ಡಿಸೆಂಬರ್ 12: ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ
ಪತ್ರಿಕೋದ್ಯಮ ಕಾರ್ಯಾಗಾರ
ಪತ್ರಿಕೋದ್ಯಮ ಕಾರ್ಯಾಗಾರ
ಕೃಷಿರಂಗ ಎದುರಿಸುತ್ತಿರುವ ಸಮಸ್ಯೆಗಳು, ಈ ವಲಯದಲ್ಲಿನ ಹೊಸ ಬೆಳವಣಿಗೆಗಳ ಸಾಧಕ-ಬಾಧಕಗಳು, ರೈತರಲ್ಲಿ ಭರವಸೆ ಮೂಡಿಸುವ ಯಶೋಗಾಥೆಗಳು, ಇತರರಿಗೆ ಪಾಠವಾಗಬಲ್ಲ ಸೋಲಿನ ಕಥೆಗಳು ಮುಂತಾದ ವಿಷಯಗಳ ಕುರಿತು ಆಳನೋಟವಿರುವ ಬರವಣಿಗೆ ಇಂದಿನ ಅಗತ್ಯವಾಗಿದ್ದು, ಇದಕ್ಕೆ ಪೂರಕವಾಗಿ ಕೃಷಿ ಮಾಧ್ಯಮ ಕೇಂದ್ರ ಕಾರ್ಯಾಗಾರ ಹಮ್ಮಿಕೊಂಡಿದೆ.
ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು ಹುಬ್ಬಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಅಂಡ್ ರಿಸರ್ಚ್ ಸಹಭಾಗಿತ್ವದಲ್ಲಿ 2008ರ ಶುಕ್ರವಾರ, ಡಿಸೆಂಬರ್ 12ರಂದು ಹುಬ್ಬಳ್ಳಿಯಲ್ಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ.
ಐಎಂಸಿಆರ್ ಹಾಲ್ ನಲ್ಲಿ ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಐಬಿಎಂಆರ್ ಬ್ಯುಸಿನೆಸ್ ಮೆನೇಜ್ ಮೆಂಟ್ ಅಂಡ್ ರಿಸರ್ಚ್ ಡೀನ್ ಪ್ರೊ. ಪಿ.ಎನ್. ಖಟಾವಕರ, ಬ್ಯಾಂಕಿಂಗ್ ತಜ್ಞ, ಅಭಿವೃದ್ಧಿ ಬರಹಗಾರ ಅಡ್ಡೂರು ಕೃಷ್ಣರಾವ್, ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕ್ರಮ ನಿರ್ದೇಶಕ ನವೀನ್ ಝಾ, ಐಎಂಸಿಆರ್ ಪ್ರಾಚಾರ್ಯರಾದ ಡಾ. ನಯನಾ ಗಂಗಾಧರ ಮೊದಲಾದವರು ಪಾಲ್ಗೊಳ್ಳುವರು.
ಬಳಿಕ ನಡೆಯುವ ಕಾರ್ಯಾಗಾರದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಕ್ಷೇತ್ರಭೇಟಿಯ ಕ್ರಮ, ಬರವಣಿಗೆ ತಂತ್ರಗಾರಿಕೆ, ಬದ್ಧತೆ ಮುಂತಾದ ವಿಷಯಗಳ ಕುರಿತು ಅಡ್ಡೂರು ಕೃಷ್ಣರಾವ್ ಹಾಗೂ ಪತ್ರಕರ್ತ ಶಿವರಾಂ ಪೈಲೂರು ಉಪನ್ಯಾಸ ನೀಡುವರು.
ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಕೃಷಿಮಾಧ್ಯಮ ಕೇಂದ್ರ ಕಳೆದ ಎಂಟು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಕೇಂದ್ರ ನಡೆಸುತ್ತಿರುವ ಒಂದು ವರ್ಷ ಅವಧಿಯ ಅಂಚೆ ತೆರಪಿನ ತರಬೇತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಐದು ತಂಡಗಳಲ್ಲಿ ಯಶಸ್ವಿಯಾಗಿ ತರಬೇತಿ ಪೂರೈಸಿದ 65 ಮಂದಿ0ಯನ್ನು `ಕಾಮ್ ಫೆಲೋ'ಗಳೆಂದು ಪರಿಗಣಿಸಲಾಗಿದೆ. ಕೃಷಿ ಲೇಖನಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ರಾಜ್ಯಮಟ್ಟದ ಪ್ರಶಸ್ತಿಯನ್ನೂ ನೀಡುತ್ತಿದೆ.
ಇದೀಗ ಕೃಷಿ ಮಾಧ್ಯಮ ಕೇಂದ್ರ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ನೆರವಿನೊಂದಿಗೆ ತನ್ನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಕಾರ್ಯಕ್ರಮ ಐಎಂಸಿಆರ್ ನಲ್ಲಿ ಏರ್ಪಾಡಾಗಿದೆ ಎಂದು ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿರಂಗ ಎದುರಿಸುತ್ತಿರುವ ಸಮಸ್ಯೆಗಳು, ಈ ವಲಯದಲ್ಲಿನ ಹೊಸ ಬೆಳವಣಿಗೆಗಳ ಸಾಧಕ-ಬಾಧಕಗಳು, ರೈತರಲ್ಲಿ ಭರವಸೆ ಮೂಡಿಸುವ ಯಶೋಗಾಥೆಗಳು, ಇತರರಿಗೆ ಪಾಠವಾಗಬಲ್ಲ ಸೋಲಿನ ಕಥೆಗಳು ಮುಂತಾದ ವಿಷಯಗಳ ಕುರಿತು ಆಳನೋಟವಿರುವ ಬರವಣಿಗೆ ಇಂದಿನ ಅಗತ್ಯವಾಗಿದ್ದು, ಇದಕ್ಕೆ ಪೂರಕವಾಗಿ ಕೃಷಿ ಮಾಧ್ಯಮ ಕೇಂದ್ರ ಕಾರ್ಯಾಗಾರ ಹಮ್ಮಿಕೊಂಡಿದೆ. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾದುದು ಎಂಬ ಆಶಯದೊಂದಿಗೆ ಯುವ ಬರಹಗಾರರಿಗೆ ಸೂಕ್ತ ತರಬೇತಿ ನೀಡುವುದು ಕಾರ್ಯಾಗಾರದ ಉದ್ದೇಶ ಎಂದು ಅನಿತಾ ಪೈಲೂರು ವಿವರಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ ನಾರಾಯಣಪುರ, ಧಾರವಾಡ - 580 008 (ಫೋನ್: 9900517749; 2444736, ವೆಬ್ ಸೈಟ್: www.farmedia.org ~ caam@sancharnet.in ) ವಿಳಾಸವನ್ನು ಸಂಪರ್ಕಿಸಬಹುದು.
2 comments:
Now it is called CAM not CAAM, Please change in the logo.
Thanks. Sudheendra,
Rectified now.
Nethrakere Udaya Shankara
Post a Comment