Tuesday, November 12, 2019

ಪ್ರದಾನಿ ಮೋದಿಗೆ ’ಚೇಳು ಹೋಲಿಕೆ: ಶಶಿ ತರೂರ್ ವಿರುದ್ಧ ವಾರಂಟ್

ಪ್ರದಾನಿ ಮೋದಿಗೆಚೇಳು ಹೋಲಿಕೆ:
  ಶಶಿ ತರೂರ್ ವಿರುದ್ಧ ವಾರಂಟ್ 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿ ಮಾಡಿದ್ದ ಟೀಕೆಗಾಗಿ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ್ರ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು 2019 ನವೆಂಬರ್ 12ರ ಮಂಗಳವಾರ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ನ್ನು ಜಾರಿಗೊಳಿಸಿತು. ಬಿಜೆಪಿ ನಾಯಕ ರಾಜೀವ್ ಬಬ್ಬರ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

ಇದೇ ವೇಳೆಗೆ ನ್ಯಾಯಾಲಯದಲ್ಲಿ ಹಾಜರಿರದೇ ಇದ್ದುದಕ್ಕಾಗಿ ನ್ಯಾಯಾಧೀಶರು ಬಬ್ಬರ್ ಅವರಿಗೂ ೫೦೦ ರೂಪಾಯಿಗಳ ದಂಡವನ್ನೂ ವಿಧಿಸಿದರು. ಪ್ರಕರಣದ ವಿಚಾರಣೆಯನ್ನು ನವೆಂಬರ್ ೨೭ಕ್ಕೆ ಮುಂದೂಡಲಾಯಿತು.

ಉದಾರ ದೃಷ್ಟಿಯಿಂದ ಆರೋಪಿಯ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಜಾರಿಗೊಳಿಸಲಾಗಿದ್ದು ೫೦೦೦ ರೂಪಾಯಿಗಳ ಭದ್ರತೆ ಒದಗಿಸುವಂತೆಯೂ ಜಾರಿಗೊಳಿಸಲಾದ ನೋಟಿಸಿನಲ್ಲಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಿಳಿಸಿದರು.
ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ತನ್ನ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ ಎಂಬುದಾಗಿ ಹೇಳಿ ಬಬ್ಬರ್ ಅವರು ತರೂರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಖಟ್ಲೆ ದಾಖಲಿಸಿದ್ದರು.

೨೦೧೮ರ ಅಕ್ಟೋಬರ್ ೨೮ರಂದು, ತರೂರ್ ಅವರು ಅನಾಮಧೇಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್)  ಮೂಲವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಮೋದಿ ಅವರನ್ನುಶಿವಲಿಂಗದ ಮೇಲೆ ಕುಳಿತ ಚೇಳುಎಂದು ಅವರು ತಮ್ಮ ಟೀಕೆಯಲ್ಲಿ ಹೋಲಿಸಿದ್ದರು.

ಬೆಂಗಳೂರು ಸಾಂಸ್ಕೃತಿಕ ಉತ್ಸವದಲ್ಲಿ ತಮ್ಮಪ್ಯಾರಾಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್ಪುಸ್ತಕದ ಬಗ್ಗೆ ಮಾತನಾಡುತ್ತಿದ್ದ ತರೂರ್ ಪ್ರಧಾನಿ ಮೋದಿ ಅವರ ವ್ಯಕ್ತಿಪೂಜೆ ಸಂಸ್ಕೃತಿ ಆರ್ಎಸ್ ಎಸ್ಗೆ ಹಿತವಾಗಿಲ್ಲ, ಆರ್ಎಸ್ಎಸ್ ಕಾರ್ಯಕರ್ತರಲ್ಲಿ ಇದು ಭ್ರಮನಿರಸನಕ್ಕೆ ಕಾರಣವಾಗಿದೆಎಂದು ಹೇಳಿದ್ದರು.

ಅನಾಮಧೇಯ ಆರ್ಎಸ್ಎಸ್ ಮೂಲವೊಂದು ಪತ್ರಕರ್ತರೊಬ್ಬರ ಜೊತೆಗೆ ಮಾತನಾಡುತ್ತಾ ಮೋದಿ ಬಗೆಗಿನ ತಮ್ಮ ಭ್ರಮನಿರಸನ ವ್ಯಕ್ತ ಪಡಿಸುತ್ತಾಮೋದಿಯವರುಶಿವಲಿಂಗದಮೇಲೆ ಕುಳಿತಿರುವ ಚೇಳಿನಂತೆ. ನೀವು ನಿಮ್ಮ ಕೈಯಿಂದ ಅದನ್ನು ತೆಗೆಯಲಾರಿರಿ ಅಥವಾ ಚಪ್ಪಲಿಯಿಂದ ಅದಕ್ಕೆ ಹೊಡೆಯಲಾರಿರಿಎಂದು ಹೇಳಿದ್ದರು ಎಂದು ತರೂರು ತಿಳಿಸಿದ್ದರು.

ಹೇಳಿಕೆಗೆ ಕ್ಷಿಪ್ರ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಹೇಳಿಕೆಯ ಅರ್ಥವನ್ನು ವಿವರಿಸುವಂತೆ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರನ್ನು ಆಗ್ರಹಿಸಿತ್ತು. ’ಇಡೀ ರಾಷ್ಟ್ರವೇ ಗಮನಿಸುತ್ತಿದೆ... ರಾಹುಲ್ ಗಾಂಧಿಯವರು ತಮ್ಮನ್ನು ಶಿವಭಕ್ತ ಎಂಬುದಾಗಿ ಪ್ರತಿಪಾದಿಸುತ್ತಾರೆ. ಅವರ ಪಕ್ಷದ ಕಿರಿಯ ನಾಯಕರು ಅನಾಮಧೇಯ ಮೂಲಗಳನ್ನು ಉಲ್ಲೇಖಿಸುತ್ತಾ ಚಪಲಿಯನ್ನು ಹೆಸರಿಸಿ ಶಿವಲಿಂಗ ಮತ್ತು ಭಗವಾನ್ ಮಹಾದೇವನ ಪಾವಿತ್ರ್ಯವನ್ನು ಹಾಳುಗೆಡವುತ್ತಿದ್ದಾರೆಎಂದು ಬಿಜೆಪಿ ನಾಯಕರ ರವಿ ಶಂಕರ ಪ್ರಸಾದ್ ಹೇಳಿದ್ದರು.

No comments:

Advertisement