Monday, June 8, 2009

ಇವರ ಸಾಧನೆ: ನವೋದಯಕ್ಕೆ ಕಿರೀಟ..!

ಇವರ ಸಾಧನೆ: ನವೋದಯಕ್ಕೆ ಕಿರೀಟ..!


ಬೆಂಗಳೂರು: ಐಐಟಿಗೆ 10 ವಿದ್ಯಾರ್ಥಿಗಳ ಆಯ್ಕೆ, ಎನ್ ಐ ಟಿ ಗೆ 30 ವಿದ್ಯಾರ್ಥಿಗಳ ಆಯ್ಕೆ, ಸಿ ಬಿ ಎಸ್ ಇ 12ನೇ ತರಗತಿಯಲ್ಲಿ ಶೇಕಡಾ 100 ಫಲಿತಾಂಶ ಮತ್ತು ಸಿ ಬಿ ಎಸ್ ಇ 10ನೇ ತರಗತಿಯಲ್ಲಿ ಶೇಕಡಾ 97.4 ಫಲಿತಾಂಶದೊಂದಿಗೆ ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನಲ್ಲಿರುವ ಜವಾಹರ ನವೋದಯ ವಿದ್ಯಾಲಯವು ವಿಶೇಷ ಸಾಧನೆ ಮಾಡಿದೆ.

ಸಿ ಬಿ ಎಸ್ ಇ 10ನೇ ತರಗತಿ ಪರೀಕ್ಷೆಯಲ್ಲಿ ಬ್ರಿಜೇಶ್ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕಗಳ ಜೊತೆಗೆ ಶೇಕಡಾ 97.6 ಅಂಕಗಳನ್ನು ಪಡೆದಿದ್ದಾರೆ. ಈ ತರಗತಿಯ ರಾಹುಲ್ ಪಟ್ಟಡಿ ಗಣಿತ ಮತ್ತು ಸಮಾಜ ವಿಜ್ಞಾನಗಳಲ್ಲಿ ಶೇಕಡಾ 100 ಅಂಕಗಳೊಂದಿಗೆ ಶೇಕಡಾ 94.8 ಅಂಕಗಳನ್ನು ಪಡೆದಿದ್ದಾರೆ. ಇದೇ ತರಗತಿಯ ರಂಜಿತ್ ಎಚ್.ಕೆ. ಸಮಾಜ ವಿಜ್ಞಾನದಲ್ಲಿ ಶೇಕಡಾ 100 ಅಂಕಗಳ ಜೊತೆಗೆ ಶೇಕಡಾ 93.5 ಅಂಕ ಗಳಿಸಿದ್ದಾರೆ. ತರಗತಿಯ ಶೇಕಡಾ 58 ರಷ್ಟು ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿಯಲ್ಲಿ ಹಾಗೂ ಶೇಕಡಾ 86ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶೇಕಡಾ 100 ಫಲಿತಾಂಶ ಸಾಧಿಸಿರುವ ಸಿ ಬಿ ಎಸ್ ಇ 12ನೇ ತರಗತಿಯಲ್ಲಿ ಶೇಕಡಾ 32.5ರಷ್ಟು ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, ಶೇಕಡಾ 95ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ತರಗತಿಯ ಬಸವೇಶ್ ಶೇಕಡಾ 92.2 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಫಲಿತಾಂಶದಲ್ಲಿ ಉತ್ತಮ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನೂ ಅಭಿನಂದಿಸಿರುವ ಶಾಲೆಯ ಪ್ರಾಂಶುಪಾಲರಾದ ಆರ್. ಅನುರಾಧ ಅವರು ಐಐಟಿ ಮತ್ತು ಎಐಇಇಇ ಪರೀಕ್ಷೆಗಾಗಿ ಶಾಲೆಯ 40 ಮಂದಿ ವಿದ್ಯಾರ್ಥಿಗಳು ದಕ್ಷಿಣ ಫೌಂಡೇಶನ್ನಿನಿಂದ ಆಯ್ಕೆಯಾಗಿ ಟೈಮ್ ಸಂಸ್ಥೆಯಿಂದ ಎರಡು ವರ್ಷಗಳ ತರಬೇತಿಯನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.

ಚಿತ್ರಗಳು: 1) ಬ್ರಿಜೇಶ್, ರಾಹುಲ್ ಪಟ್ಟಡಿ ಹಾಗೂ ರಂಜಿತ್ ಎಚ್.ಕೆ. (ಸಿಬಿಎಸ್ ಇ 10ನೇ ತರಗತಿ) ಮತ್ತು
ಬಸವೇಶ್ - ಸಿಬಿಎಸ್ ಇ -12ನೇ ತರಗತಿ.

Navodaya students

with flying colours

Jawahar Navodaya Vidyalaya, Bangalore Urban comes out with flying colours in both CBSE, AIEEE and IIT Exam 2009. 10 out of them were selected for main IIT's. 30 of them got into NIT through AIEEE 2009. 20 out of them are already in exended merit list of IIT. These 40 students were finalized by Dakshina Foundation and two years coaching was provided by TIME INSTITUTE, Bangalore. Moreover, the school produces 100% in calss XII AISSCE 2009 with 32.5% distinction and 95% first divisions. In an Era of competition, and growing Private Institutions. Jawahar Navodaya Vidyalaya, Bangalore is excelling and makes distinguished contributions in the field of education.

The school also prodused 97.4% result in class X CBSE 2009 with 58% distinction and First classes. Master. Brijesh secured 97.6% in class X Exam 2009 and Master. Basavesh of class XII secured 92.2% Master. Rahul Pattadi and Master. Brijesh secured centum Maths and Social Science, Master. Ranjith secured centum in social science.

R.Anuradha, Principal, Jawahar Navodaya Vidyalaya, Bangalore Urban congratulated all the successful Children.

3 comments:

Hussain said...

Namskara,

I'm proud to share infor from my school, JNV Kuknoor a remote place in north karnataka due to the apathy of politicians. but has lot more to show off. 100 % results in 10/12th with 93% in 10th n 93% in 12th being the highest.

Nethrakere Udaya Shankara said...

Congrats Mr. Hussain. PARYAYA wishes all of you the best future.
Nethrakere Udaya Shankara

Hussain said...

A small correction to the article,

All the 40 students are't from the B'lur urban JNV but have been selected thru test from all the districts JNV schools of karnataka and placed in JNV B'lur for the intensive coaching. It's a great innovative and a right way of work by the Dakshina Foundation in collaboration with Times Institute to build the future of Kannada kids.

congrats to one and all , esp to Dakshina.

Advertisement