ನಾನೇ ಚೆಲುವಿನ ರಾಣಿ..!
ಅಂತಾರಾಷ್ಟ್ರೀಯ ಕ್ಯಾನೆ ಚಿತ್ರೋತ್ಸವದಲ್ಲಿ 2003ರ ಬಳಿಕ ತೀರ್ಪುಗಾರರಾಗಿ ಭಾಗವಹಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಕನ್ನಡತಿ- ತುಳುವೆತ್ತಿ ಐಶ್ವರ್ಯ ರೈ ಬಚ್ಚನ್.
2009ರ ಮೇ 14ರಂದು ಚಿತ್ರೋತ್ಸವದಲ್ಲಿ ಈ ಚೆಲುವೆ ಮಿಂಚಿದ್ದೇ ಮಿಂಚಿದ್ದು.
ಬಳ್ಳಿಯಿಂದ ಆಗತಾನೇ ಬಿಡಿಸಿದ ಬಿಳಿ ಹೂವೊಂದು ಚಿತ್ರೋತ್ಸವದಲ್ಲಿ ನಡೆದಾಡಿತು. ಚೆಲುವೆಲ್ಲ ತನ್ನದೆಂದು ಸಂಭ್ರಮಿಸಿತು ಎಂದು ಈಕೆಯ ಚೆಲುವನ್ನು ಮಾಧ್ಯಮಗಳು ಬಣ್ಣಿಸಿದವು..
ಉತ್ಸವದ ಆರಂಭಿಕ ಚಿತ್ರ 'ಅಪ್' ನ ಪ್ರೀಮಿಯರ್ ಪ್ರದರ್ಶನದಲ್ಲಿ ಪಾಲ್ಗೊಂಡ ಈಕೆ ತೋಳ್ಲಿಲದ ಬಿಳಿ ಗೌನ್ (ರೊಬೆರ್ಟೊ ಕವಲ್ಲಿ) ತೊಟ್ಟು ವಿಶ್ವದ ಗಮನ ಸೆಳೆದ ಪರಿ ಇದು.
ಪಾದಗಳನ್ನು ಮರೆಮಾಚಿ ನೆಲವನ್ನು ಸಾರಿಸುತ್ತಿದ್ದ ನೀಳ ಗೌನ್, ಮುತ್ತಿನ ಓಲೆ, ಬಳೆಗಳು, ಎಡಕ್ಕೆ ಬಾಚಿದ ಮುಂಗುರುಳು, ಕೈಯ್ಲಲೊಂದು ಪುಟ್ಟ ಪೆಟ್ಟಿಗೆ ಹಿಡಿದು ಓಡಾಡುತ್ತಿದ್ದ ಈ ಸೌಂದರ್ಯ ರಾಣಿ ಛಾಯಾಗ್ರಾಹಕರೆದುರು ನಿಂತು ಹಾಯ್ ಎಂದು ಕೈ ಆಡಿಸಿದಾಗ..
ಇಬ್ಬಿಬ್ಬರನ್ನು ಕಂಡಂತಾಯಿತೇ...????
No comments:
Post a Comment