ಗೂಗಲ್ ‘ಡೂಡಲ್’ ಗೆದ್ದ ಪುಟ್ಟ ಬಾಲಕಿಯ
‘ನಡೆದಾಡುವ ಮರಗಳು.!’
‘ನಡೆದಾಡುವ ಮರಗಳು.!’
ನವದೆಹಲಿ: ಗುರುಗಾಮದ ಏಳು ವರ್ಷದ ಬಾಲಕಿಯೊಬ್ಬಳು ೨೦೧೯ರ ಗೂಗಲ್
ಪ್ರಶಸ್ತಿಗಾಗಿ ’ಡೂಡಲ್’ ಗೆದ್ದಿದ್ದಾಳೆ. ಬಾಲಕಿ ಚಿತ್ರಿಸಿದ "ವಾಕಿಂಗ್ ಟ್ರೀಸ್" (ನಡೆದಾಡುವ ವೃಕ್ಷಗಳು) ಡೂಡಲ್ ಗೆದ್ದಿತು.
ಎರಡನೇ
ತರಗತಿಯ ವಿದ್ಯಾರ್ಥಿನಿ ದಿವ್ಯಾಂಶಿ ಸಿಂಘಾಲ್ ಭವಿಷ್ಯದಲ್ಲಿ ಮರಗಳು ನಡೆದಾಡಬಹುದು ಎಂಬುದಾಗಿ ಕಲ್ಪಿಸಿಕೊಂಡು
ಈ ರೇಖಾಚಿತ್ರವನ್ನು ರಚಿಸಿದ್ದಳು. ಗೂಗಲ್ ಭಾರತದಲ್ಲಿ ಈ ಸ್ಪರ್ಧೆಯನ್ನು ನಡೆಸಿತ್ತು.
ಗೆದ್ದ
’ಡೂಡಲ್’ನ್ನು
ನವೆಂಬರ್ ೧೪ ರಂದು ಗೂಗಲ್
ಇಂಡಿಯಾದ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ನವೆಂಬರ್ ೧೪ ಪ್ರಾಸಂಗಿಕವಾಗಿ
ಭಾರತದ ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವಾಗಿದ್ದು, ಇದನ್ನು ದೇಶದಲ್ಲಿ ’ಮಕ್ಕಳ ದಿನ’ವಾಗಿ ಆಚರಿಸಲಾಗುತ್ತದೆ.
ಮರಗಳನ್ನು
ಕಡಿಯುವುದನ್ನು ನೋಡಿ ’ನಡೆದಾಡುವ ವೃಕ್ಷಗಳನ್ನು’ಕಲ್ಪಿಸಿಕೊಂಡೆ.
ಅದೇ ರೇಖಾಚಿತ್ರ ಬರೆಯಲು ಸ್ಫೂರ್ತಿಯಾಯಿತು ಪುಟ್ಟ ಬಾಲಕಿ ದಿವ್ಯಾಂಶಿ ಹೇಳಿದಳು.
"ಬೇಸಿಗೆ
ರಜೆಯ ಸಮಯದಲ್ಲಿ ನಾನು ನನ್ನ ಅಜ್ಜಿಯ ಮನೆಗೆ ಹೋಗಿದ್ದೆ. ಆಗ ಮರಗಳನ್ನು ಕಡಿಯುವುದನ್ನು
ನೋಡಿದೆ. ಬೇಸರವಾಯಿತು. ಮರಗಳಿಗೆ ನಡೆಯಲು ಸಾಧ್ಯವಾದರೆ ಕೊಡಲಿಯಿಂದ ಅವುಗಳು ತಪ್ಪಿಸಿಕೊಳ್ಳಬಹುದು ಎಂದು ನಾನು ಭಾವಿಸಿದೆ" ಎಂದು ದೆಹಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದಳು.
"ನಾನು
ದೊಡ್ಡವನಾದ ಮೇಲೆ,... ನಾನು ಭಾವಿಸುತ್ತೇನೆ ..." ಎಂಬುದು ಈ ವರ್ಷದ ಡೂಡಲ್ಗೆ ಗೂಗಲ್ ಥೀಮ್
ಆಗಿತ್ತು. ಸ್ಪರ್ಧೆಯಲ್ಲಿ ’ದೊಡ್ಡವನಾಗುವಾಗ ಹೀಗೆ ಇರಬಹುದು’ ಎಂಬುದನ್ನು ಕಲ್ಪಿಸಿಕೊಂಡು ರೇಖಾ ಚಿತ್ರ ಬರೆಯಬೇಕಾಗಿತ್ತು.
ದೇಶಾದ್ಯಂತದ
೧೦ನೇ ತರಗತಿವರೆಗಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಗೂಗಲ್ ಡೂಡಲ್ಗಾಗಿ ತಮ್ಮ ರೇಖಾ ಚಿತ್ರಗಳನ್ನು ಕಳುಹಿಸಿದ್ದರು. ಅವುಗಳ ಪೈಕಿ ದಿವ್ಯಾಂಶಿಯ ರೇಖಾಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.
‘ಛೋಟಾ
ಭೀಮ್’ ಸೃಷ್ಟಿಕರ್ತ
ರಾಜೀವ್ ಚಿಲಕಾ, ಯೂಟ್ಯೂಬರ್ ಪ್ರಜಕ್ತಾ ಕೋಲಿ ಮತ್ತು ನೇಹಾ ಡೂಡಲ್ ಖ್ಯಾತಿಯ ಕಲಾವಿದೆ ನೇಹಾ ಶರ್ಮಾ ಮತ್ತು ಗೂಗಲ್ನ ತಂಡದ ಸದಸ್ಯರು
ತೀರ್ಪುಗಾರರಲ್ಲಿ ಸೇರಿದ್ದರು.
ವಯಸ್ಕರು
ನಿರ್ಲಕ್ಷಿಸುವ ಮತ್ತು ಒಪ್ಪಿಕೊಳ್ಳದ ಅಜ್ಞಾನವನ್ನು ಪುಟ್ಟ ಹುಡುಗಿ ತನ್ನ ರೇಖಾಚಿತ್ರದಲ್ಲಿ ತೋರಿಸಿಕೊಟ್ಟಿದ್ದಾಳೆ ಮತ್ತು ತನ್ಮೂಲಕ ಹವಾಮಾನ ಬದಲಾವಣೆ ನಿಯಂತ್ರಣದ ಯತ್ನಕ್ಕೆ ತನ್ನ ಕಾಣಿಕೆ ಕೊಟ್ಟಿದ್ದಾಳೆ ಎಂದು ನೆಟ್ಟಿಗರು ದಿವ್ಯಾಂಶಿಯನ್ನು ಹಾಡಿ ಹೊಗಳಿದ್ದಾರೆ.
ಆಕೆಯ ’ನಡೆದಾಡುವ ವೃಕ್ಷಗಳು’ (ವಾಕಿಂಗ್ ಟ್ರೀಸ್) ರೇಖಾಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಕೆಯ ’ನಡೆದಾಡುವ ವೃಕ್ಷಗಳು’ (ವಾಕಿಂಗ್ ಟ್ರೀಸ್) ರೇಖಾಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಎಂಟ್ಸ್’ ಎಂಬುದಾಗಿ
ಕರೆಯಲ್ಪಡುವ ನಡೆದಾಡುವ ವೃಕ್ಷಗಳನ್ನು ತೋರಿಸಿದ್ದ ’ಲಾರ್ಡ್ ಆಫ್ ರಿಂಗ್ಸ್’ ನ್ನು ಡೂಡಲ್ ನೆನಪಿಸಿದೆ ಎಂದು ಇತರ ಹಲವರು ಪ್ರತಿಕ್ರಿಯಿಸಿದ್ದಾರೆ.
No comments:
Post a Comment