Sunday, November 24, 2019

ಬಿಜೆಪಿಗೆ ಸಂಖ್ಯಾಬಲ ಇಲ್ಲ: ಶರದ್ ಪವಾರ್

ಬಿಜೆಪಿಗೆ ಸಂಖ್ಯಾಬಲ ಇಲ್ಲ: ಶರದ್ ಪವಾರ್
ಮುಂಬೈ: ಬಿಜೆಪಿ ಜೊತೆಗೆ ಹೆಜ್ಜೆ ಹಾಕಿದ ತಮ್ಮ ಅಳಿಯ ಅಜಿತ್ ಪವಾರ್ ನಿರ್ಧಾರವನ್ನುಅಶಿಸ್ತುಎಂಬುದಾಗಿ  2019 ನವೆಂಬರ್ 23ರ ಶನಿವಾರ ಇಲ್ಲಿ ಬಣ್ಣಿಸಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರುದೇವೇಂದ್ರ ಫಡ್ನವಿಸ್ ಸರ್ಕಾರವು ಸದನ ಬಲಾಬಲ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

ಶನಿವಾರ
ನಸುಕಿನಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್ ಅವರ ಜೊತೆಗೆ 10 ಅಥವಾ 11 ಎನ್ ಸಿಪಿ ಶಾಸಕರು ಮಾತ್ರ ಹೋಗಿದ್ದಾರೆ. ಇದು ವಿಶ್ವಾಸ ಮತ ಗೆಲ್ಲಲು ಸಾಕಾಗುವುದಿಲ್ಲ  ಶರದ್ ಪವಾರ್ ಹೇಳಿದರು.

ಅಜಿತ್ ಪವಾರ್ ಅವರ ನಿರ್ಧಾರವು ಪಕ್ಷದ ನಿರ್ಧಾರಕ್ಕೆ ವಿರುದ್ಧ ಮತ್ತು ಅಶಿಸ್ತು. ಯಾರೇ ಎನ್ ಸಿಪಿ ನಾಯಕ ಅಥವಾ ಕಾರ್ಯಕರ್ತ  ಎನ್ ಸಿಪಿ- ಬಿಜೆಪಿ ಸರ್ಕಾರದ ಪರ ಇಲ್ಲ.  ಅವರಿಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ನಮಗಿದೆ. ಅವರ ಬಳಿ ಅಷ್ಟೊಂದು ಸಂಖ್ಯೆ ಇಲ್ಲಎಂದು ಶರದ್ ಪವಾರ್ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಅಧಿಕಾರ ವಹಿಸಿಕೊಂಡದ್ದನ್ನು ಪ್ರಶ್ನಿಸಿದ  ಉದ್ಧವ್ ಠಾಕ್ರೆನಾಟಕೀಯ ಬೆಳವಣಿಗೆಗಳನ್ನು ಸರ್ಜಿಕಲ್ ದಾಳಿಎಂಬುದಾಗಿ ಬಣ್ಣಿಸಿದರು. ಇದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಎಂದು ಠಾಕ್ರೆ ಎಚ್ಚರಿಸಿದರು.

ಇದು ಮಹಾರಾಷ್ಟ್ರಮತ್ತು ರಾಜ್ಯದ ಜನರ ಮೇಲೆ ಮಧ್ಯರಾತ್ರಿಯಲ್ಲಿ ನಡೆದಿರುವ  ಸರ್ಜಿಕಲ್ ದಾಳಿ. ಇದರ ಸೇಡು ತೀರಿಸುತ್ತೇವೆಎಂದು ಸೇನಾ ಮುಖ್ಯಸ್ಥ ಹೇಳಿದರು.

ಶಿವಸೇನಾ ಶಾಸಕರನ್ನು ಬೇಟೆಯಾಡದಂತೆ ಬಿಜೆಪಿಗೆ ಎಚ್ಚರಿಕೆ ನೀಡಿದ ಅವರುಪ್ರಯತ್ನಿಸಿ ನೋಡಲಿ. ಮಹಾರಾಷ್ಟ್ರವು ಈದಿನ ರಾತ್ರಿ ನಿದ್ರೆ ಮಾಡುವುದಿಲ್ಲ. ಹೋರಾಟದಲ್ಲಿ ನಾವು ಪವಾರ್ ಸಾಹೇಬ್ ಜೊತೆಗಿದ್ದೇವೆ ಎಂದು ಠಾಕ್ರೆ ನುಡಿದರು.

ಶಿವಸೇನಾ
ಎನ್ ಸಿಪಿ- ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪವಾರ್ ಅವರಿಂದ ಬೆಂಬಲ ಪಡೆದ ಠಾಕ್ರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮೇಲೂ ವಾಗ್ದಾಳಿ ನಡೆಸಿದರು.

ಇನ್ನು ಮುಂದೆ ಚುನಾವಣೆಗಳನ್ನು ಘೋಷಿಸಲಾಗುವುದಿಲ್ಲ ಮತ್ತುನಾನು ಮರಳಿ ಬರುತ್ತೇನೆಎಂಬ ಮಾತಿನ ಬದಲಿಗೆ ಕೆಲವು ವ್ಯಕ್ತಿಗಳು ಫೆವಿಕಾಲ್ ಹಾಕಿಕೊಂಡು ಕುರ್ಚಿಯಲ್ಲಿ ಕೂರುತ್ತಾರೆಎಂದು ಠಾಕ್ರೆ ನುಡಿದರು.

No comments:

Advertisement