Sunday, September 13, 2009

ಬನ್ನಿ ಕೆಂಪು ತೋಟಕ್ಕೆ, ಸಾವಯವ ಆಹಾರ ಮೇಳಕ್ಕೆ

ಬನ್ನಿ ಕೆಂಪು ತೋಟಕ್ಕೆ, ಸಾವಯವ ಆಹಾರ ಮೇಳಕ್ಕೆ


Organic-Mela-Poster1

      ವಾಕಿಂಗ್ ಸ್ಪಾಟ್, ಪ್ರೇಮಿಗಳ ತನ, ಸಸ್ಯ ಶಾಸ್ತ್ರೀಯ ತೋಟ ಕೆಂಪು ತೋಟ ಲಾಲ್ ಬಾಗ್ ನಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು 'ಸಾವಯವ ಮೇಳ' ನಡೆಯುತ್ತಿದೆ . ರಾಜ್ಯದ ವಿವಿಧ ಕಡೆಗಳಿಂದ ಸಾವಯವ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಥಿದ್ದಾರೆ .

ಇಲ್ಲಿಯವರೆಗೂ ರೈತರ ಮಟ್ಟದಲ್ಲಿ ನಡೆಯುತ್ತಿದ್ದ ಸಾವಯವ ಕೃಷಿ ಆಂದೋಲನ ಈಗ ಗ್ರಾಹಕರ ಮನೆ ಬಾಗಿಲಿಗಿಗೆ ಬಂದು ನಿಂತಿದೆ. ರೈತರು ಬೆಳೆದ ಉತ್ಪನ್ನಗಳನ್ನು ದಲ್ಲಾಳಿಗಳ ಕಿರಿಯಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಾರ್ಯ ಆರಂಭವಾಗಿದೆ. ಅದರ ಮೊದಲ ಪ್ರಯತ್ನವೇ ಸಾವಯವ ಆಹಾರ ಮೇಳ.

ಈ  ಮೇಳವನ್ನು  ಕೇವಲ ವಾಣಿಜ್ಯ ದೃಷ್ಟಿಯಿಂದ ಆಯೋಜಿಸಿಲ್ಲ. ಸತ್ವ ಪೂರ್ಣ ಆಹಾರ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಕಳೆದು ಹೋಗಿರುವ , ಮರೆತು ಹೋಗಿರುವ ಸಾಂಪ್ರದಾಯಿಕ ಆಹಾರವನ್ನು ಪರಿಚಯಿಸುವುದು ಅವುಗಳ ರುಚಿಯನ್ನು ಉಣಬಡಿಸುವುದು ಈ ಮೇಳದ ಉದ್ದೇಶ.


ಹಾಗಾಗಿ ಮೆಅಲಕ್ಕೆ ಭೇಟಿ ನೀಡುವವರಿಗೆ ಮಾಹಿತಿ, ಮನರಂಜನೆ ಹಾಗೂ ರುಚಿಕಟ್ಟಾದ ದೇಸಿ ಆಹಾರ ಕೂಡ ಲಭ್ಯವಾಗುತ್ತದೆ. ಜೊತೆಗೆ ತರಕಾರಿ ಬೀಜಗಳು (ನಾಟಿ), ತಾಜಾ ತರಕಾರಿಗಳು. ಸಾವಯವ ಆಹಾರ ಉತ್ಪನ್ನ, ಕೃಷಿ ಪುಸ್ತಕಗಳು, ತೋಟಗಾರಿಕೆ ಮಾಹಿತಿ ಬಿತ್ತಿ ಪತ್ರಗಳು.. ಇವೆಲ್ಲದರ ಜೊತೆಗೆ ಸಾವಯವ ಪ್ರೀತಿಯ ಗೆಳೆಯರನ್ನು ಭೇಟಿಯಾಗಬಹುದು.

ಬನ್ನಿ ಕೆಂಪು ತೋಟಕ್ಕೆ, ಭಾಗವಹಿಸಿ ಸಾವಯವ ಆಹಾರ ಮೇಳದಲ್ಲಿ. ಉತ್ತೇಜಿಸಿ ಸಾವಯವ ಉತ್ಪನ್ನಗಳನ್ನು !

- ಜೈವಿಕ್ ಕೃಷಿಕ್  ಸೊಸೈಟಿ ,
ಸಹಜ ಸಮೃದ್ಧ , ಅನ್ನದಾನದ ಪರವಾಗಿ....

ಗಾಣಧಾಳು ಶ್ರೀಕಂಠ  

No comments:

Advertisement