ಸಮುದ್ರ ಮಥನ 21:
ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ
ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ
ಇಂದು ದೇವಾಲಯದ ವಿನಿಯೋಗಕ್ಕೆ ಬೇಕಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಗೋಮಯಗಳನ್ನು ಹೋಟೆಲುಗಳಲ್ಲಿ ಪದಾರ್ಥಗಳನ್ನು ತಯಾರಿಸಲು ಕೊಂಡು ತರುವಂತೆ ತಂದು ಬಳಸುತ್ತಿದ್ದೇವೆ. ಎಲ್ಲಿ ಭಾವನೆಯೇ ಎಲ್ಲವೂ ಆಗಿದೆಯೋ ಅಲ್ಲಿಯೇ ಹೀಗಾಗುತ್ತಿರುವುದು ಬಹಳ ಬೇಸರವನ್ನು ಉಂಟುಮಾಡುತ್ತಿದೆ.
ನಮ್ಮ ಸಂಸ್ಕೃತಿ ಗೋವು-ಗೋಶಾಲೆ ಮತ್ತು ದೇವರು-ದೇವಸ್ಥಾನಗಳ ಸಂಬಂಧದ ಬಂಧವನ್ನು ಗಟ್ಟಿಯಾಗಿ ಪ್ರತಿಪಾದಿಸಿದೆ.
ದೇವಾಲಯದ ಶುದ್ಧಿಗೆ ಗೋಮೂತ್ರ, ಗೋಮಯಗಳನ್ನು ಒಳಗೊಂಡ ಪಂಚಗವ್ಯವನ್ನು ಬಳಸಲು ಪರಂಪರಾಗತ ನಿರ್ದೇಶನ ಇದೆ.
ದೇವರಿಗೆ ಪಂಚಾಮೃತ ಅಭಿಷೇಕ ಹಾಲು, ಮೊಸರು, ತುಪ್ಪ ಇಲ್ಲದೇ ನಡೆಯದು.
ನಂದಾದೀಪವನ್ನು ಬೆಳಗಲು, ಹೋಮ-ಹವನಾದಿಗಳನ್ನು ಸಾಂಗವಾಗಿ ನೆರವೇರಿಸಲು ತುಪ್ಪದ ಪಾತ್ರ ಅನಿವಾರ್ಯ.
ಪ್ರಸಾದ ರೂಪದ ಭಕ್ಷ್ಯ-ಭೋಜ್ಯಾದಿಗಳ ತಯಾರಿಗೆ ಹಾಲು, ತುಪ್ಪ ಬೇಕೇಬೇಕು. ಇಷ್ಟಲ್ಲದೇ, ಹಲವೆಡೆಗಳಲ್ಲಿ ಅಲಂಕಾರಕ್ಕೂ ಬೆಣ್ಣೆ ಬೇಕು.
ದೇವರು-ದೇವಾಲಯಗಳು ಭಕ್ತಿ-ಭಾವಗಳಿಗೆ ಸಂಬಂಧಿಸಿದ ವಿಷಯಗಳು. ಅಲ್ಲಿ ಎಲ್ಲೇ ವ್ಯತ್ಯಯ ಆದರೂ ಮನಸ್ಸಿಗೆ ಒಪ್ಪಿಗೆ-ಸಮಾಧಾನಗಳನ್ನು ತರುವುದಿಲ್ಲ. ಹಾಗಿದ್ದರೂ, ಇಂದು ದೇವಾಲಯದ ವಿನಿಯೋಗಕ್ಕೆ ಬೇಕಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಗೋಮಯಗಳನ್ನು ಹೋಟೆಲುಗಳಲ್ಲಿ ಪದಾರ್ಥಗಳನ್ನು ತಯಾರಿಸಲು ಕೊಂಡು ತರುವಂತೆ ತಂದು ಬಳಸುತ್ತಿದ್ದೇವೆ.
ಎಲ್ಲಿ ಭಾವನೆಯೇ ಎಲ್ಲವೂ ಆಗಿದೆಯೋ ಅಲ್ಲಿಯೇ ಹೀಗಾಗುತ್ತಿರುವುದು ಬಹಳ ಬೇಸರವನ್ನು ಉಂಟುಮಾಡುತ್ತಿದೆ.
ಎಲ್ಲಿ ಭಾವನೆಯೇ ಎಲ್ಲವೂ ಆಗಿದೆಯೋ ಅಲ್ಲಿಯೇ ಹೀಗಾಗುತ್ತಿರುವುದು ಬಹಳ ಬೇಸರವನ್ನು ಉಂಟುಮಾಡುತ್ತಿದೆ.
ಆದ್ದರಿಂದ ಬಂದ ಭಕ್ತಾದಿಗಳಿಗೆ ಊಟ, ಉಪಚಾರ, ವಸತಿ ಮೊದಲಾದ ವ್ಯವಸ್ಥೆಗಳನ್ನು ಮಾಡಿಕೊಟ್ಟು ಧನ್ಯತೆಯನ್ನು ಭಾವಿಸುವ ದೇವಾಲಯಗಳ ಆಡಳಿತ ಮಂಡಳಿಗಳು ಈ ಬಗ್ಗೆಯೂ ಗಮನ ಹರಿಸುವುದು ಅತ್ಯಗತ್ಯ. ಏಕೆಂದರೆ, ದೇವಾಲಯ ಸ್ಥಾಪನೆಯ ಮೂಲ ಆಶಯ ಭಕ್ತಿ-ಭಾವದ ಹಾರ್ದಿಕ ಧರ್ಮವನ್ನು ಜನರಲ್ಲಿ ಬಿತ್ತುವುದಾಗಿದೆ. ದೇವಾಲಯದ ದ್ವಾರದಲ್ಲಿ ಗೋಶಾಲೆಯ ಸ್ಥಾಪನೆ ಈ ಧರ್ಮವನ್ನು ಅತಿಶಯವಾಗಿ ತುಂಬಿಕೊಡುತ್ತದೆ.
ಚಿಗುರೊಡೆದ ಸದ್ಭಾವನೆ ಹೆಮ್ಮರವಾಗಿ ಬೆಳೆಯಲೆಂದು ಆಶಿಸುತ್ತೇವೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀರಾಮಚಂದ್ರಾಪುರಮಠ
No comments:
Post a Comment