Sunday, November 3, 2019

ಭಾರತದ ಹೊಸ ನಕ್ಷೆ ಬಿಡುಗಡೆ

ಭಾರತದ ಹೊಸ ನಕ್ಷೆ ಬಿಡುಗಡೆ
ನವದೆಹಲಿ: ಜಮ್ಮು –ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ 2019 ಅಕ್ಟೋಬರ್ 31ರ ಗುರುವಾರ  ಅಸ್ತಿತ್ವಕ್ಕೆ ಬಂದಿವೆ. ಇದರೊಂದಿಗೆ ಭಾರತದ ನಕ್ಷೆಯೂ (ಮ್ಯಾಪ್) ಹೊಸದಾಗಿದೆಹೊಸ ನಕ್ಷೆಯನ್ನು ಕೇಂದ್ರ ಸರ್ಕಾರ 2019 ನವೆಂಬರ್ 02ರ ಶನಿವಾರ ಬಿಡುಗಡೆ ಮಾಡಿತು.
ಉಭಯ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಾಗುವುದಕ್ಕೂ ಮುನ್ನ ದೇಶದ ಒಟ್ಟು ರಾಜ್ಯಗಳ ಸಂಖ್ಯೆ 29 ಆಗಿತ್ತು. ಇದರಲ್ಲಿ ಜಮ್ಮುಕಾಶ್ಮೀರ ಮತ್ತು ಲಡಾಖ್ಸಹ ಸೇರಿತ್ತು. ಒಟ್ಟು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 7 ಆಗಿತ್ತು. ಇದೀಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ತಲುಪಿದೆ.

ಜಮ್ಮುಕಾಶ್ಮೀರ ಪುನರ್ವಿಂಗಡಣೆ ಕಾಯ್ದೆ 2019ನ್ನು  ಸಂಸತ್ತು ಮೂರು ತಿಂಗಳ ಹಿಂದೆ ಆಗಸ್ಟ್ 5ರಂದು ಅಂಗೀಕರಿಸಿತ್ತು. ಅದರ ಅನ್ವಯ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಕಾರ್ಯಾರಂಭ ಮಾಡಿದವು.
ಕೇಂದ್ರಾಡಳಿತ ಪ್ರದೇಶಗಳು
ಪುದುಚೇರಿ, ಲಕ್ಷದ್ವೀಪ, ಲಡಾಖ್, ಜಮ್ಮುಕಾಶ್ಮೀರ, ದೆಹಲಿ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರಹವೇಲಿ, ಚಂಡೀಗಡ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.
ರಾಜ್ಯಗಳು
ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಡ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ.



No comments:

Advertisement