ಸಮುದ್ರಮಥನ 18: ತಪ್ಪು-ಒಪ್ಪುಗಳಿಗೆ
ಯಥಾಯೋಗ್ಯ ತಿರಸ್ಕಾರ-ಪುರಸ್ಕಾರ
ನಿಮ್ಮ ಮನೆತನದಲ್ಲಿ ಯಾರೋ ಒಬ್ಬ, ಯಾವುದೋ ಒಂದು ವಿಷಯದಲ್ಲಿ ತಪ್ಪು ಮಾಡಿದರೆ ಆ ಒಂದು ತಪ್ಪಿಗಾಗಿ ಆ ಇಡೀ ಮನೆತನವನ್ನೇ ದೂಷಿಸಬೇಕಿಲ್ಲ. ಅವರ ಬಗೆಗೆ ನಮ್ಮ ಅಭಿಪ್ರಾಯ ಕೆಡಿಸಿಕೊಳ್ಳಬೇಕಿಲ್ಲ.
ತಪ್ಪು ಮಾಡುವವರನ್ನು ಕಂಡರೆ ಮೈಯೆಲ್ಲಾ ಉರಿಯುತ್ತದೆ. ಅವರನ್ನು ಯಾವ ಕಾರಣಕ್ಕೂ ಹತ್ತಿರ ಸೇರಿಸಿಕೊಳ್ಳುವುದು ಬೇಡ ಎಂದು ತೀರ್ಮಾನಿಸುತ್ತೇವೆ. ಆ ತಪ್ಪಿನ ಕಾರಣದಿಂದ ಅವನ ಉಳಿದ ಯಾವ ಗುಣಗಳೂ (ಇದ್ದಲ್ಲಿ) ನಮ್ಮ ಕಣ್ಣಿಗೆ ಬೀಳುವುದಿಲ್ಲ. ಅವನ ಇಡೀ
ವ್ಯಕ್ತಿತ್ವವನ್ನು ಅವನ ತಪ್ಪನ್ನು ಮುಂದಿಟ್ಟುಕೊಂಡು ಅಳೆಯಲು ಹೊರಡುತ್ತೇವೆ.
ಕಾಳಿದಾಸ ಕುಮಾರಸಂಭವದಲ್ಲಿ ಒಂದು ಕಡೆ 'ಏಕೋಹಿದೋಷೋ ಗುಣಸನ್ನಿಪಾತೇನಿಮಜ್ಜತಿ ಇಂದೋರಿವ ಅಂಕಃ' ಎಂದು ಹೇಳುತ್ತಾನೆ. ಗುಣಗಳ ರಾಶಿಯ ಮಧ್ಯೆ ಎಲ್ಲಾದರೂ ಒಂದು ದೋಷ ಇದ್ದರೆ ಅದು ಮುಳುಗಿ ಹೋಗುತ್ತದೆ. ಆ ದೋಷ ಮುಳುಗಿ ಹೋಗುತ್ತದೆ,
ಹೇಗೆಂದರೆ ಚಂದ್ರನಿಗೆ ಸಹಸ್ರ ಹಿಮಕಿರಣಗಳ ಬಗಲಿನಲ್ಲಿ ಕಲಂಕವೂ ಇದೆ. ಯಾರಾದರೂ ಕಲಂಕವನ್ನು ಗುರುತಿಸುತ್ತಾರೇನು? ಹಿಮಕರ, ಅಮೃತಕರ ಎಂದು ಅವನನ್ನು ಕೊಂಡಾಡುತ್ತಾರೆ. ಚಂದ್ರನನ್ನು ಯಾರೂ ಕಲಂಕಿ ಎಂದು ತೆಗಳುವುದಿಲ್ಲ.
'ಇಂದೋಃ ಕಿರಣೇಷು ಅಂಕಃ ಇವ' - ಇಂದುವಿನ, ಚಂದ್ರನ ಅಸಂಖ್ಯ ಕಿರಣಗಳ ಮಧ್ಯೆ ಕಲಂಕ ಮುಚ್ಚಿಹೋಗುವ ಹಾಗೆ, ವ್ಯಕ್ತವಾಗದ ಹಾಗೆ, ಗುಣರಾಶಿಯ ಮಧ್ಯೆ ಒಂದು ದೋಷ ಇದ್ದರೆ ಅದು ವ್ಯಕ್ತವಾಗುವುದಿಲ್ಲ. ಅದನ್ನು ಪರಿಗಣಿಸಬೇಕಾಗಿಲ್ಲ. ಬಾಹುಲ್ಯದಿಂದ ವ್ಯವಹಾರ ಮಾಡಬೇಕು.
ನಿಮ್ಮ ಮನೆತನದಲ್ಲಿ ಯಾರೋ ಒಬ್ಬ, ಯಾವುದೋ ಒಂದು ವಿಷಯದಲ್ಲಿ ತಪ್ಪು ಮಾಡಿದರೆ ಆ ಒಂದು ತಪ್ಪಿಗಾಗಿ ಆ ಇಡೀ ಮನೆತನವನ್ನೇ ದೂಷಿಸಬೇಕಿಲ್ಲ. ಅವರ ಬಗೆಗೆ ನಮ್ಮ ಅಭಿಪ್ರಾಯ ಕೆಡಿಸಿಕೊಳ್ಳಬೇಕಿಲ್ಲ.
'ನ ನಿರ್ದೋಷಂ | ನ ನಿರ್ಗುಣಂ |' - ಭೂಮಿಯಲ್ಲಿ ದೋಷರಹಿತ ವಸ್ತುವಿಲ್ಲ. ಹಾಗೇ, ಗುಣರಹಿತ ವಸ್ತುವೂ ಇಲ್ಲ. ಇದು ಭೂಮಿಯಾದ್ದರಿಂದ ದೋಷ-ಗುಣಗಳು ಆಜುಬಾಜಿಗೆ ಇರುತ್ತವೆ.
ಆದ್ದರಿಂದ ತಪ್ಪು-ಒಪ್ಪುಗಳಿಗೆ ಒಪ್ಪುವ ತಿರಸ್ಕಾರ-ಪುರಸ್ಕಾರ ಎಂದೆಂದೂ ಎಲ್ಲರದಾಗಿರಲಿ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
1 comment:
ಸರ್ವ ಬಣ್ಣವನ್ನೂ ಮಸಿ ನುಂಗಿತ್ತು ಅನ್ನೋ ಗಾದೆ ಇದ್ಯಲ್ಲ!
Post a Comment