Sunday, November 17, 2019

ದೆಹಲಿ ಕ್ರಿಕೆಟ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ ರಾಜೀನಾಮೆ

ದೆಹಲಿ ಕ್ರಿಕೆಟ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ ರಾಜೀನಾಮೆ
ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ 2019 ನವೆಂಬರ್ 16ರ ಶನಿವಾರ ರಾಜೀನಾಮೆ ನೀಡಿದರು.

ರಾಜೀನಾಮೆಯ ನಂತರ ಮಾತನಾಡಿದ ರಜತ್ ಶರ್ಮ, ಅಧ್ಯಕ್ಷನಾಗಿದ್ದ ವೇಳೆ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಿಕ್ಕ ಅವಕಾಶದಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ ಎಂದರು.

ನಾನು ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಬೇಕೆಂದು ಬಂದವ. ಆದರೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳ ನಡುವೆ ಕೆಲಸ ಮಾಡುವುದು ಕಷ್ಟ ಎಂದು ಶರ್ಮ ಹೇಳಿದರು.

ಹಿರಿಯ ಪತ್ರಕರ್ತರಾಗಿರುವ ರಜತ್ ಶರ್ಮಾ 20 ತಿಂಗಳ ಹಿಂದಷ್ಟೇ ದೆಹಲಿ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗಾದಿಗೇರಿದ್ದರು.

No comments:

Advertisement