ಇಂದಿನ ಇತಿಹಾಸ
ಮೇ 2
ಇಪ್ಪತ್ತನೇ ಶತಮಾನದ ಶ್ರೇಷ್ಠ ಚಿತ್ರ ನಿರ್ಮಾಪಕರಲ್ಲೊಬ್ಬರಾದ ಬಂಗಾಳಿ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ (1921-92) ಜನ್ಮದಿನ. ಇವರ `ಪಥೇರ್ ಪಾಂಚಾಲಿ' ಚಿತ್ರವು ಭಾರತೀಯ ಸಿನಿಮಾಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತು.
2007: ರೈತರ ಬೆಳೆಸಾಲ ಮನ್ನಾ ಯೋಜನೆಗೆ ವಿಧಿಸಲಾಗಿದ್ದ 50,000 ರೂಪಾಯಿಗಳ ಮಿತಿಯನ್ನು ರಾಜ್ಯ ಸರ್ಕಾರವು ತೆಗೆದುಹಾಕಿತು. ಬೆಳೆಸಾಲ ಪಡೆದ ಎಲ್ಲ ರೈತರಿಗೂ ಸಾಲ ಮನ್ನಾ ಯೋಜನೆ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
2007: ಹಿರಿಯ ಸಾಹಿತಿ ಪಿ.ವಿ. ನಾರಾಯಣ ಅವರ `ಧರ್ಮಕಾರಣ' ಕೃತಿಯ ಮೇಲೆ ರಾಜ್ಯ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಬಸವಣ್ಣ, ಅಕ್ಕನಾಗಮ್ಮ ಮತ್ತು ಚನ್ನಬಸವಣ್ಣ ಅವರ ಜನ್ಮ ಕುರಿತು ಕೃತಿಯಲ್ಲಿ ಮಾಡಿದ್ದ ಉಲ್ಲೇಖವು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
2006: ಒರಿಸ್ಸಾದ ನಾಲ್ಕೂವರೆ ವರ್ಷದ ಪೋರ ಬುಧಿಯಾ ಸಿಂಗ್ 65 ಕಿ.ಮೀ. ದೂರವನ್ನು ಯಾವುದೇ ಅಡತಡೆ ರಹಿತವಾಗಿ ಕ್ರಮಿಸಿ ಮ್ಯಾರಾಥಾನ್ ಓಟದಲ್ಲಿ ಲಿಮ್ಕಾ ದಾಖಲೆ ನಿಮರ್ಿಸಿದ. ಪುರಿಯ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭುವನೇಶ್ವರದ ಲಯನ್ಸ್ ಗೇಟಿನಿಂದ ಓಟ ಆರಂಭಿಸಿದ ಬುಧಿಯಸಿಂಗ್ ಕೇವಲ 7 ಗಂಟೆ, 2 ನಿಮಿಷದಲ್ಲಿ ಓಡಿ 65 ಕಿ.ಮೀ. ಓಡಿ ಭುವನೇಶ್ವರದ ಡಿಎವಿ ಚೌಕವನ್ನು ತಲುಪಿದ.
1945: ಎರಡನೇ ವಿಶ್ವಸಮರದಲ್ಲಿ ಬರ್ಲಿನ್ ಪತನವನ್ನು ಸೋವಿಯತ್ ಒಕ್ಕೂಟ ಪ್ರಕಟಿಸಿತು. ಇದೇ ವೇಳೆಗೆ ಮಿತ್ರ ಪಡೆಗಳು ಇಟಲಿ ಮತ್ತು ಆಸ್ಟ್ರಿಯಾದ ಕೆಲವು ಭಾಗಗಳಲ್ಲಿ ನಾತ್ಸಿ ಪಡೆಗಳು ಶರಣಾಗತವಾದುದನ್ನು ಪ್ರಕಟಿಸಿದವು.
1922: ಭಾರತದ ಬಿಲಿಯರ್ಡ್ಸ್ ಆಟಗಾರ ವಿಲ್ಸನ್ ಜೋನ್ಸ್ ಹುಟ್ಟಿದ ದಿನ. ಇವರು 1958ರಲ್ಲ್ಲಿ ಮೊತ್ತ ಮೊದಲ ಬಾರಿಗೆ ವಿಶ್ವ ಪ್ರಶಸ್ತಿ ಪಡೆಯುವ ಮೂಲಕ ಭಾರತದ ಪ್ರಪ್ರಥಮ ವೈಯಕ್ತಿಕ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದರು. ಮೂರು ಅಮೆಚೂರ್ ಜಾಗತಿಕ ಪ್ರಶಸ್ತಿಗಳನ್ನು ಇವರು ಗೆದ್ದುಕೊಂಡರು.
1921: ಇಪ್ಪತ್ತನೇ ಶತಮಾನದ ಶ್ರೇಷ್ಠ ಚಿತ್ರ ನಿರ್ಮಾಪಕರಲ್ಲೊಬ್ಬರಾದ ಬಂಗಾಳಿ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ (1921-92) ಜನ್ಮದಿನ. ಇವರ `ಪಥೇರ್ ಪಾಂಚಾಲಿ' ಚಿತ್ರವು ಭಾರತೀಯ ಸಿನಿಮಾಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತು.
1913: ಹಳೆ ತಲೆಮಾರಿನ ಅಪರೂಪದ ಅನುವಾದಕಿ ಲೇಖಕಿ ಸಾವಿತ್ರಮ್ಮ ಹೆಬ್ಬಳಲು ವೆಲಪನೂರು ಸಾವಿತ್ರಮ್ಮ (ಎಚ್.ವಿ. ಸಾವಿತ್ರಮ್ಮ) ಅವರು ಎಂ.ರಾಮರಾವ್- ಮೀನಾಕ್ಷಮ್ಮ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.
1519: ಜಗತ್ತಿನ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾದ ಲಿಯೋನಾರ್ಡ್ ಡ ವಿಂಚಿ ತನ್ನ 67ನೇ ವಯಸ್ಸಿನಲ್ಲಿ ಫ್ರಾನ್ಸಿನ ಕ್ಲೌಕ್ಸಿನಲ್ಲಿ ಮೃತನಾದ. ಸೇಂಟ್ ಫ್ಲೋರೆಂಟಿನ್ನಿನ ಪ್ಯಾಲೇಸ್ ಚರ್ಚಿನಲ್ಲ್ಲಿ ಆತನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಈ ಪ್ಯಾಲೇಸ್ ಚರ್ಚ್ ವಿಂಚಿಯ ಗೋರಿ ಸಹಿತವಾಗಿ ಧ್ವಂಸಗೊಂಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment