Monday, November 4, 2019

ಭಾರತದಿಂದ ಆಕ್ಷೇಪ: ಆರ್‌ಸಿಇಪಿ ವಾಣಿಜ್ಯ ಒಪ್ಪಂದಕ್ಕೆ ಸಹಿ ವಿಳಂಬ

ಭಾರತದಿಂದ ಆಕ್ಷೇಪ: ಆರ್ಸಿಇಪಿ
ವಾಣಿಜ್ಯ ಒಪ್ಪಂದಕ್ಕೆ ಸಹಿ ವಿಳಂಬ
ಬ್ಯಾಂಕಾಕ್: ಚೀನಾದಿಂದ ಅಗ್ಗದ ವಸ್ತುಗಳು ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು ಎಂಬ ಹಿನ್ನೆಲೆಯಲ್ಲಿ ಭಾರತವು ಹೊಸ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮವಾಗಿ ೧೬ ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಒಪ್ಪಂದಕ್ಕೆ ಸಹಿ ಬೀಳುವುದು ೨೦೨೦ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಆಗ್ನೇಯ ಏಷ್ಯಾ ನಾಯಕರ ಕರಡು ಹೇಳಿಕೆಯು 2019 ನವೆಂಬರ್ 03ರ ಭಾನುವಾರ ತಿಳಿಸಿತು.
ಭಾರತದಿಂದ ನ್ಯೂಜಿಲೆಂಡ್ವರೆಗಿನ ದೇಶಗಳನ್ನು ಒಳಗೊಳ್ಳುವ ಆರ್ಸಿಇಪಿ ವಾಣಿಜ್ಯ ಒಪ್ಪಂದವು ಜಾಗತಿಕ ಜಿಡಿಪಿಯ ಶೇಕಡಾ ೩೦ರಷ್ಟು ಮತ್ತು ವಿಶ್ವದ ಜನರ ಅರ್ಧದಷ್ಟು ಜನರಿಗೆ ಅನ್ವಯವಾಗಲಿದೆ.

ಭಾರತದ ಆಕ್ಷೇಪಗಳ ಪರಿಣಾಮವಾಗಿ ಬ್ಯಾಂಕಾಕಿಲ್ಲಿ ನಡೆಯುವ ಅಸಿಯಾನ್ ಶೃಂಘಸಭೆಯಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು.
ಒಪ್ಪಂದದ ಪರಿಣಾಮವಾಗಿ ಚೀನಾದ ಅಗ್ಗದ ವಸ್ತುಗಳು ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು. ಇದರಿಂದಾಗಿ ದೇಶದ ಸಣ್ಣ ಉದ್ಯಮಕ್ಕೆ ಭಾರೀ ಧಕ್ಕೆ ಆಗಬಲ್ಲುದು ಎಂದು ಭಾರತ ಚಿಂತೆ ವ್ಯಕ್ತಪಡಿಸಿತು.  ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸಿಯಾನ್ ನಾಯಕರ ಸಭೆಯಲ್ಲಿ ತಮ್ಮ ದೇಶದ ಕಳವಳವನ್ನು ಪುನರಾವರ್ತನೆ ಮಾಡಿದರು ಎಂದು ಮೂಲಗಳು ಹೇಳಿದವು.
ಎಲ್ಲ ಪಕ್ಷಗಳಿಗೂ ಅರ್ಥವತ್ತಾದ ಮಾರುಕಟ್ಟೆ ಅವಕಾಶ ಲಭಿಸಬೇಕುಎಂಬುದು ಸೇರಿದಂತೆ ಭಾರತವು ಮುಂದಿಟ್ಟ ಹಲವಾರು ಪ್ರಸ್ತಾಪಗಳು ಇತ್ಯರ್ಥಗೊಂಡಿಲ್ಲಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಹೇಳಲು ಇಚ್ಛಿಸದ ರಾಜತಾಂತ್ರಿಕರೊಬ್ಬರು ತಿಳಿಸಿದರು.
ಆರ್ಸಿಇಪಿ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಇಂಡಿಯಾ ಇಂಕ್, ರೈತ ಸಮೂಹಗಳು, ನಾಗರಿಕ ಸಮಾಜ ಸಂಘಟನೆಗಳುಮತ್ತು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು.

No comments:

Advertisement