Wednesday, February 18, 2009

Bagalur Navodaya Vidyalaya brings Laurels to N.C.C.

Bagalur Navodaya Vidyalaya

 brings Laurels to N.C.C.


BANGALORE: Jawahar Navodaya Vidyalaya, Bagalur, Bangalore Urban District has bagged “THE BEST INSTITUTION TROPHY” of Karnataka and Goa Directorate in Junior Division N.C.C Category for the year 2007-2008. 

Deputy Director General of Karnataka and Goa N.C.C Directorate Air Commodore V.Babu gave away the “THE BEST INSTITUTION TROPHY” to Smt. R.Anuradha, Principal of JNV,  in the Felicitation Ceremony for N.C.C. Cadets and N.C.C. Officers who rendered remarkable service to N.C.C. at B.E.L. Auditorium Bangalore recently.

 M.N.Aswathnarayanan, Associate N.C.C Officer of this Vidyalaya has been awarded the Chief Minister’s Commendation Card of Karnataka State for his exceptional dedication to duty and setting an example to others in the N.C.C organization by Air Commodore V.Babu. Col. Ravi Tokas, Commanding Officer, 9 Karnataka Bn. N.C.C Unit, Bangalore gave the best institution award to him.

CSM Anendalakshmi of Class-X of this Institution has been awarded N.C.C Director General Commendation Card for her meritorious service to N.C.C whereas Cpl. Prerana.K of Class-X of this Institution received the Chief Minister’s Commendation Card of Karnataka State for her outstanding performance in N.C.C. 

Both these N.C.C Cadets represented Karnataka and Goa N.C.C Directorate in the Republic Day Camp held at New Delhi in the year 2008 and performed well in all the Competitions.


ಬಾಗಲೂರು ನವೋದಯ ಶಾಲೆಗೆ

ಎನ್ ಸಿ ಸಿ ಪಾರಿತೋಷಕ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನ ಜವಾಹರ ನವೋದಯ ವಿದ್ಯಾಲಯವು 2007-2008ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯದ ಕಿರಿಯರ ವಿಭಾಗದಲ್ಲಿ 'ಅತ್ಯುತ್ತಮ ಶಿಕ್ಷಣ ಸಂಸ್ಥೆ' ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಬೆಂಗಳೂರಿನ ಬಿಇಎಲ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಸಾಧನೆಗೈದ ಎನ್ ಸಿ ಸಿ ಕೆಡೆಟ್ ಗಳು ಮತ್ತು ಎನ್ ಸಿ ಸಿ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕರಾದ ಏರ್ ಕಮಾಂಡರ್ ವಿ. ಬಾಬು ಅವರು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಆರ್. ಅನುರಾಧಾ ಅವರಿಗೆ 'ಉತ್ತಮ ಶಿಕ್ಷಣ ಸಂಸ್ಥೆ' ಪಾರಿತೋಷಕವನ್ನು ನೀಡಿದರು.

ಬೆಂಗಳೂರಿನ 9ನೇ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ರವಿ ಟೋಕಾಸ್ ಅವರು ಶಾಲೆಯ ಎನ್ ಸಿ ಸಿ ಅಧಿಕಾರಿ ಅಶ್ವಥ್ ನಾರಾಯಣ್ ಅವರಿಗೆ 'ಅತ್ಯುತ್ತಮ ಸಂಸ್ಥೆ' ಪ್ರಶಸ್ತಿಯನ್ನೂ, ವಿ. ಬಾಬು ಅವರು ದಕ್ಷ ಸೇವೆಗಾಗಿ ಮುಖ್ಯಮಂತ್ರಿಗಳ ಪ್ರಶಂಸಾ ಪತ್ರವನ್ನೂ ನೀಡಿದರು. 

ಎನ್ ಸಿ ಸಿ ಕ್ಷೇತ್ರದಲ್ಲಿ ಮಾಡಿದ ಶ್ಲಾಘನೀಯ ಕಾರ್ಯಕ್ಕಾಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಸಿ.ಎಸ್.ಎಂ. ಆನಂದಲಕ್ಷ್ಮಿ, ಮತ್ತು ಪ್ರೇರಣಾ ಕೆ. ಅವರಿಗೂ ಪ್ರಶಸ್ತಿ ನೀಡಲಾಯಿತು. ಈ ಇಬ್ಬರೂ ಎನ್ ಸಿ ಸಿ ಕೆಡೆಟ್ ಗಳು ನವದೆಹಲಿಯಲ್ಲಿ 2008ರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡದ್ದಲ್ಲದೆ ಎಲ್ಲ ಸ್ಪರ್ಧೆಗಳಲ್ಲೂ ಉತ್ತಮ ಸಾಧನೆ ಮೆರೆದಿದ್ದರು.

No comments:

Advertisement