ವಾದಕ್ಕೆ ತಿರುಗಿ, ಪಂಥಾಹ್ವಾನ ಮಾಡಿಕೊಂಡು ತಾನು ಅಗ್ನಿಕುಂಡಕ್ಕೆ ಹಾರಬೇಕಾದ ಸ್ಥಿತಿ ಹೇಗೆ ಬಂದೊದಗಿತು ಎಂದು ವಿವರಿಸುತ್ತಾನೆ. ಹಾಗಾದರೆ ಮುದಿ ಕೋತಿ ಜೊತೆಗಿನ ಮಾತುಕತೆಯಾದರೂ ಏನು?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

ಈ ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ….

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

Thursday, March 20, 2025

ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

 ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ಈಕೆಯ ಪಿಟೀಲು ವಾದನದ ಮಾಧುರ್ಯಕ್ಕೆ ತಲೆದೂಗದವರಿಲ್ಲ.

ಆದರೆ ಇತ್ತೀಚೆಗೆ ಕೇರಳದ ಅಲಪ್ಪುಳದ ಕೊಟ್ಟಂಕುಲಂಗರ ದೇವಸ್ಥಾನದಲ್ಲಿ ಈಕೆಯ ಭಕ್ತಿ ಸಂಗೀತಕ್ಕೆ ಪೊಲೀಸರ ತಡೆ ಬಿತ್ತು. ದೇವಸ್ಥಾನದಲ್ಲಿ ಇನ್ನೂ ಉತ್ಸವ ಮುಂದುವರೆದಿತ್ತು. ದೇವಸ್ಥಾನ ಸಮೀಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಬಾಲಕಿ ಶಶಿ ಭಾವಪೂರ್ಣವಾಗಿ ಪಿಟೀಲು ವಾದನದಲ್ಲಿ ನಿರತಳಾಗಿದ್ದಳು.

ಆಕೆ ನುಡಿಸುತ್ತಿದ್ದ ʼಮರುತಮಲೈ ಮಾಮನಿಯೇ ಮುರುಗಯ್ಯʼ ತಮಿಳು ಹಾಡಿಗೆ ಅಲ್ಲಿ ನೆರೆದಿದ್ದ ಸಹಸ್ರಾರು ಮಂದಿ ತಲೆದೂಗುತ್ತಾ ಕುಳಿತಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ʼರಾತ್ರಿ ೧೦ ಗಂಟೆಯಾಗಿದೆ. ಕಚೇರಿ ನಿಲ್ಲಿಸುʼ ಎಂದು ಆಕೆಯ ಬಳಿಗೆ ವೇದಿಕೆಯೇರಿ ಬಂದು ಸೂಚಿಸಿದರು. ಈ ದಿಢೀರ್‌ ಸೂಚನೆಯಿಂದ ಪುಟ್ಟ ಬಾಲಕಿ ಆಘಾತಕ್ಕೆ ಒಳಗಾದಳು. ನೆರೆದಿದ್ದ ಜನರೂ ದಿಗ್ಭ್ರಮೆಗೊಂಡರು. ಪೊಲೀಸರೂ ಬಂದು ಸಂಗೀತ ಕಾರ್ಯಕ್ರಮ ನಿಲ್ಲಿಸಿದರು.

ಕೊನೆಗೆ ಆ ಪುಟ್ಟ ಬಾಲಕಿ ಕೊಠಡಿಯೊಂದರಲ್ತಲಿ ಪ್ರೀತಿಯ ಪಿಟೀಲನ್ನು ಹಿಡಿದುಕೊಂಡು ಕುಳಿತಿದ್ದ ದೃಶ್ಯವನ್ನು ಕೂಡಾ ಸೇರಿಸಿ ಮಲಯಾಳಂ ಮನೋರಮಾ ವರದಿ ಮಾಡಿದೆ.

ಪುಟ್ಟ ಬಾಲಕಿಯ ಪಿಟೀಲುವಾದನಕ್ಕೆ ತಡೆ ಹಾಕಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ. 

ಈ ಘಟನೆ ಬಗ್ಗೆ ನಿಮಗೆ ಏನನ್ನಿಸಿತು? ಕಾಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.

ಬಾಲಕಿಯ ಮಧುರವಾದ ಪಿಟೀಲು ಧ್ವನಿ ಆಲಿಸಲು ಈ ಕೆಳಗಿನ ಸುದ್ದಿಯಲ್ಲಿನ ವಿಡಿಯೋ ನೋಡಿರಿ:

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

Tuesday, March 18, 2025

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೨

ವೃದ್ಧ ಬ್ರಾಹ್ಮಣ ಸಮುದ್ರ ತಟಕ್ಕೆ ಬಂದಿದ್ದಾನೆ. ಸದೃಢಕಾಯನಾದ ವ್ಯಕ್ತಿ ಅಗ್ನಿಕುಂಡವನ್ನು ಸಿದ್ಧ ಪಡಿಸಿಕೊಂಡು ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿದ್ದಾನೆ. ಅನತಿ ದೂರದಲ್ಲಿ ಕೋತಿಯೊಂದು ಮರದ ಕೆಳಗೆ ಪವಡಿಸಿದೆ.

ವೃದ್ಧ ಬ್ರಾಹ್ಮಣ ದೃಢಕಾಯನಾದ ವ್ಯಕ್ತಿಯನ್ನು ಮಾತನಾಡಿಸುತ್ತಾನೆ.

ಅವರು ಮಾತನಾಡಿದ್ದು ಏನು?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.


ಈ ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ….

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

Monday, March 17, 2025

ವರ್ಷದ ಕೊನೆಯ ಸಂಕಷ್ಟಿ ಪೂಜಾ

ವರ್ಷದ ಕೊನೆಯ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯ ಬಳಿಕ ಆರಂಭವಾದ ಸಂಕಷ್ಟಿ ಪೂಜಾ ಸರಣಿಯಲ್ಲಿನ ವರ್ಷದ ಕೊನೆಯ ಸಂಕಷ್ಟಿ ಪೂಜೆಯನ್ನು ೨೦೨೫ ಮಾರ್ಚ್‌ ೧೭ರ ಸೋಮವಾರ ನಡೆಸಲಾಯಿತು.

ವಿದ್ಯುತ್‌ ಕಡಿತದ ಹಿನ್ನೆಲೆಯಲ್ಲಿ ತೈಲ ದೀಪ ಮತ್ತು ತುರ್ತು ದೀಪಗಳ ನಡುವೆಯೇ ಪೂಜಾ ಕೈಂಕರ್ಯ ನೆರವೇರಿತು.

ಪೂಜೆಯ ಸಂದರ್ಭದ ಕೆಲವು ಫೊಟೋ, ವಿಡಿಯೋ ಇಲ್ಲಿವೆ. ಸಮೀಪ ದೃಶ್ಯಕ್ಕಾಗಿ ಫೋಟೋಗಳನ್ನು ಕ್ಲಿಕ್‌ ಮಾಡಿರಿ.




ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

Sunday, March 16, 2025

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

ಶೇಷ ಶಯನನಾಗಿ ಪವಡಿಸಿದ್ದ ವಿಷ್ಣು ಪರಮಾತ್ಮನಿಗೆ ದಿಢೀರನೇ ಎಚ್ಚರವಾಯಿತು. ಭಕ್ತ ಪರಾಧೀನನಾದ ಆತನಿಗೆ ಎಲ್ಲಿಂದಲೋ ಆಕ್ರಂದನದ ಸದ್ದು ಕೇಳಿದಂತಾಯಿತು. ಜ್ಞಾನಚಕ್ಷುವನ್ನು ತೆರೆದು ನೋಡುತ್ತಾನೆ. ತನ್ನ ಪರಮ ಭಕ್ತನಾದ ಪಾಂಡು ಪುತ್ರ ಪಾರ್ಥ ತನ್ನನ್ನೇ ಸ್ಮರಿಸುತ್ತಾ ಗೋಳಾಡುತ್ತಿದ್ದಾನೆ.

ಏನಾಯಿತು ಪಾರ್ಥನಿಗೆ?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.


೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

 ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

ವದೆಹಲಿ: ಲಷ್ಕರ್--ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್‌ ನದೀಮ್‌ ೨೦೨೫ ಮಾರ್ಚ್‌ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ

೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.

ಜನವರಿ ೧, ೨೦೨೩ ರಂದು, ರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.

ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್--ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.

೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್‌ನನ್ನು ಹೆಸರಿಸಿತ್ತು.

ರಾಜೌರಿ ದಾಳಿಗೆ ಸಂಬಂಧಿಸಿದಂತೆ, ಎನ್‌ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆ, ಅವರಲ್ಲಿ ಮೂವರು ನಿಷೇಧಿತ ಲಷ್ಕರ್- -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.

ನಾಗರಿಕರನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.

ಕೆಳಗಿನವುಗಳನ್ನೂ ಓದಿರಿ:

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

Advertisement