Monday, November 4, 2019

ವಾಟ್ಸಪ್ ಬೇಹುಗಾರಿಕೆ: ಪ್ರಿಯಾಂಕಾ ಗಾಂಧಿ ಫೋನಿಗೂ ಕನ್ನ ?

ವಾಟ್ಸಪ್ ಬೇಹುಗಾರಿಕೆ: ಪ್ರಿಯಾಂಕಾ ಫೋನಿಗೂ ಕನ್ನ ?

ನವದೆಹಲಿ: ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುವ ಉದ್ದೇಶಕ್ಕಾಗಿ ನಡೆದ ಫೋನ್ ಕನ್ನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಗುರಿಮಾಡಲಾಗಿತ್ತು ಎಂದು ಕಾಂಗ್ರೆಸ್ ಪಕ್ಷವು 2019 ನವೆಂಬರ್ 03ರ ಭಾನುವಾರ ಗಂಭೀರ ಆರೋಪ ಮಾಡಿತು. ’ಇದು ಇಲ್ಲದೇ ಇದ್ದುದರ ಕಲ್ಪನೆ ಮಾತ್ರಎಂದು ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತು.ಪ್ರಿಯಾಂಕಾ ಗಾಂಧಿ ಅವರಿಗೆ ವಾಟ್ಸಪ್ನಿಂದ ಆಕೆಯ ಫೋನ್ ಹ್ಯಾಕ್ ಬಗ್ಗೆಸಂದೇಶ (ಮೆಸ್ಸೇಜ್) ಬಂದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರುನಿಮ್ಮ ಫೋನ್ಗಳು ಹ್ಯಾಕ್ ಆಗಿವೆ ಎಂಬುದಾಗಿ ವಾಟ್ಸಪ್ ಸಂದೇಶಗಳನ್ನು ಕಳಿಸಿತ್ತು. ಪ್ರಿಯಾಂಕಾ ಗಾಂಧಿ ಅವರ ಫೋನಿಗೂ ಅಂತಹ ಒಂದು ಸಂದೇಶ ಬಂದಿತ್ತುಎಂದು ಸುರ್ಜೆವಾಲ ನುಡಿದರು.
ಹ್ಯಾಕ್
ಗೆ ಗುರಿಯಾದವರ ಪಟ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಮತ್ತು ಮಾಜಿ ಲೋಕಸಭಾ ಸದಸ್ಯ ಸಂತೋಷ ಭಾರತೀಯ ಅವರೂ ಇದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ಇಸ್ರೇಲ್
ಸಂಸ್ಥೆಯೊಂದು ವಿಶ್ವಾದ್ಯಂತ ಸುಮಾರು ೧೪೦೦ ಜನರ ಮೇ ಬೇಹುಗಾರಿಕೆ ನಡೆಸುವ ಸಲುವಾಗಿ ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಾಟ್ಸಪ್ ಆಪಾದಿಸಿತ್ತುಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಫೋನಿಗೂ ಕನ್ನ ಹಾಕಲಾಗಿದ್ದು ಇದಕ್ಕೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದರು.
ಇದು ಅತ್ಯಂತ ಗಂಭೀರ ವಿಷಯ. ಇಬ್ಬರು ರಾಜಕಾರಣಿಗಳು ಈವರೆಗೆ ತಮ್ಮ ಫೋನುಗಳು ಹ್ಯಾಕ್ ಆಗಿರುವ ಬಗ್ಗೆ ಹೇಳಿದ್ದಾರೆಎಂದು ಕಾಂಗ್ರೆಸ್ ನಾಯಕ ನುಡಿದರು.
ಇಲ್ಲದೇ ಇರುವ ವಿಷಯವನ್ನು ಕಾಂಗ್ರೆಸ್ ಕಲ್ಪನೆ ಮಾಡಿಕೊಳ್ಳುತ್ತಿದೆಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಇರುವುದನ್ನು ಕಾಂಗ್ರೆಸ್ ಕಲ್ಪಿಸಿಕೊಳ್ಳುವುದನ್ನು ನಾವು ನೋಡಿಲ್ಲವೇ? ರಾಹುಲ್ ಗಾಂಧಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಕ್ಯಾಮರಾದ ಹಸಿರು ಬೆಳಕು ಬೀಳುತ್ತಿದ್ದುದನ್ನು ತೋರಿಸಿ ರಾಹುಲ್ ಗಾಂಧಿ ಅವರ ಪ್ರಾಣ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದ್ದುದನ್ನು ನೆನಪು ಮಾಡಿಕೊಳ್ಳಿ. ಇದು ಸಾರ್ವಜನಿಕ ಬದುಕಿನಲ್ಲಿ ಅವರ ನಾಯಕರ ವಿಶ್ವಾಸಾರ್ಹತೆಯ ಮಟ್ಟವನ್ನು ತೋರಿಸುತ್ತದೆ ಎಂದು ಮಾಳವೀಯ ಟ್ವೀಟ್ ಮಾಡಿದರು.

No comments:

Advertisement