Sunday, December 22, 2019

'ಪೌರತ್ವ’ ಪ್ರತಿಭಟನೆ, ಹಿಂಸಾಚಾರ: ಉ.ಪ್ರ. ಸಾವಿನ ಸಂಖ್ಯೆ 17 ಕ್ಕೆ ಏರಿಕೆ

'ಪೌರತ್ವಪ್ರತಿಭಟನೆ, ಹಿಂಸಾಚಾರ: .ಪ್ರಬಲಿ 17 ಕ್ಕೆ ಏರಿಕೆ
ಯಾರ ಹಳೆ ದಾಖಲೆಗಾಗಿಯೂ ಕಿರುಕುಳ ಇಲ್ಲ: ಗೃಹ ಸಚಿವಾಲಯ ಸ್ಪಷ್ಟನೆ
ನವದೆಹಲಿ: ಉತ್ತರ ಪ್ರದೇಶದ ರಾಮಪುರ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದ ಹೊಸ ಪ್ರತಿಭಟನೆ ಹಿಂಸಾಚಾರದಲ್ಲಿ ಮೃತನಾದ ವ್ಯಕ್ತಿ ಸೇರಿದಂತೆ  2019 ಡಿಸೆಂಬರ್ 21ರ ಶನಿವಾರದವರೆಗೆ ರಾಜ್ಯದಲ್ಲಿ ಹಿಂಸಾಚಾರಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿತು. ಮಧ್ಯೆ ಯಾವುದೇ ಭಾರತೀಯನ ಹಳೆಯ ದಾಖಲೆಗಳಿಗಾಗಿ ಕಿರುಕುಳ ನೀಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟ ಪಡಿಸಿತು.

ರಾಜ್ಯದಲ್ಲಿ ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಒಬ್ಬ ಬಾಲಕನೂ ಸೇರಿದ್ದಾನೆ.

ರಾಮಪುರದಲ್ಲಿ 2019 ಡಿಸೆಂಬರ್ 21ರ ಶನಿವಾರ ಸುಮಾರು ಎರಡು ಗಂಟೆ ಕಾಲ ಕಲ್ಲು ತೂರಾಟ ಮತ್ತು ಬೆಂಕಿ ಹಚ್ವುವ ಕೃತ್ಯದಲ್ಲಿ ತೊಡಗಿದ್ದ ಹಿಂಸಾಚಾರ ನಿರತ ಪ್ರತಿಭಟನಕಾರರ ಗುಂಪು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು. ಕಾನ್ಪುರದಲ್ಲೂ ಪ್ರತಿಭಟನಕಾರರು ಕಲ್ಲೆಸೆತದಲ್ಲಿ ತೊಡಗಿದ್ದು, ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದರು ಎಂದು ವರದಿಗಳು ಹೇಳಿವೆ.

ಮುಸ್ಲಿಮ್ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದನ್ನು ಅನುಸರಿಸಿ, ಯಾವುದೇ ಪ್ರದರ್ಶನಕ್ಕೆ ಆಡಳಿತವು ಅನುಮತಿ ನಿರಾಕರಿಸಿದ ಬಳಿಕ ಹಿಂಸಾಚಾರ ಸಂಭವಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಕೇಂದ್ರೀಯ ಅರೆ ಸೇನಾ ಪಡೆಗಳು ಧಾವಿಸಿದವು.

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿ, ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದರು.

‘ಇಂತಹ ಪ್ರತಿಭಟನೆಗಳಿಂದ ಯಾವುದೇ ಲಾಭವಿಲ್ಲ, ಸಾರ್ವಜನಿಕ ಆಸ್ತಿ ನಾಶ, ಜನರಿಗೆ ಹಾನಿಯಾಗುತ್ತದೆ ಅಷ್ಟೆಎಂದು ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದರು.
ಇದಕ್ಕೆ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿದ್ದರು.

2019 ಡಿಸೆಂಬರ್ 20ರ ಶುಕ್ರವಾರದ ಹಿಂಸಾಚಾರದಲ್ಲಿ ಮೀರತ್ನಲ್ಲಿ ಮಂದಿ, ಕಾನ್ಪುರ, ಬಿಜ್ನೋರ್, ಫಿರೋಜಾಬಾದಿನಲ್ಲಿ ತಲಾ ಇಬ್ಬರು ಮತ್ತು ಮುಜಾಫ್ಫರನಗರ, ಸಂಭಲ್ ಮತ್ತು ವಾರಾಣಸಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದರು. ವಾರಾಣಸಿಯಲ್ಲಿ ಪೊಲೀಸ್ ಲಾಠಿ ಪ್ರಹಾರದ ಬಳಿಕ ಸಂಭವಿಸಿದ ಕಾಲ್ತುಳಿತದಲ್ಲಿ ವರ್ಷದ ಒಬ್ಬ ಬಾಲಕ ಸಾವನ್ನಪ್ಪಿದ್ದ. ೨೮ ವರ್ಷದ ಯುವಕನೊಬ್ಬ ಲಕ್ನೋದಲ್ಲಿ ಗುರುವಾರದ ಹಿಂಸಾಚಾರಕ್ಕೆ ಬಲಿಯಾಗಿದ್ದ.

ಮೀರತ್ನಲ್ಲಿ ಮೃತರಾದ ಐದು ಮಂದಿಯೂ ಗುಂಡೇಟಿನ ಗಾಯಗಳ ಪರಿಣಾಮವಾಗಿ ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಜಹೀರ್, ಮೊಹ್ಸಿನ್, ಮತ್ತು ನೂರ್ ಮೊಹಮ್ಮದ್ ಅವರನ್ನು ಹಿಂದಿನ ದಿನ ಆಸ್ಪತ್ರೆಗೆ ತರುವಾಗಲೇ ಸಾವನ್ನಪ್ಪಿದ್ದರು. ಅಸಿಫ್ ಎಂಬಾತ ಶುಕ್ರವಾರ ಇಲ್ಲಿ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಅಸಿಫ್ ರಾತ್ರಿ ಚಿಕಿತ್ಸೆ ಕಾಲದಲ್ಲಿ ಸಾವನ್ನಪ್ಪಿದ್ದಾನೆಎಂದು ಮೀರತ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಹರ್ಷ ವರ್ಧನ್ ಹೇಳಿದರು.

ಇವರ ಹೊರತಾಗಿ, ನೆರೆಯ ಜಿಲ್ಲೆಗಳಿಂದ ಇಲ್ಲಿಗೆ ಚಿಕಿತ್ಸೆಗಾಗಿ ಗಾಯಾಳುಗಳನ್ನು ಕಳುಹಿಸಲಾಗಿದೆ. ಮೋಹಿತ್ ಶರ್ಮ ಎಂಬ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಡಾ. ಹರ್ಷ ವರ್ಧನ್ ನುಡಿದರು.

ಕ್ಷಿಪ್ರ
ಕಾರ್ಯಾಚರಣಾ ಪಡೆಯ ಮೂವರು ಸಿಬ್ಬಂದಿಯನ್ನು ಮತ್ತು ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಯ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಾರಾಣಸಿಯಲ್ಲಿ ಕಾಲ್ತುಳಿತದಿಂದ ಗಾಯಗೊಂಡು ಬಳಿಕ ಸಾವನ್ನಪ್ಪಿದ ಮೊಹಮ್ಮದ ಸಗೀರ್ ಎಂಬ ವರ್ಷದ ಬಾಲಕನ ಅಂತ್ಯಕ್ರಿಯೆಯನ್ನು ಈದಿನ  ಬೆಳಗ್ಗೆ ಪೊಲೀಸ್ ಬಂದೋಬಸ್ತಿನಲ್ಲಿ  ನೆರವೇರಿಸಲಾಯಿತು.
ವಾರಾಣಸಿಯ ಬಜಾರ್ ದೀಹ ಪ್ರದೇಶದಲ್ಲಿ ಪೊಲೀಸರು ಪ್ರತಿಭಟನಕಾರರ ಮೇಲೆ ಬೆತ್ತ ಪ್ರಹಾರ ನಡೆಸಿದಾಗ ಕಾಲ್ತುಳಿತ ಉಂಟಾಗಿ, ಕಡಿದಾದ ಓಣಿಯಲ್ಲಿ ಆಟವಾಡುತ್ತಿದ್ದ ಸಗೀರ್ ಗಾಯಗೊಂಡಿದ್ದ. 
ಮಗುವಿನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ತಾವು ಮಾತನಾಡಿರುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮ ಹೇಳಿದರು.

ಬಂಧನ, ನಿರ್ಬಂಧ ಕ್ರಮ: ಶುಕ್ರವಾರದ ಪ್ರಾರ್ಥನೆಯ ಬಳಿಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಿಂಸಾಚಾರ, ಆಸ್ತಿ ದಹನದ ಕೃತ್ಯಗಳು ಭುಗಿಲೆದ್ದಿದ್ದವು. ಬೆನ್ನಲ್ಲೇ ವ್ಯಾಪಕ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸುವುದರ ಜೊತೆಗೆ ಇಂಟರ್ ನೆಟ್ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಸಂಯಮರಹಿತರ ಮೇಲೆ ಪೊಲೀಸರು ನಿಗಾ ಇಟ್ಟಿದ್ದು ಸುಮಾರು ೧೫೦ ಮಂದಿಯನ್ನು ಬಂಧಿಸಿದ್ದಾರೆ. ಲಕ್ನೋದಲ್ಲಿ ೩೬ ಮಂದಿಯನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಕಾನೂನು ಸುವ್ಯವಸ್ಥೆ) ಪ್ರವೀಣ್ ಕುಮಾರ್ ನುಡಿದರು.

ಇಂಟರ್ ನೆಟ್ ಮೇಲಿನ ನಿರ್ಬಂಧವನ್ನು ಇನ್ನೂ ಏಳು ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು ೨೧ ಜಿಲ್ಲೆಗಳಲ್ಲಿ ಮುಂದಿನ ಆದೇಶದವರೆಗೂ ಇಂಟರ್ ನೆಟ್ ಮೇಲೆ ನಿರ್ಬಂಧ ಇರುತ್ತದೆ ಎಂದು ಅಧಿಕಾರಿಗಳು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿಯನ್ನು ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಬಂಧಿಸಿದ್ದಾರೆ.

ಮೀರತ್, ಬಾಗಪತ್, ಹಾಪುರ, ಬುಲಂದಶಹರ, ಗಾಜಿಯಾಬಾದ್ ಮತ್ತು ಗೌತಮಬುದ್ಧ ನಗರ ಸೇರಿದಂತೆ ಜಿಲ್ಲೆಗಳನ್ನು ಒಳಗೊಂಡ ಮೀರತ್ ವಲಯದಲ್ಲಿ ೧೦೨ ಮಂದಿಯನ್ನು ಬಂಧಿಸಲಾಗಿದ್ದು, ದಂಗೆ, ಕಿಚ್ಚಿಡುವಿಕೆಗೆ ಸಂಬಂಧಿಸಿದಂತೆ ೧೦ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಹರಾನ್ ಪುರ, ಕಾನ್ಪುರದಲ್ಲೂ ನೂರಾರು ಮಂದಿಯನ್ನು ಬಂಧಿಸಲಾಗಿದೆ. ಪ್ರಯಾಗರಾಜ್ ನಲ್ಲಿ ಸೆಕ್ಷನ್ ೧೪೪ ಉಲ್ಲಂಘನೆಗಾಗಿ ೧೦,೦೦೦ ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
ಶುಕ್ರವಾರ ಪ್ರಾರ್ಥನೆಯ ಬಳಿಕ ಕಾಲ್ತುಳಿತ ಸಂಭವಿಸಿದ ವಾರಾಣಸಿಯ ಬಜಾರೀಹ ಪ್ರದೇಶದಲ್ಲಿ ಸ್ಮಶಾನ ಮೌನ ನೆಲೆಸಿದೆ. ಕಾಲ್ತುಳಿತದಲ್ಲಿ ಗಾಯಗೊಂಡಿರುವ ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ದೆಹಲಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥನ ಬಂಧನ: ದೆಹಲಿಯಲ್ಲಿ ಹಿಂದಿನ ದಿನ  ಮಧ್ಯಾಹ್ನ ಪ್ರಾರ್ಥನೆ ಮುಗಿದ ಬಳಿಕ ಆರಂಭವಾಗಿದ್ದ ಪ್ರತಿಭಟನೆಗಳ ವೇಳೆಯಲ್ಲಿ ಪೊಲೀಸರ ಜೊತೆಗೆ ಕಣ್ಣಾಮುಚ್ಚಾಲೆ ಆಡಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರನ್ನು ಭದ್ರತಾ ಸಿಬ್ಬಂದಿ  2019 ಡಿಸೆಂಬರ್ 21ರ ಶನಿವಾರ ನಸುಕಿನಲ್ಲಿ ಜಾಮಿಯಾ ಮಸೀದಿಯಲ್ಲಿ ಬಂಧಿಸಿದರು. ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಅವರನ್ನು ೧೪ ದಿನಗಳ ಅವಧಿಗೆ ಸೆರೆಮನೆಗೆ ಕಳುಹಿಸಿತು. ಆಜಾದ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸುತ್ತಿದ್ದಂತೆಯೇ ಆಜಾದ್ ಅವರನ್ನು ತಿಹಾರ್ ಸೆರೆಮನೆಗೆ ಒಯ್ಯಲಾಯಿತು.

ಭೀಮ್ ಆರ್ಮಿ ಕಾರ್ಯಕರ್ತನೊಬ್ಬನ ಪ್ರಕಾರ, ಶುಕ್ರವಾರ ಮಧ್ಯಾಹ್ನ ಗಂಟೆ ಸುಮಾರಿಗೆ ಪ್ರತಿಭಟನೆ ಆರಂಭವಾದಾಗ ಮೆರವಣಿಗೆಯಲ್ಲಿ ಆಜಾದ್ ಹಾಜರಿದ್ದರು. ಪೊಲೀಸರು ಬಂಧಿಸಲು ಯತ್ನಿಸಿದಾಗ ಅವರ ಬೆಂಬಲಿಗರು ಅವರನ್ನು ಅಲ್ಲಿಂದ ತಪ್ಪಿಸಿ ಕುಟುಂಬ ಒಂದರಲ್ಲಿ ಆಶ್ರಯ ಒದಗಿಸಿದ್ದರು.

ಪುನಃ ಪ್ರತ್ಯಕ್ಷರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಭೀಮ್ ಆರ್ಮಿ ಮುಖ್ಯಸ್ಥಸರ್ಕಾರವು ಕರಾಳ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆಗಳು ಮುಂದುವರೆಯುತ್ತವೆಎಂದು ಹೇಳಿದ್ದರು.

ಪೊಲೀಸರ ಕಣ್ತಪ್ಪಿಸಿದ ಬಳಿಕ ಸಂಜೆ ಗಂಟೆ ಸುಮಾರಿಗೆ ಅವರು ಜಾಮಿಯಾ ಮಸೀದಿಗೆ ಬಂದರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರುಅವರು ಸಂವಿಧಾನದ ಪೀಠಿಕೆಯನ್ನೂ ಓದಿ ಹೇಳಿದರು ಎಂದು ಭೀಮ್ ಆರ್ಮಿ ಕಾರ್ಯಕರ್ತ ಹೇಳಿದರು.

ಜಾಮಾ ಮಸೀದಿಯ ಶಾಹಿ ಇಮಾಮ್ ಅವರೂ ಮಾತನಾಡಿಆಜಾದ್ ನಮ್ಮ ಅತಿಥಿಎಂದು ಹೇಳಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಆಜಾದ್ ತನ್ನ ಬೆಂಬಲಿಗರನ್ನು ಆಗ್ರಹಿಸಿದ್ದರು. ಹಿಂಸೆಯಲ್ಲಿ ತೊಡಗುವವರು ನಮ್ಮ ಜನರಲ್ಲ. ಚಾರಿತ್ರಿಕ ಜಾಮಾ ಮಸೀದಿಯಲಿ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. ಅಂಬೇಡ್ಕರ್ ಅನುಯಾಯಿಗಳು ಹಿಂಸೆಗೆ ಇಳಿಯುವುದಿಲ್ಲ ಎಂದೂ ಆಜಾದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಅಲಿಘಡ ಮುಸ್ಲಿಂ ವಿವಿಯಿಂದ ತನಿಖೆ: ಮಧ್ಯೆ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವು ಡಿಸೆಂಬರ್ ೧೫ರ ಅಹಿತಕರ ಘಟನೆಗಳ ಬಗ್ಗೆ ತನಿಖೆ ನಡೆಸಲು ಪಂಜಾಬ್ ಮತ್ತು ಛತೀಸ್ ಗಢ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ವಿಕೆ ಗುಪ್ತ ಅವರನ್ನು ನೇಮಕ ಮಾಡಿತು. ನ್ಯಾಯಮೂರ್ತಿ ಗುಪ್ತ ಅವರು ತಿಂಗಳ ಒಳಗಾಗಿ ತಮ್ಮ ವರದಿ ಸಲ್ಲಿಸಲಿದ್ದಾರೆ.

ಹರಿದ್ವಾರದಲ್ಲಿ ಸೆಕ್ಷನ್ ೧೪೪: ಉತ್ತರಾಖಂಡದ ಹರಿದ್ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪುನಃ ಪ್ರತಿಭಟನೆಗಳು ಭುಗಿಲೆದ್ದುದನ್ನು ಅನುಸರಿಸಿ ಈದಿನ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಯಿತು.

ದರಿಯಾಗಂಜ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ೧೫ ಮಂದಿಯನ್ನು ದೆಹಲಿ ನ್ಯಾಯಾಲಯವು ಶನಿವಾರ ಎರಡು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿತು.

ದೆಹಲಿ ವಕ್ಫ್ ಮಂಡಳಿ ಪರಿಹಾರ: ಈಮಧ್ಯೆ ದೆಹಲಿ ವಕ್ಫ್ ಮಂಡಳಿಯು ಉತ್ತರ ಪ್ರದೇಶದಲ್ಲಿ ಮೃತರಾದ ಮಂದಿ ಮತ್ತು ಮಂಗಳೂರಿನಲ್ಲಿ ಮೃತರಾದ ಇಬ್ಬರ ವಾರಸುದಾರರಿಗೆ ತಲಾ ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದೆ ಎಂದು ಮಂಡಳಿ ಮೂಲಗಳು ಹೇಳಿವೆ.

No comments:

Advertisement