Tuesday, November 12, 2019

ಮಾನವ ಮುಖದ ಮೀನು!

ಮಾನವ ಮುಖದ ಮೀನು!
ನವದೆಹಲಿ: ಮತ್ಸ್ಯ ಕನ್ಯೆಯರ ಬಗೆಗಿನ ದಂತ ಕತೆಗಳು ಜನಜನಿತ. ಆದರೆ ಅವುಗಳ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಿಲ್ಲ. ಈಗ ಮಾನವನ ಮುಖದಂತೆ ತಲೆಯನ್ನು ಹೊಂದಿರುವ ಮೀನೊಂದು ಚೀನಾದಲ್ಲಿ ಕಂಡು ಬಂದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.

ಚೀನದ ಮಿಯಾವೋ ಗ್ರಾಮಕ್ಕೆ ಭೇಟಿ ನೀಡಿದ್ದ ಮಹಿಳೆಯೋರ್ವರು ಸಮೀಪ ತೊರೆಯಲ್ಲಿ ಈಜಾಡುತ್ತಿದ್ದ ಮೀನನ್ನು ಕುತೂಹಲದಿಂದ ಗಮನಿಸಿದಾಗ ಮಾನವನ ಮುಖ ಹೋಲುವ ಮೀನು ಕಂಡುಬಂದಿತು ಎನ್ನಲಾಗಿದೆ.

ತತ್ ಕ್ಷಣ  ಆ ಮಹಿಳೆ ಅದನ್ನು ಅವರು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ಮಾಡಿದರು. ಕೆಲವೇ ಕ್ಷಣಗಳಲ್ಲಿ ಅದು ಜಗತ್ತಿನಾದ್ಯಂತ ವೈರಲ್ಆಯಿತು.

14 ಸೆಕೆಂಡ್ಗಳ ಈ ವೀಡಿಯೋ ಈಗ ಚೀನ ಸಹಿತ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕುತೂಹಲ ನಿರ್ಮಿಸಿದೆ.

ಇದೊಂದು ಭಯ ಹುಟ್ಟಿಸುವ ವೀಡಿಯೋ ಎಂದು ಹಲವರು ಬರೆದುಕೊಂಡರೆ, ಇನ್ನಿತರರು ಅದ್ಭುತ ಎಂದು ಬಣ್ಣಿಸಿದ್ದಾರೆ.


ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿರಿ



No comments:

Advertisement