Monday, October 27, 2008

ಬಾ ಬೆಳಗು ಬಾ ಹಣತೆಯನು Happy Deepavali

Happy Deepavali


'PARYAYA' wishes health, wealth, peaceful and prosperous life to all during the occasion of Deepavali. Let the Festival of Lights kindle noble thinking of living and helping others, protection of nature, environment, water and trees and letting others including animals like cows and birds live peacefully on this earth.


ಬಾ ಬೆಳಗು ಬಾ ಹಣತೆಯನು


हॆ दीवाली,

मन कॆ आंगन मॆ जॊत जलादॆ ।

अंग अंग मॆ रंग भर दॆ ॥

इस मिट्टी पॆ फूल खिलादॆ ।

दिवाली कॆ इस शुभ अवसर पर हमारॆ समस्त परिजनॊं कॆ और सॆ हार्दिक शुभ कामनायॆं ।


ಕಾಲಕಾಲಕೂ ಬೆಂದ ಭೂಮಿಗಿದೆ

ಮಳೆಯ ಬೆಳೆಯ ಸಿರಿನೋಟ;

ವರ್ಷವರ್ಷಕೂ ನೊಂದ ಜೀವಕಿದೆ

ಹಬ್ಬದಿಬ್ಬಣದ ಕೂಟ


ಈ ಬದುಕೆಂಬ ಸಂತೆಯ ವ್ಯಾಪಾರದಲ್ಲಿ ಒಮ್ಮೆ ಏಕತಾನತೆ ಕಟ್ಟಿ ಕಾಡಿದರೆ, ಇನ್ನೊಮ್ಮೆ ದುಃಖ ದುಮ್ಮಾನಗಳು ನೋಯಿಸುತ್ತವೆ, ಮತ್ತೊಮ್ಮೆ ನಷ್ಟ ಸೋಲುಗಳು ಕುಗ್ಗಿ ಕುಸಿಯುವಂತೆ ಮಾಡುತ್ತವೆ. ಕುಸಿದ ಕಾಲುಗಳ ಎತ್ತಲೇಬೇಕು. ಬದುಕಬಂಡಿ ಸಾಗಿಸಲು ಬಾಳಿಗಷ್ಟು ಭರವಸೆ ಇದೆ ಎಂದು ಉತ್ಸಾಹ ಹರಿಸಿ, ಸೋತ ಕಾಲುಗಳಿಗಷ್ಟು ಚೈತನ್ಯ ನೀಡುವ ಸಂಭ್ರಮದ ಗಳಿಗೆಗಳ ಪುನರುಚ್ಚರಣ ಮಂತ್ರವೇ ಮರಳಿ ಮರಳಿ ಬರುವ ಹಬ್ಬಗಳು, ನಮ್ಮ ಸಂಸ್ಕೃತಿಯೆಂಬ ಚಂದದ ಗುಡಿಯ ನಿನಾದಗಳು, ಬದುಕ ಬಾಗಿಲ ಹಸಿರಾಗಿಸುವ ತೋರಣಗಳು, ನಗು ತುಂಬುವ ಹೂರಣಗಳು.


ಅಸುರ ಪ್ರವೃತ್ತಿಯ ಮೇಲೆ ಸುರರ ವಿಜಯದ ಪೌರಾಣಿಕ ಐತಿಹ್ಯ, ಅಂತಃಶುದ್ಧಿಯಾಗುವ ಧಾರ್ಮಿಕ ಆಚರಣೆ, ನಮ್ಮನ್ನು ಅನ್ನ-ನೀರು ಕೊಟ್ಟು ಕಾಪಾಡುವ ಗಂಗೆ-ಬೆಳೆ-ದವಸ-ಧಾನ್ಯದ ಪೈರುಗಳನ್ನು ಆರಾಧಿಸುವ ಸಾತ್ವಿಕ ತತ್ತ್ವ, ಕಾಮಧೇನುವಾಗಿ ಅಮೃತವುಣಿಸಿ ನಮ್ಮ ಪುಷ್ಟಿಯಾಗಿಸುವ ಗೋಮಾತೆಯನ್ನು ಪೂಜಿಸುವ ಕೃತಜ್ಞತಾ ಭಾವ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮಂತರಂಗದ ತಮೋ ಗುಣಗಳ ಅಳಿಸಿ, ಮನೆಮಂದಿಗಳಿಂದಲೂ, ಮನಮನಗಳಿಂದಲೂ ಪ್ರೇಮದ ಅರಿವಿನ ಹೊಂಬೆಳಕು ಹರಿಹರಿದು ಸುತ್ತಲ ವಾತಾವರಣವನ್ನು ಸ್ನೇಹಮಯವಾಗಿಸಲಿ ಎಂಬ ಆಂತರ್ಯದ ಸಂದೇಶ ತೊಟ್ಟ...


ದೀಪಾವಳೀ...

ಬಾ ಬೆಳಗು ಬಾ ಹಣತೆಯನು

ನಮ್ಮೆದೆಯ ಗುಡಿಯಲ್ಲಿ

ಈ ದಿವ್ಯ ಶುಭಗಳಿಗೆಯಲ್ಲಿ

ಎದೆಯ ಕಸವನು ಗುಡಿಸಿ

ರಂಗವಲ್ಲಿಯನಿರಿಸಿ

ಸಿಂಗರಿಸು ನಮ್ಮೆದೆಯ ನಿನ್ನ ಪ್ರೇಮದ ಅಮೃತ

ಸಂಪತ್ತಿನಲ್ಲಿ

ಬಾ ಕಾರ್ತೀಕವೇ ಬಾ, ನಕ್ಷತ್ರದ ನಲಿವಿನ

ಗರಿಗೆದರುತ ಕತ್ತಲ ಕಾಡಿನಲಿ

ಸಾವಿರ ಬೆಳಕಿನ ಹೂವುಗಳರಳಲಿ

ಕೊಂಬೆ ಕೊಂಬೆಗಳ ಮೌನದಲಿ

1 comment:

Anonymous said...

WISHING U & UR FAMILY A VERY HAPPY DIWALI ..
ದೀಪಾವಳೀ...

ಬಾ ಬೆಳಗು ಬಾ ಹಣತೆಯನು

ನಮ್ಮೆದೆಯ ಗುಡಿಯಲ್ಲಿ

ಈ ದಿವ್ಯ ಶುಭಗಳಿಗೆಯಲ್ಲಿ

ಎದೆಯ ಕಸವನು ಗುಡಿಸಿ

ರಂಗವಲ್ಲಿಯನಿರಿಸಿ

ಸಿಂಗರಿಸು ನಮ್ಮೆದೆಯ ನಿನ್ನ ಪ್ರೇಮದ ಅಮೃತ

ಸಂಪತ್ತಿನಲ್ಲಿ

ಬಾ ಕಾರ್ತೀಕವೇ ಬಾ, ನಕ್ಷತ್ರದ ನಲಿವಿನ

ಗರಿಗೆದರುತ ಕತ್ತಲ ಕಾಡಿನಲಿ

ಸಾವಿರ ಬೆಳಕಿನ ಹೂವುಗಳರಳಲಿ

chenngide nimma Artical.

Advertisement