Sunday, November 17, 2019

ರಿಲಯನ್ಸ್‌ ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

ರಿಲಯನ್ಸ್ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ
ಮುಂಬೈ: ರಿಲಯನ್ಸ್ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಮುಂಬೈ ಷೇರುಪೇಟೆ ಅಧಿಸೂಚನೆ  2019 ನವೆಂಬರ್ 16ರ ಶನಿವಾರ ಬಹಿರಂಗ ಪಡಿಸಿತು.
ಅಂಬಾನಿ ಮಾತ್ರವಲ್ಲದೆ, ಛಾಯಾ ವೀರಾನಿ, ರಾನ್ಕರಾನಿ, ಮಂಜರಿ ಕೇಕರ್ಮತ್ತು ಸುರೇಶ್ರಂಗಾಚಾರ್ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ (ಬಿಎಸ್) ಅಧಿಸೂಚನೆ ತಿಳಿಸಿತು.
ಅಂಬಾನಿಛಾಯಾ ವೀರಾನಿ, ಮಂಜರಿ ಕೇಕರ್ . 15ರಂದು, ರಾನ್ಕರಾನಿ . 14ರಂದು ಮತ್ತು ಸುರೇಶ್ ರಂಗಾಚಾರ್ . 13ರಂದು ರಾಜೀನಾಮೆ ನೀಡಿದ್ದಾರೆ. ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅಕ್ಟೋಬರ್ 4ರಂದೇ ರಾಜೀನಾಮೆ ನೀಡಿದ್ದರು.

ಮಣಿಕಂಠನ್ ಅವರ ರಾಜೀನಾಮೆ ಮತ್ತು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಡಿ. ವಿಶ್ವನಾಥ್ ಅವರ ನೇಮಕಾತಿಗೆ ಸಾಲಗಾರರ ಸಮಿತಿಯ (ಸಿಒಸಿ) ಅನುಮೋದನೆ ದೊರೆಯಬೇಕಾಗಿದೆ.  ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಯಿತು.
ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ಕಂಪನಿಯು ಜುಲೈಸೆಪ್ಟೆಂಬರ್ಅವಧಿಯಲ್ಲಿ 30,142 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

No comments:

Advertisement