Thursday, June 18, 2009

ಸಮುದ್ರ ಮಥನ 30: ಪ್ರೇಮ ತತ್ತ್ವದ ರಾಷ್ಟ್ರ ಕಟ್ಟಲು....

ಸಮುದ್ರ ಮಥನ 30:

ಪ್ರೇಮ ತತ್ತ್ವದ ರಾಷ್ಟ್ರ ಕಟ್ಟಲು....


ಈ ಮಾತುಗಳು ಗೋವನ್ನು ಆಧರಿಸಿ ನೆಮ್ಮದಿಯ ನಾಡನ್ನು ಕಟ್ಟಲು ಹೊರಟ ನಮಗೆ ಸಹಜತೆಯ ದರ್ಶನ ಮಾಡಿಸುತ್ತದೆ. ನಮಗೆಲ್ಲ ಬದುಕುವ ಹಕ್ಕು ಹೇಗಿದೆಯೋ, ಅಂತೆಯೇ ಗೋವಿಗೆ, ಉಳಿದ ಪಶು-ಪಕ್ಷಿ-ಪ್ರಾಣಿಗಳಿಗೆ ಬದುಕಿ-ಬಾಳುವ ಹಕ್ಕಿದೆ ಎಂಬುದನ್ನು ಎತ್ತಿ ಹಿಡಿಯುತ್ತದೆ.

ಬದುಕಿನ ನೆಮ್ಮದಿಗೆ, ಸುಂದರ ರಾಷ್ಟ್ರ ನಿರ್ಮಾಣಕ್ಕೆ ಪ್ರೀತಿ ಬೇಕು. ಆ ಪ್ರೀತಿ ಪ್ರೇಮವೆಂಬ ಲಾಭದ ಹೊರತಾಗಿ ಮತ್ತೇನನ್ನೂ ಬಯಸಬಾರದು - ಇದು ನಮ್ಮೆಲ್ಲರ ಮಧುರ ಜೀವ-
ಭಾವ ಪೋಷಣೆಗೆ ರೂಪುಗೊಂಡ ಆದರ್ಶ.

ಅದು ಕೇವಲ ರಕ್ಷಣೆಗಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು. ಏಕೆಂದರೆ, ಅದನ್ನು ಕಳೆದುಕೊಳ್ಳುತ್ತೇವೆಂಬ ಹೆದರಿಕೆ ಇಲ್ಲ. ಬದಲಾಗಿ, ಅದರ ದೃಢತೆಯಲ್ಲಿಯೇ ಬಾಳ್ವೆ ಇದೆಯೆಂಬ ದರ್ಶನ ಇದೆ.

ಅದನ್ನೇ ದೂರದ ನಾಡಿನ ದಾರ್ಶನಿಕನೊಬ್ಬ ಸುಂದರವಾಗಿ, ಮನ ಮಿಡಿಸುವ ರೀತಿಯಲ್ಲಿ ಬಿಚ್ಚಿಡುತ್ತಾನೆ.

"ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ / ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು ಅವು / ಅವು ನಿಮ್ಮ ಮೂಲಕ ಬಂದಿವೆಯೇ ಹೊರತು ನಿಮ್ಮಿಂದಲ್ಲ / ನಿಮ್ಮ ಜತೆ ಅವು ಇರುವುದಾದರೂ ನಿಮಗೆ ಸೇರಿದ್ದಲ್ಲ / ನಿಮ್ಮ ಪ್ರೀತಿಯನ್ನು ನೀವು ಅವುಗಳಿಗೆ ನೀಡಬಹುದು / ಆದರೆ ನಿಮ್ಮ ಆಲೋಚನೆಗಳನ್ನಲ್ಲ / ಏಕೆಂದರೆ ಅವರಿಗೆ ಅವರದೇ ಸ್ವಂತ ಆಲೋಚನೆಗಳುಂಟು / ಅವರ ದೇಹಗಳಿಗೆ ನೀನು ಮನೆಯಾಗಿರಬಹುದೇ ಹೊರತು ಆತ್ಮಗಳಿಗಲ್ಲ / ಏಕೆಂದರೆ ಅವರ ಆತ್ಮಗಳು ನಾಳೆಯ ಮನೆಯಲ್ಲಿ ನೆಲೆಸುತ್ತವೆ / ಎಲ್ಲಿಗೆ ನೀವು ಕನಸಿನಲ್ಲೂ ಹೋಗಲಾರಿರೋ ಅಲ್ಲಿ ಅವರಂತಿರಲು ನೀವು ಪ್ರಯತ್ನಿಸಬಹುದು / ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ / ಏಕೆಂದರೆ ಜೀವ ಹಿಮ್ಮುಖವಾಗಿ ಹರಿಯುವುದೂ ಇಲ್ಲ / ನಿನ್ನೆಯ ಜತೆ ತಂಗುವುದೂ ಇಲ್ಲ / ನಿಮ್ಮ ಮಕ್ಕಳು, ಜೀವಂತ ಬಾಣಗಳಂತೆ ಚಿಮ್ಮಲು ಇರುವ ಬಿಲ್ಲುಗಳು ನೀವು / ಅನಂತದ ಪಥದ ಮೇಲೆ ತನ್ನ ಗುರಿಯನ್ನು ಬಿಲ್ಲುಗಾರ ಗಮನಿಸುತ್ತಾನೆ / ಅವನ ಶಕ್ತಿಯಿಂದ ನಿಮ್ಮನ್ನು ಬಾಗಿಸುತ್ತಾನೆ, ಅವನ ಬಾಣಗಳು ವೇಗವಾಗಿ ಬಹುದೂರ ಹೋಗುವಂತೆ / ಆ ಬಿಲ್ಲುಗಾರನ ಕೈಯಲ್ಲಿ ನಿಮ್ಮ ಬಾಗುವಿಕೆ ಸಂತಸಮಯವಾಗಿರಲಿ / ಏಕೆಂದರೆ ಹಾರುವ ಅಂಬನ್ನು ಅವನು ಪ್ರೀತಿಸಿದಂತೆಯೇ ದೃಢವಾದ ಬಿಲ್ಲನ್ನೂ ಆತ ಪ್ರೀತಿಸುತ್ತಾನೆ /"

ಈ ಮಾತುಗಳು ಗೋವನ್ನು ಆಧರಿಸಿ ನೆಮ್ಮದಿಯ ನಾಡನ್ನು ಕಟ್ಟಲು ಹೊರಟ ನಮಗೆ ಸಹಜತೆಯ ದರ್ಶನ ಮಾಡಿಸುತ್ತದೆ. ನಮಗೆಲ್ಲ ಬದುಕುವ ಹಕ್ಕು ಹೇಗಿದೆಯೋ, ಅಂತೆಯೇ ಗೋವಿಗೆ, ಉಳಿದ ಪಶು-ಪಕ್ಷಿ-ಪ್ರಾಣಿಗಳಿಗೆ ಬದುಕಿ-ಬಾಳುವ ಹಕ್ಕಿದೆ ಎಂಬುದನ್ನು ಎತ್ತಿ ಹಿಡಿಯುತ್ತದೆ. ಅದನ್ನು ಸಾದ್ಯಂತವಾಗಿ ಭಾವಿಸಲು ಈ ನೋಟ ಸ್ಫೂರ್ತಿ ಕೊಡುತ್ತದೆ.

No comments:

Advertisement