Friday, November 15, 2019

ರಫೇಲ್ ಹಗರಣ ತನಿಖೆಗೆ ಮತ್ತೆ ರಾಹುಲ್ ಗಾಂಧಿ ಆಗ್ರಹ

ರಫೇಲ್ ಹಗರಣ ತನಿಖೆಗೆ ಮತ್ತೆ ರಾಹುಲ್ ಗಾಂಧಿ ಆಗ್ರಹ
ನವದೆಹಲಿ:  ರಫೇಲ್ ವ್ಯವಹಾರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಆಗ್ರಹಿಸಿದ್ದಾರೆ.

ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆಮಹಾದ್ವಾರವನ್ನುತೆರೆದಿದ್ದಾರೆಎಂದು ಹೇಳಿದ್ದಾರೆ.

ಫ್ರಾನ್ಸಿನ ಡಸಾಲ್ಟ್ ಏವಿಯೇಶನ್ ಕಂಪೆನಿಯಿಂದ ೩೬ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದ ವಹಿವಾಟಿನ ಬಗ್ಗೆ ತನಿಖೆಗಾಗಿ ಎಫ್ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ಕೋರಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬಳಿಕ ಕಾಂಗ್ರೆಸ್ ನಾಯಕ ಆಗ್ರಹ ಮಾಡಿದರು.

೩೬ ಯುದ್ಧ ರಫೇಲ್ ವಿಮಾನಗಳ ಖರೀದಿ ಪ್ರಕ್ರಿಯೆಯ ನಿರ್ಣಯಕ್ಕೆ ಸಂಬಂಧಿಸಿಂತೆ ಸಂಶಯ ಪಡುವಂತಹುದೇನೂ ಇಲ್ಲ ಎಂಬುದಾಗಿ ೨೦೧೮ ಡಿಸೆಂಬರ್ ೧೪ರಂದು ನೀಡಿದ್ದ ತನ್ನ ತೀರ್ಪಿನ ಪುನರ್ ಪರಿಶೀಲನೆ ಕೋರಿ ದಾಖಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇದಕ್ಕೆ ಮುನ್ನ ವಜಾಗೊಳಿಸಿತ್ತು.

ಪುನರ್ ಪರಿಶೀಲನೆ ಅರ್ಜಿಗಳಲ್ಲಿ ಯಾವುದೇ ಅರ್ಹತೆ ನಮಗೆ ಕಾಣುತ್ತಿಲ್ಲಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರ ಪೀಠ ಹೇಳಿತ್ತು.

ಆಪಾದನೆಗಳಿಗೆ ಸಂಬಂಧಿಸಿದಂತೆಸಂಚಾರೀ ತನಿಖೆಗೆ ಆದೇಶ ನೀಡಬೇಕಾದ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಮೂರ್ತಿಗಳು ಬಂದಿದ್ದಾರೆ ಎಂದು ತೀರ್ಪನ್ನು ಓದುತ್ತಾ ನ್ಯಾಯಮೂರ್ತಿ ಕೌಲ್ ಹೇಳಿದ್ದರು.

ಪ್ರತ್ಯೇಕ ತೀರ್ಪು ನೀಡಿದ ನ್ಯಾಯಮೂರ್ತಿ ಜೋಸೆಫ್ ಅವರು, ತಾವು ಕಾರಣ ಕೊಟ್ಟಿರುವ ಕೆಲವು ಅಂಶಗಳಿಗೆ ಒಳಪಟ್ಟು ಮುಖ್ಯ ತೀರ್ಪನ್ನು ತಾವು ಒಪ್ಪಿರುವುದಾಗಿ ಹೇಳಿದ್ದರು.

ನ್ಯಾಯಮೂರ್ತಿ ಜೋಸೆಫ್ ಅವರು ರಫೇಲ್ ಹಗರಣದ ತನಿಖೆಗೆ ಮಹಾದ್ವಾರವನ್ನೇ ತೆರೆದಿದ್ದಾರೆ. ಈಗ ಆದಷ್ಟೂ ಬೇಗ ತನಿಖೆ ಆರಂಭವಾಗಲೇಬೇಕು. ಹಗರಣದ ತನಿಖೆಗಾಗಿ ಜಂಟಿ ತನಿಖಾ ಸಮಿತಿಯನ್ನೂ ರಚಿಸಬೇಕುಎಂದು ರಾಹುಲ್ ಗಾಂಧಿಯವರುಬಿಜೆಪಿ ಲೈಸ್ ಆನ್ ರಫೇಲ್ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದರು. ಅದಕ್ಕೆ ನ್ಯಾಯಮೂರ್ತಿ ಜೋಸೆಫ್ ಅವರ ಪ್ರತ್ಯೇಕ ತೀರ್ಪಿನ ಆಯ್ದ ಭಾಗಗಳನ್ನೂ ರಾಹುಲ್ ಜೋಡಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ಸಿನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಅವರು, ’ಬಿಜೆಪಿಯು ಸಂಭ್ರಮಾಚರಣೆಯನ್ನು ನಿಲ್ಲಿಸಬೇಕು ಮತ್ತು ಕೋರ್ಟ್ ನಿರ್ಣಯವು ರಫೇಲ್ ವ್ಯವಹಾರದ ತನಿಖೆಗೆ ದಾರಿ ಮಾಡಿರುವುದರಿಂದ ತನಿಖೆ ನಡೆಸುವತ್ತ ಗಮನ ಹರಿಸಬೇಕುಎಂದು ಆಗ್ರಹಿಸಿದರು.

ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಹೇಳಿದರು.

No comments:

Advertisement