Monday, November 25, 2019

ಮುಂಬೈ: ಹೋಟೆಲಿನಲ್ಲಿ ಸೇನಾ-ಎನ್‌ಸಿಪಿ ಸಭೆ

ಮುಂಬೈ: ಹೋಟೆಲಿನಲ್ಲಿ ಸೇನಾ-ಎನ್ಸಿಪಿ ಸಭೆ
ಶಾಸಕರಿಗೆ ಉದ್ಧವ್, ಶರದ್ ಧೈರ್ಯ, ಭರವಸೆ
ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಅವರು  2019 ನವೆಂಬರ್ 24ರ ಭಾನುವಾರ ಮುಂಬೈಯ ಪೊವಾರಿ ಪ್ರದೇಶದ ಐಷಾರಾಮೀ ಹೋಟೆಲಿನಲ್ಲಿ ಎನ್ಸಿಪಿ ಶಾಸಕರ ಸಭೆ ನಡೆಸಿ ಏಕತೆಯ ಪ್ರದರ್ಶನ ಮಾಡಿದರು.

ರಿನಾಯಿಸೆನ್ಸ್  ಮುಂಬೈ ಕನ್ವೆಂಷನ್ ಸೆಂಟರ್ ಹೋಟೆಲಿನಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲದ ನಡೆದ ಸಭೆಯನ್ನು ಉದ್ದೇಶಿಸಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮಾತನಾಡಿದರು.

ಚಿಂತಿಸಬೇಡಿ. ಬಾಂಧವ್ಯ ದೀರ್ಘಕಾಲ ಉಳಿಯಲಿದೆ, ನಮ್ಮ ಮೈತ್ರಿ ದೀರ್ಘಕಾಲ ಬಾಳಲಿದೆಎಂದು ಸೇನಾ ಮುಖ್ಯಸ್ಥ ಹೇಳಿದುದಾಗಿ ಸುದ್ದಿ ಸಂಸ್ಥೆಯ ವರದಿ ತಿಳಿಸಿತು.

ಸೇನಾ ನಾಯಕರಾದ ಸುಭಾಶ್ ದೇಸಾಯಿ ಮತ್ತು ಸಂಜಯ್ ರಾವತ್ ಅವರು ಉದ್ಧವ್ ಠಾಕ್ರೆ ಜೊತೆಗಿದ್ದರು. ವರ್ಲಿಯಿಂದ ಹೊಸದಾಗಿ ಆಯ್ಕೆಯಾಗಿರುವ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ಏಕನಾಥ ಶಿಂಧೆ ಅವರೂ ಈಗಾಗಲೇ ಪಂಚತಾರಾ ಹೋಟೆಲಿನಲ್ಲಿ ಇದ್ದಾರೆ.

ಉದ್ಧವ್ ಠಾಕ್ರೆ ಅವರು ತಮ್ಮ ನಿವಾಸ ಮಾತೋಶ್ರೀಯಿಂದ ತಮ್ಮ ಪಕ್ಷದ ಶಾಸಕರನ್ನು ಮತ್ತು ಎನ್ಸಿಪಿ ಹಾಗೂ ಕಾಂಗ್ರೆಸ್ ಶಾಸಕರನ್ನು ಮುಂಬೈಯ ವಿವಿಧ ಹೋಟೆಲುಗಳಿಗೆ ಒಯ್ಯುವ ಸಲುವಾಗಿ ಮಧ್ಯಾಹ್ನವೇ ಹೊರಟಿದ್ದರು.

ಬಳಿಕ ಠಾಕ್ರೆ ಅವರು ಇನ್ನೊಂದು ಐಷಾರಾಮೀ ಜೆಡಬ್ಲ್ಯೂ ಮಾರಿಯೊಟ್ ಹೊಟೆಲಿನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರ ಬಳಿಗೆ ತೆರಳಿ ಸಂವಹನ ನಡೆಸಿದರು. ಅಂಧೇರಿ ಪೂರ್ವದಲ್ಲಿರುವ ದಿ ಲಲಿತ್ ಹೋಟೆಲಿನಲ್ಲಿರುವ ತಮ್ಮ ಪಕ್ಷದ ಶಾಸಕರ ಜೊತೆಗೂ ಉದ್ಧವ್ ಮಾತನಾಡಿದರು.

ಮಹಾರಾಷ್ಟ್ರದ
ದಿಢೀರ್ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಬೇಟೆಯಾಡದಂತೆ ರಕ್ಷಿಸಿಕೊಳ್ಳುವ ಸಲುವಾಗಿ ಎನ್ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ಪಕ್ಷಗಳು ಮುಂಬೈಯ ವಿವಿಧ ಐಷಾರಾಮೀ ಹೋಟೆಲುಗಳಿಗೆ ಸ್ಥಳಾಂತರಿಸಿವೆ.

No comments:

Advertisement