Tuesday, September 7, 2010

Lokayukta sends notice to MLA Srinivas

Lokayukta Notice 


to MLA Srinivas
Bangalore: Lokayukta sends notice to Raja Rajeshwari Nagar MLA Mr. M. Srinivas for disrupting BBMP from executing a court order, following the complaints from site owners of Sachidanda Nagar.

Sachidananda Nagar Site Owners have filed three complaints with the Lokayukta (Compt/Lok/BCD-312, 313 and 314/ 2010) against Mr. M. Srinivas. MLA,  Rajarajeshwari Nagar Constituency  for his unlawful use of power and privilege.

Though Lokayukta has directed the BBMP Rajarajeshwari Nagar Zone to issue Khatas to Site owners in Sachidananda Nagar, in accordance with the Civil Court Order O.S. 2355/2001, the local MLA has written a letter (see attached un-solicited letter) to the BBMP Additional Commissioner to stop issuing Khatas thereby mis-using his privilege and power of his position. BBMP Additional Commissioner Mr. Ramachandra, who was supposed to execute the court order since March 2010, keeps delaying the Khata registration with frivolous reasons such as MLAs letter. This kind of delaying tactics has been going on for more than 5 years.

The complainants have requested Lokayukta to intervene and take suitable action against the MLA for his meddling in BBMP functions and causing obstruction to BBMP officials from performing their duties and serving the citizens of Bangalore.

In the mean time, the complainants suspect a conspiracy between the MLA, the office bearers of  the local Resident Welfare Association  of the layout, and the BBMP officials and have uncovered more facts thru RTI, and plan to disclose this information in the next few days.


ಶಾಸಕ ಶ್ರೀನಿವಾಸ್‌ಗೆ ಲೋಕಾಯುಕ್ತ ನೋಟಿಸ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ಸ್ಥಿರಾಸ್ತಿಗೆ ಖಾತೆ ನೀಡುವ ವಿಷಯದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ನ್ಯಾಯಾಲಯ ಆದೇಶ ಪಾಲನೆ ಮಾಡದಂತೆ ಅಡ್ಡಿಪಡಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

 ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಸಚ್ಚಿದಾನಂದನಗರದ ನಿವೇಶನಗಳ ಮಾಲೀಕರಿಗೆ ಖಾತೆ ನೋಂದಣಿ ಮಾಡಿಕೊಡುವಂತೆ ಸಿವಿಲ್ ನ್ಯಾಯಾಲಯ 2005ರಲ್ಲಿ ಬಿಬಿಎಂಪಿಗೆ (ಹಿಂದಿನ ನಗರಸಭೆ) ಆದೇಶ ನೀಡಿತ್ತು. ಆದರೆ ಸುದೀರ್ಘ ಸಮಯ ಪಾಲಿಕೆ ಅಧಿಕಾರಿಗಳು ಈ ಸಂಬಂಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಕುರಿತು ನಿವೇಶನ ಮಾಲೀಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರಿಗೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತರು, ತಕ್ಷಣವೇ ನ್ಯಾಯಾಲಯದ ಆದೇಶ ಪಾಲನೆ ಮಾಡಿ, ನಿವೇಶನ ಮಾಲೀಕರಿಗೆ ಖಾತೆ ನೀಡುವಂತೆ ನಿರ್ದೇಶಿಸಿದ್ದರು. ಈ ಸಂಬಂಧ ಪಾಲಿಕೆ ರಾಜರಾಜೇಶ್ವರಿನಗರ ವಲಯ ಹೆಚ್ಚುವರಿ ಆಯುಕ್ತರು ಪ್ರಕ್ರಿಯೆಯನ್ನೂ ಆರಂಭಿಸಿದ್ದರು. ಆದರೆ ಜುಲೈ 19ರಂದು ಹೆಚ್ಚುವರಿ ಆಯುಕ್ತರಿಗೆ ಪತ್ರ ಬರೆದಿರುವ ಶಾಸಕ ಎಂ.ಶ್ರೀನಿವಾಸ್, ಖಾತೆ ನೀಡುವ ಪ್ರಕ್ರಿಯೆ ಮುಂದುವರಿಸದಂತೆ ಸೂಚನೆ ನೀಡಿದ್ದರು.

ಶಾಸಕರ ಪತ್ರ ಬರುತ್ತಿದ್ದಂತೆ ಹೆಚ್ಚುವರಿ ಆಯುಕ್ತರು ನ್ಯಾಯಾಲಯದ ಆದೇಶ ಪಾಲನೆ ಪ್ರಕ್ರಿಯೆಯನ್ನೇ ಕೈಬಿಟ್ಟಿದ್ದರು. ಈ ಕುರಿತು ನಿವೇಶನ ಮಾಲೀಕರು ಸ್ಥಳೀಯ ಶಾಸಕರ ವಿರುದ್ಧ ಲೋಕಾಯುಕ್ತರಿಗೆ ಮೂರು ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.
‘ಶಾಸಕರು ತಮ್ಮ ಅಧಿಕಾರ ಮತ್ತು ವಿಶೇಷ ಸ್ಥಾನಮಾನವನ್ನು ನ್ಯಾಯಾಲಯದ ಆದೇಶ ಪಾಲನೆ ವಿರುದ್ಧವೇ ಬಳಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶ ಪಾಲಿಸದಂತೆ ಪತ್ರ ಬರೆಯುವ ಮೂಲಕ ಶ್ರೀನಿವಾಸ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ನಿವೇಶನ ಮಾಲೀಕರು ಮನವಿ ಮಾಡಿದ್ದರು.

ಹಿಂದಿನ ಪ್ರಕರಣದಲ್ಲಿ ಲೋಕಾಯುಕ್ತರು ನೀಡಿದ್ದ ನಿರ್ದೇಶನದಂತೆ ನಿವೇಶನ ಮಾಲೀಕರಿಗೆ ಖಾತೆ ನೀಡುವ ಪ್ರಕ್ರಿಯೆ 2010ರ ಮಾರ್ಚ್‌ನಿಂದ ಆರಂಭವಾಗಬೇಕಿತ್ತು. ಆದರೆ ಶಾಸಕರ ಪತ್ರದಂತಹ ವಿಷಯಗಳನ್ನು ಮುಂದಿಟ್ಟು ಅಧಿಕಾರಿಗಳು ಖಾತೆ ನೀಡುತ್ತಿಲ್ಲ. ಈ ಪ್ರಕರಣದಲ್ಲಿ ಶಾಸಕರು, ಸ್ಥಳೀಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಒಗ್ಗೂಡಿ ನಿವೇಶನ ಮಾಲೀಕರ ವಿರುದ್ಧ ಸಂಚು ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಿವೇಶನ ಮಾಲೀಕರು ನೀಡಿರುವ ದೂರುಗಳ ವಿಚಾರಣೆ ಆರಂಭಿಸಿರುವ ಲೋಕಾಯುಕ್ತರು, ಆರೋಪಗಳ ಬಗ್ಗೆ ವಿವರಣೆ ನೀಡುವಂತೆ ಶಾಸಕ ಎಂ.ಶ್ರೀನಿವಾಸ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಹಸ್ತಕ್ಷೇಪ ಮಾಡಿರುವ ಸಂಬಂಧ ಶಾಸಕರು ಸೆ. 18ರ ಒಳಗೆ ಉತ್ತರ ನೀಡಬೇಕಿದೆ.

No comments:

Advertisement