Thursday, December 19, 2019

ಪಾಕ್ ಸುಪ್ರೀಂಕೋರ್ಟ್‌ನ್ನು ನಾವು ಅನುಸರಿಸಬೇಕಂತೆ.. ಏಕೆ ಗೊತ್ತೇ?

ಪಾಕ್ ಸುಪ್ರೀಂಕೋರ್ಟ್ನ್ನು ನಾವು ಅನುಸರಿಸಬೇಕಂತೆ.. ಏಕೆ ಗೊತ್ತೇ?
ನವದೆಹಲಿ:  ಅಟಾರ್ನಿ  ಜನರಲ್ ಕೆಕೆ ವೇಣುಗೋಪಾಲ್ ಅವರು ಭಾರತದ ಸುಪ್ರೀಂಕೋರ್ಟ್ ಕನಿಷ್ಠ ಒಂದು ವಿಷಯದಲ್ಲಾದರೂ ಪಾಕಿಸ್ತಾನಿ ಸುಪ್ರೀಂಕೋರ್ಟ್ನ್ನು ಅನುಸರಿಸಬೇಕು ಎಂದು  2019 ಡಿಸೆಂಬರ್  18ರ ಬುಧವಾರ ಬಯಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ವಿಚಾರಣೆ ಕಾಲದಲ್ಲಿ ತಮ್ಮ ಬಯಕೆಯನ್ನು ಪ್ರಕಟಿಸಿದ ವೇಣುಗೋಪಾಲ್ ಅವರು ನ್ಯಾಯಾಲಯ ಕೊಠಡಿಯ ಕೇಂದ್ರದಲ್ಲಿ ಪೋಡಿಯಂ ಇರಬೇಕು, ಆಗ ಒಂದು ಸಮಯದಲ್ಲಿ ಒಬ್ಬ ವಕೀಲರಿಗೆ ಮಾತ್ರ ವಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸುಪ್ರೀಂಕೋರ್ಟಿನಲ್ಲಿ ಏಕಕಾಲಕ್ಕೆ ಹಲವಾರು ವಕೀಲರು ಮಾತನಾಡುವುದು ಸಂಪೂರ್ಣ ಅನುಚಿತ ಎನಿಸುತ್ತದೆ ಎಂದು ವೇಣುಗೋಪಾಲ್ ನುಡಿದರು.

ನಾವು ಕೂಡಾ ಪಾಕಿಸ್ತಾನದ ಸುಪ್ರೀಂಕೋರ್ಟನ್ನು ಅನುಸರಿಸೋಣ. ಅಲ್ಲಿ ಕೇಂದ್ರ ಭಾಗದಲ್ಲಿ ಒಂದು ಪೋಡಿಯಂ ಇದೆ. ಮತ್ತು ಒಂದು ಸಮಯದಲ್ಲಿ ಒಬ್ಬ ವಕೀಲ ಮಾತ್ರ ವಾದಿಸಬಹುದು. ಇಲ್ಲಿಯಂತೆ ೧೦ ವಕೀಲರು ಒಂದೇ ವೇಳೆಯಲ್ಲಿ ಮಾತನಾಡುವುದಿಲ್ಲ. ಇದರಿಂದಾಗಿ ನಿಮಗೆ ಏನೂ ಅರ್ಥವಾಗುವುದಿಲ್ಲಎಂದು ಹಿರಿಯ ವಕೀಲ ಹೇಳಿದರು.

ಅಟಾರ್ನಿ  ಜನರಲ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆ ವೇಳೆಯಲ್ಲಿ ಭಾರತ ಸರ್ಕಾರದ ಪರವಾಗಿ ಹಾಜರಾಗಿದ್ದರು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಮ್ಮ ವಾದ ಆರಂಭಿಸಿದಾಗ,  ಇತರ ಹಲವಾರು ವಕೀಲರು ಸಾಲಿನಿಂದ ಆಚೆ ನುಗ್ಗಿ ಒಟ್ಟಿಗೇ ಮಾತನಾಡಲು ಆರಂಭಿಸಿದರು. ಇದು ವೇಣುಗೋಪಾಲ್ ಅವರಿಗೆ ಇರುಸುಮುರುಸು ಉಂಟು ಮಾಡಿತು. ’ಇಷ್ಟೊಂದು ವಕೀಲರು ಒಟ್ಟಿಗೇ ಮಾತನಾಡುವ ನ್ಯಾಯಾಲಯ ಇದೊಂದೇ ಇರಬಹುದು. ಇಂತಹದ್ದು ಬೇರೆಲ್ಲೂ ನಡೆಯುವುದಿಲ್ಲಎಂದು ವೇಣುಗೋಪಾಲ್ ಹೇಳಿದರು.

ಬೇರೆ ನ್ಯಾಯಾಲಯದಲ್ಲಿ ಹೀಗೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ಪ್ರತಿಕ್ರಿಯಿಸಿದರು.

ಪಾಕಿಸ್ತಾನದ ಸುಪ್ರೀಂಕೋರ್ಟಿನಲ್ಲಿ ನಾನಿದ್ದೆ. ಅವರು ಅಲ್ಲಿ ಪೋಡಿಯಂ ಹೊಂದಿದ್ದಾರೆ. ಕೇವಲ ಒಬ್ಬ ವಕೀಲ ವಾದ ಮಾಡುತ್ತಾನೆಎಂದು ವೇಣುಗೋಪಾಲ್ ಉತ್ತರಿಸಿದರು.

ಹೈಕೋರ್ಟ್ಗಳಲ್ಲಿ ಕೂಡಾ ಪರಿಸ್ಥಿತಿ ಇದಕ್ಕಿಂತ ಎಷ್ಟೋ ಚೆನ್ನಾಗಿದೆ. ಹೈಕೋರ್ಟ್ಗಳಿಗೆ ಹೋಗುವ ಇದೇ ವಕೀಲರು ಶಿಸ್ತುಬದ್ಧರಾಗಿರುತ್ತಾರೆ. ಅವರು ಅಲ್ಲಿ ಸ್ವತಃ ಭಿನ್ನವಾಗಿಯೇ ವರ್ತಿಸುತ್ತಾರೆ. ಆದರೆ ಇಲ್ಲಿಗೆ ಬಂದೊಡನೆಯೇ ಅವರು ಎಲ್ಲರೂ ಒಂದೇ ವೇಳೆಯಲ್ಲಿ ಒಟ್ಟಿಗೆ ಮಾತನಾಡುತ್ತಾರೆಎಂದು ಅಟಾರ್ನಿ  ಜನರಲ್ ನುಡಿದರು.

ಯಾರು ಯಾರನ್ನು ಅನುಸರಿಸಬೇಕು ಎಂದು ನಾನು ಹೇಳಲು ಸಾಧ್ಯವಿಲ್ಲ. ಆದರೆ ಏಕಕಾಲದಲ್ಲಿ ಮಾತನಾಡಬೇಡಿ ಎಂದು ನಾನು ವಕೀಲರಿಗೆ ಪದೇ ಪದೇ ಹೇಳಿದ್ದೇನೆ ಎಂದು ಸಿಜೆಐ ನುಡಿದರು. ’ಯೋಚಿಸುವುದು ಅವರಿಗೆ ಬಿಟ್ಟ ವಿಷಯ, ಈಗ ನೀವು ಕೂಡಾ ಮಾತನಾಡಿದ್ದೀರಿಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದರು.

No comments:

Advertisement