ಶರದ್
ಪವಾರ್ ನಮ್ಮ ನಾಯಕ, ಬಿಜೆಪಿ-ಎನ್ಸಿಪಿ ಮೈತ್ರಿಯಿಂದ ದೃಢ ಸರ್ಕಾರ: ಅಜಿತ್ ಪವಾರ್
ಮುಂಬೈ: ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರಿಗೆ ಬೆಂಬಲ ನೀಡಲು ನಿರ್ಧರಿಸುವ ಮೂಲಕ 2019 ನವೆಂಬರ್ 23ರ ಶನಿವಾರ ಅಚ್ಚರಿ ಮೂಡಿಸಿದ್ದ ಅಜಿತ್ ಪವಾರ್ ಅವರು ’ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ನಮ್ಮ ನಾಯಕ ಮತ್ತು ಎನ್ಸಿಪಿ- ಬಿಜೆಪಿ ಮೈತ್ರಿಕೂಟ ಮಹಾರಾಷ್ಟ್ರಕ್ಕೆ ಸ್ಥಿರ ಸರ್ಕಾರವನ್ನು ನೀಡಲಿದೆ’ ಎಂದು 2019 ನವೆಂಬರ್ 24ರ ಭಾನುವಾರ ಹೇಳಿಕೆ ನೀಡುವ ಮೂಲಕ ರಾಜಕೀಯ
ವಲಯಗಳಲ್ಲಿ ವಿಸ್ಮಯ ಮೂಡಿಸಿದರು.
‘ನಾನು
ಎನ್ಸಿಪಿಯಲ್ಲೇ ಇದ್ದೇನೆ ಮತ್ತು ಯಾವಾಗಲೂ ಎನ್ಸಿಪಿಯಲ್ಲೇ ಇರುತ್ತೇನೆ. ಪವಾರ್
ಸಾಹೇಬ್ ನಮ್ಮ ನಾಯಕ. ನಮ್ಮ ಬಿಜೆಪಿ-ಎನ್ಸಿಪಿ ಮೈತ್ರಿಕೂಟವು ಮಹಾರಾಷ್ಟ್ರಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸ್ಥಿರ ಸರ್ಕಾರವನ್ನು ನೀಡಲಿದೆ ಮತ್ತು ರಾಜ್ಯ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ದುಡಿಯಲಿದೆ’
ಎಂದು ಅಜಿತ್ ಪವಾರ್ ಟೀಟ್ ಮಾಡಿದರು.
ಬಳಿಕ
ಮಾಡಿದ ಸರಣಿ ಟ್ವೀಟ್ಗಳಲ್ಲಿ ಅಜಿತ್ ಪವಾರ್ ಅವರು ಬೆಂಬಲ ನೀಡಿದ್ದಕ್ಕಾಗಿ ಜನತೆಗೆ ಧನ್ಯವಾದ ಅರ್ಪಿಸಿ ’ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು
ಪ್ರತಿಯೊಬ್ಬರಿಗೂ ಭರವಸೆ ನೀಡಿದ್ದಲ್ಲದೆ ಸಹನೆಯಿಂದ ಇರುವಂತೆ ಆಗ್ರಹಿಸಿದರು.
ಇದಕ್ಕೆ ಸ್ವಲ್ಪ ಮುನ್ನ ಮಾಡಿದ ಇನ್ನೊಂದು ಟ್ವೀಟಿನಲ್ಲಿ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾದುದಕ್ಕೆ ಅಭಿನಂದಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಅರ್ಪಿಸಿದರು.
ಇದಕ್ಕೆ ಸ್ವಲ್ಪ ಮುನ್ನ ಮಾಡಿದ ಇನ್ನೊಂದು ಟ್ವೀಟಿನಲ್ಲಿ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾದುದಕ್ಕೆ ಅಭಿನಂದಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಅರ್ಪಿಸಿದರು.
‘ಧನ್ಯವಾದಗಳನ್ನು
ಅರ್ಪಿಸುತ್ತೇನೆ ಪ್ರಧಾನಿ ನರೇಂದ್ರ ಮೋದಿಜಿ. ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ದೃಢ ಸರ್ಕಾರವನ್ನು ನೀಡುವ ಖಾತರಿಯನ್ನು ನಾವು ನೀಡುತ್ತೇವೆ’ ಎಂದು
ನೂತನ ಉಪ ಮುಖ್ಯಮಂತ್ರಿ ಟ್ವೀಟ್
ಮಾಡಿದರು.
ತಮ್ಮ
ಟ್ವಿಟ್ಟರ್ ಖಾತೆಗೆ ’ಮಹಾರಾಷ್ಟ್ರದ ಉಪಮುಖ್ಯಮಂತ್ರಿ’ ಎಂಬ
ಪದಗಳನ್ನೂ ಸೇರಿಸಿಕೊಂಡ ಅಜಿತ್, ಆ ಬಳಿಕ ಮಾಡಿದ
ಸರಣಿ ಟ್ವೀಟ್ಗಳಲ್ಲಿ ಸ್ಮೃತಿ ಇರಾನಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತಿತರ ಹಲವಾರು ಬಿಜೆಪಿ ನಾಯಕರಿಗೂ ತಮ್ಮನ್ನು ಅಭಿನಂದಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಶನಿವಾರ
ಬೆಳಗ್ಗೆ ಮುಖ್ಯಮಂತ್ರಿ
ದೇವೇಂದ್ರ ಫಡ್ನವಿಸ್ ಜೊತೆಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಸ್ವೀಕರಿಸಿದ್ದ ಅಜಿತ್ ಪವಾರ್ ಅವರನ್ನು ಶನಿವಾರ ಸಂಜೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕಿತ್ತು ಹಾಕಿತ್ತು. ’ಫಡ್ನವಿಸ್ ಸರ್ಕಾರವನ್ನು ಬೆಂಬಲಿಸುವ ಅಜಿತ್
ಪವಾರ್ ಅವರ ನಿರ್ಧರವು ಪಕ್ಷದ ಸಿದ್ಧಾಂತಗಳಿಗೆ ಅನುಗುಣವಾಗಿಲ್ಲ’ ಎಂದು
ಎನ್ಸಿಪಿ ಹೇಳಿತ್ತು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾರತೀಯ ಜನತಾ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡ ತಮ್ಮ ಅಳಿಯ ಅಜಿತ್ ಪವಾರ್ ನಿರ್ಧಾರವನ್ನು ’ಅಶಿಸ್ತಿನ ಕೃತ್ಯ’ ಎಂಬುದಾಗಿ ಬಣ್ಣಿಸಿದ್ದರು ಮತ್ತು ಬಿಜೆಪಿ ಜೊತೆ ಸೇರಿದ ಅಜಿತ್ ಪವಾರ್ ಮತ್ತು ಇತರ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ವಿಧಿಗಳ ಅಡಿಯಲ್ಲಿ ಶಿಸ್ತುಕ್ರಮಕ್ಕೆ ಒಳಗಾಗುತ್ತಾರೆ ಎಂದು ಹೇಳಿದ್ದರು.
ಬಿಜೆಪಿ
ನೇತೃತ್ವದ ಸರ್ಕಾರವು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಗೆಲ್ಲುವುದಿಲ್ಲ ಎಂದು ಒತ್ತಿ ಹೇಳಿದ್ದ ಶರದ್ ಪವಾರ್ ’ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ಮೈತ್ರಿಕೂಟ’ವು ಸಂಖ್ಯಾಬಲವನ್ನು ಹೊಂದಿದ್ದು
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಿದ್ದರು.
ಜಾರಿ
ನಿರ್ದೇಶನಾಲಯದ (ಇಡಿ) ಹೆದರಿಕೆಯಿಂದ ಅಳಿಯ ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿರಬಹುದೇ ಎಂಬ ಬಗ್ಗೆ ತಮಗೆ ಗೊತ್ತಿಲ್ಲ ಎಂದೂ ಶರದ್ ಪವಾರ್ ಹೇಳಿದ್ದರು.
ಬಹುಕೋಟಿ
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್ಇಬಿ) ಹಗರಣ ಪ್ರಕರಣದಲ್ಲಿ ಅಜಿತ್ ಪವಾರ್ ಅವರ ಹೆಸರೂ ಸೇರಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
No comments:
Post a Comment