ರಾಹುಲ್
ಗಾಂಧಿ ೨೦೧೯ರ ಸಾಲಿನ 'ವರ್ಷದ ಸುಳ್ಳುಗಾರ’
ಎನ್ಪಿಆರ್, ಸಿಎಎ ಕುರಿತ ಟೀಕೆಗಾಗಿ ಬಿಜೆಪಿ ತರಾಟೆ
ನವದೆಹಲಿ:
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ’ಬಡವರ ಮೇಲಿನ ಹೊರೆ (ಟ್ಯಾಕ್ಸ್)’ ಎಂಬುದಾಗಿ ಆಪಾದಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 2019 ಡಿಸೆಂಬರ್ 27ರ ಶುಕ್ರವಾರ ಪ್ರಬಲವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿ ’ರಾಹುಲ್ ಗಾಂಧಿಯವರು ೨೦೧೯ರ ಸಾಲಿನ ವರ್ಷದ ಸುಳ್ಳುಗಾರ’
ಎಂದು ಜರೆಯಿತು.
‘ರಾಹುಲ್ ಗಾಂಧಿಯವರು ತಮ್ಮ ಸುಳ್ಳುಗಳಿಂದ ಜನರನ್ನು ಮುಜುಗರಕ್ಕೆ ಈಡು ಮಾಡಿದ್ದಲ್ಲದೆ ತಮ್ಮ ಪಕ್ಷವನ್ನು ಕೂಡಾ ಮುಜುಗರಗೊಳ್ಳುವಂತೆ ಮಾಡಿದ್ದಾರೆ’ ಎಂದು ಬಿಜೆಪಿ ಹೇಳಿತು.
‘ರಾಹುಲ್ ಗಾಂಧಿಯವರು ತಮ್ಮ ಸುಳ್ಳುಗಳಿಂದ ಜನರನ್ನು ಮುಜುಗರಕ್ಕೆ ಈಡು ಮಾಡಿದ್ದಲ್ಲದೆ ತಮ್ಮ ಪಕ್ಷವನ್ನು ಕೂಡಾ ಮುಜುಗರಗೊಳ್ಳುವಂತೆ ಮಾಡಿದ್ದಾರೆ’ ಎಂದು ಬಿಜೆಪಿ ಹೇಳಿತು.
‘ಕಾಂಗ್ರೆಸ್
ಪಕ್ಷವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜನರನ್ನು ದಾರಿತಪ್ಪಿಸುತ್ತಾ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೇಳುವಂತೆ ಮಾಡಿದೆ. ಆದರೆ ನೂತನ ಪೌರತ್ವ ಕಾಯ್ದೆ ಮತ್ತು ಎನ್ಪಿಆರ್ಗೆ ಸಂಬಂಧಿಸಿದಂತೆ ಜನರು
ಸರ್ಕಾರದ ಜೊತೆ ಇದ್ದಾರೆ’ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಒತ್ತಿ ಹೇಳಿದರು.
‘ಈ ಪ್ರಕ್ರಿಯೆಗಳಿಗೆ ಯಾವುದೇ ಹಣಕಾಸಿನ ಅಥವಾ ಆರ್ಥಿಕ ವರ್ಗಾವಣೆಯ ಅಗತ್ಯವಿಲ್ಲ ಮತ್ತು ಎನ್ಪಿಆರ್ ಮಾಹಿತಿಯನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುತ್ತದೆ’ ಎಂದು ಜಾವಡೇಕರ್ ಹೇಳಿದರು.
‘ಈ ಪ್ರಕ್ರಿಯೆಗಳಿಗೆ ಯಾವುದೇ ಹಣಕಾಸಿನ ಅಥವಾ ಆರ್ಥಿಕ ವರ್ಗಾವಣೆಯ ಅಗತ್ಯವಿಲ್ಲ ಮತ್ತು ಎನ್ಪಿಆರ್ ಮಾಹಿತಿಯನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುತ್ತದೆ’ ಎಂದು ಜಾವಡೇಕರ್ ಹೇಳಿದರು.
‘ತೆರಿಗೆ’ ಸಂಗ್ರಹಿಸುವುದು
ವಿರೋಧ ಪಕ್ಷದ ಸಂಸ್ಕೃತಿ. ’ಜಯಂತಿ ತೆರಿಗೆ’ ಇರಬಹುದು,’೨ಜಿ ತೆರಿಗೆ’ ಇರಬಹುದು, ’ಕಲ್ಲಿದ್ದಲು ತೆರಿಗೆ’ ಇರಬಹುದು’ ಎಂದು ಕಾಂಗೆಸ್ ಪಕ್ಷಕ್ಕೆ ಸಚಿವರು ಎದಿರೇಟು ನೀಡಿದರು.
ರಾಷ್ಟ್ರೀಯ
ಜನಸಂಖ್ಯಾ ನೋಂದಣಿಯು (ಎನ್ಪಿಆರ್) ೨೦೧೦ರಲ್ಲೂ ನಡೆದಿತ್ತು ಎಂದೂ ಅವರು ಬೊಟ್ಟು ಮಾಡಿದರು.
‘ರಾಹುಲ್
ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಅವರು ಏನು ಬೇಕಾದರೂ ಹೇಳುತ್ತಿದ್ದರು ಮತ್ತು ಎಲ್ಲ ಕಾಲದಲ್ಲೂ ಸುಳ್ಳು ಹೇಳುತ್ತಿದ್ದರು. ಈಗ ಅವರು ಪಕ್ಷದ
ಅಧ್ಯಕ್ಷರಲ್ಲ, ಆದರೆ ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ. ವರ್ಷದ ಸುಳ್ಳುಗಾರ ಎಂಬುದೊಂದು ವರ್ಗ ಇದ್ದರೆ, ಅವರು ಅದರಲ್ಲಿ ಇರುತ್ತಿದ್ದರು. ಅವರ ಟೀಕೆಗಳು ಅವರ ಕುಟುಂಬವನ್ನೇ ಮುಜುಗರಗೊಳ್ಳುವಂತೆ ಮಾಡುತ್ತಿದ್ದವು. ಅವರ ಸುಳ್ಳುಗಳು ಈಗ ಅವರ ಪಕ್ಷ
ಮತ್ತು ಇಡೀ ರಾಷ್ಟ್ರವೇ ಮುಜುಗರಗೊಳ್ಳುವಂತೆ ಮಾಡಿವೆ’ ಎಂದು ಜಾವಡೇಕರ್ ನುಡಿದರು.
ಇದಕ್ಕೆ
ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ’ಆರ್ಥಿಕ ಸ್ಥಿತಿ ಅಥವಾ ಮಹಿಳಾ ಸುರಕ್ಷತೆಯಂತಹ ರಾಹುಲ್ ಗಾಂಧಿಯವರ ಕಠಿಣ ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋದಾಗ ಆಡಳಿತ ಪಕ್ಷವು ದೂಷಣೆ ಮತ್ತು ವೈಯಕಿಕ ದಾಳಿಗಳಿಗೆ ಇಳಿಯುತ್ತಿದೆ’ ಎಂದು
ಟೀಕಿಸಿತು.
‘ಬಿಜೆಪಿಯ
ಉನ್ನತ ನಾಯಕತ್ವದಲ್ಲಿ ಸ್ಟಾರ್
ವಾರ್ ನಡೆಯುತ್ತಿದೆ. ಸಂಸತ್ತಿನಲ್ಲಿ ಒಬ್ಬರು ಒಂದು ಹೇಳುತ್ತಾರೆ, ಮತ್ತು ರಾಮಲೀಲಾ ಮೈದಾನದಲ್ಲಿ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ
ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿ ಚಾಟಿ ಬೀಸಿದರು.
ರಾಹುಲ್ ಗಾಂಧಿಯವರು ಪ್ರತಿಯೊಂದು ವೇದಿಕೆಯಿಂದಲೂ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ, ಸರ್ಕಾರ ಅವುಗಳಿಗೆ ಉದ್ದಟತನದ ಉತ್ತರ ಕೊಡುತ್ತದೆ. ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಸರ್ಕಾರ ಈರೀತಿ ವೈಯಕ್ತಿಕ ದಾಳಿಗೆ ಇಳಿಯುತ್ತದೆ’ ಎಂದು ಅವರು ಹೇಳಿದರು.

No comments:
Post a Comment