ಭಾರತದ
ಹೊಸ ನಕ್ಷೆಗೆ ಪಾಕ್ ಆಕ್ಷೇಪ
ಇಸ್ಲಾಮಾಬಾದ್: ಜಮ್ಮು
ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಜಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ವಿಭಜನೆ ಅಕ್ಟೋಬರ್ ೩೧ರಂದು ಕಾರ್ಯಗತವಾದ ಬಳಿಕ, ಕೇಂದ್ರ ಸರ್ಕಾರವು ಹಿಂದಿನ ದಿನ ಬಿಡುಗಡೆ
ಮಾಡಿದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಭಾರತದ ಭೂಪಟವು ಪಾಕಿಸ್ತಾನದ ನಿದ್ದೆಗೆಡಿಸಿತು.
ಕಾಶ್ಮೀರದ
ಸಂಪೂರ್ಣ ಭೂಭಾಗವು ಭಾರತಕ್ಕೇ ಸೇರಿದ್ದು ಎಂದು ಭೂಪಟದಲ್ಲಿ ಚಿತ್ರಿಸಿದ್ದಕ್ಕೆ ಪಾಕಿಸ್ತಾನ 2019 ನವೆಂಬರ್ 3ರ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತು.
‘ಇದೊಂದು
ಅಸಮರ್ಪಕ ಮತ್ತು ಕಾನೂನುಬದ್ಧವಾಗಿ ಒಪ್ಪಲಾಗದ ನಕ್ಷೆ’ ಎಂದು ಪಾಕಿಸ್ತಾನ ಹೇಳಿತು.
ಭಾರತ
ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊಸ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದೊಳಗೆ ಹಾಗೂ ಗಿಲ್ಗಿಟ್ -ಬಾಲ್ಟಿಸ್ತಾನವನ್ನು ಲಡಾಖ್ ಒಳಗೆ ಸೇರಿಸಿ ಚಿತ್ರಿಸಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಇಲಾಖೆ, ಇದೊಂದು ಕಾನೂನುಬಾಹಿರ ಕೃತ್ಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿತು. ಅಲ್ಲದೆ, ಈ ಭೂಪಟವನ್ನು ಪಾಕಿಸ್ತಾನವು ನಿರಾಕರಿಸುತ್ತದೆ ಎಂದೂ ಹೇಳಿತು.

No comments:
Post a Comment