ಪ್ರಧಾನಿ
ಮೋದಿ ಬಗ್ಗೆ ರಾಹುಲ್ 'ಸುಳ್ಳು’ ಮೂದಲಿಕೆ: ೨೦೧೧ರ
ಪಿಐಬಿ ಪತ್ರಿಕಾ ಹೇಳಿಕೆ ಪ್ರಕಟಣೆ ಮೂಲಕ ಬಿಜೆಪಿ ಎದಿರೇಟು
ನವದೆಹಲಿ: ದೇಶದಲ್ಲಿನ ’ಬಂಧನ ಕೇಂದ್ರ’ಗಳ ಬಗ್ಗೆ ಸಾಮಾಜಿಕ
ಮಾಧ್ಯಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕದನ ನಡೆಸುತ್ತಿದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ಸಹಿತವಾದ ’ಪ್ರಧಾನಿಯ ಸುಳ್ಳು’
(ಜೂಟ್) ಅವಹೇಳನಕ್ಕೆ ಭಾರತೀಯ ಜನತಾ ಪಕ್ಷವು ೨೦೧೧ರ ಪಿಐಬಿ ಪತ್ರಿಕಾ ಹೇಳಿಕೆ ಪ್ರದರ್ಶಿಸುವ ಮೂಲಕ 2019 ಡಿಸೆಂಬರ್
26ರ ಗುರುವಾರ ಎದಿರೇಟು
ನೀಡಿತು.
ಮೊದಲಿಗೆ
’ಕದನ’ ಆರಂಭಿಸಿದ
ರಾಹುಲ್ ಗಾಂಧಿಯವರು ಎಡಿಟ್ ಮಾಡಲಾದ ವಿಡಿಯೋ ದೃಶ್ಯಾವಳಿ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಭಾಗವಿದ್ದ ಪತ್ರಿಕಾ ತುಣುಕಿನ ಜೊತೆಗೆ ಲಗತ್ತಿಸಿ ಟ್ವೀಟ್ ಮಾಡಿದ್ದರು. ಭಾರತದಲ್ಲಿ ಬಂಧನ ಕೇಂದ್ರಗಳು ಇಲ್ಲ ಎಂಬುದಾಗಿ ಪ್ರಧಾನಿ ಮಾಡಿದ ಭಾಷಣದ ವರದಿ ಆ ಪತ್ರಿಕಾ ತುಣುಕಿನಲ್ಲಿ
ಇತ್ತು.
ಜೂಟ್,
ಜೂಟ್, ಜೂಟ್ ಪದಗಳ ಜೊತೆಗೆ ಹ್ಯಾಷ್ಟ್ಯಾಗ್ ಲಗತ್ತಿಸಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷರು ’ಆರ್ಎಸ್ಎಸ್ ನ ಪ್ರಧಾನಿಯವರು ಭಾರತ
ಮಾತೆಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು
ಹಿಂದಿಯಲ್ಲಿ ಅಡಿಟಿಪ್ಪಣಿ ಬರೆದಿದ್ದರು.
ಎರಡು
ಗಂಟೆಗಳ ಒಳಗಾಗಿ, ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತು. ಪಕ್ಷದ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವೀಯ ಅವರು ೩೬೨ ಅಕ್ರಮ ವಲಸೆಗಾರರನ್ನು ಅಸ್ಸಾಮಿನ ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ ಎಂಬ ಶೀರ್ಷಿಕೆ ಸಹಿತವಾದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ೨೦೧೧ರ ಪತ್ರಿಕಾ ಪ್ರಕಟಣೆಯ ಸ್ಕ್ರೀನ್ ಶಾಟ್ನ್ನು ಟ್ವೀಟ್ ಮಾಡಿದರು.
‘ರಾಹುಲ್
ಗಾಂಧಿ. ಅಸ್ಸಾಮಿನಲ್ಲಿ ೩೬೨ ಅಕ್ರಮ ವಲಸೆಗಾರರನ್ನು ’ಬಂಧನ ಶಿಬಿರಗಳಿಗೆ’ ಕಳುಹಿಸಲಾಗಿದೆ
ಎಂಬುದಾಗಿ ಪ್ರತಿಪಾದಿಸಿ ಕಾಂಗ್ರೆಸ್ ಸರ್ಕಾರವು ಬಿಡುಗಡೆ ಮಾಡಿದ ೨೦೧೧ರ ಪತ್ರಿಕಾ ಪ್ರಕಟಣೆಯನ್ನು ನೋಡಿದ್ದೀರಾ? ಕೇವಲ ಭಾರತವು ನಿಮ್ಮನ್ನು ಪದೇ ಪದೇ ತಿರಸ್ಕರಿಸಿದೆ ಎಂಬ ಕಾರಣಕ್ಕಾಗಿ ನೀವು ಅದನ್ನು ನಿಮ್ಮ ದ್ವೇಷ ರಾಜಕಾರಣ ಮತ್ತು ಭೀತಿಹರಡುವ ಮೂಲಕ ನಾಶ ಪಡಿಸಲು ಟೊಂಕ ಕಟ್ಟಿದ್ದೀರಿ’ ಎಂದು
ಮಾಳವೀಯ ಅವರು ತಮ್ಮ ಭಾವಚಿತ್ರ ಸಹಿತವಾದ ಟ್ವೀಟಿನಲ್ಲಿ ಎದಿರೇಟು ನೀಡಿದರು.
ಪ್ರಧಾನಿ ಮೋದಿಯವರು ಭಾನುವಾರ ದೆಹಲಿಯಲ್ಲಿ ಭಾರೀ ರ್ಯಾಲಿ ಒಂದರಲ್ಲಿ ಮಾತನಾಡುತ್ತಾ ಭಾರತದಲ್ಲಿ ಯಾವುದೇ ಬಂಧನ ಕೇಂದ್ರಗಳು ಇಲ್ಲ ಎಂದು ಹೇಳಿದ್ದರು. ’ಯಾರೇ ಮುಸ್ಲಿಮರನ್ನೂ ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತಿಲ್ಲ ಇಲ್ಲವೇ ಭಾರತದಲ್ಲಿ ಎಲ್ಲಿಯೂ ಬಂಧನ ಕೇಂದ್ರಗಳು ಇಲ್ಲ. ಕೆಲವು ವ್ಯಕ್ತಿಗಳು ಸುಳ್ಳುಗಳನ್ನು ಹರಡಲು ಹೋಗುವ ದೂರದ ಬಗ್ಗ ನನಗೆ ಆಘಾತವಾತ್ತಿದೆ’ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದರು.
‘ನಗರ ನಕ್ಸಲರು’ ಮತ್ತು ವಿವಿಧ ವಿರೋಧ ಪಕ್ಷಗಳು ನೂತನ ಪೌರತ್ವ ಕಾಯ್ದೆಯ ಬಗ್ಗೆ ಅಪಪ್ರಚಾರ ಅಭಿಯಾನ ಆರಂಬಿಸಿದ್ದಾರೆ ಏಕೆಂದರೆ ಅವರಿಗೆ ನಾನು ಲೋಕಸಭಾ ಚುನಾವಣೆಯಲ್ಲಿ ಎರಡನೇ ಅವಧಿಗೆ ಗೆದ್ದು ಅಧಿಕಾರಕ್ಕೆ ಬಂದ ಬಗ್ಗೆ ಸಿಟ್ಟು ಇದೆ’ ಎಂದು ಪ್ರಧಾನಿ ಹೇಳಿದ್ದರು.
ಉತ್ತರ ಪ್ರದೇಶ ಒಂದರಲ್ಲೇ ೧೫ ಮಂದಿಯನ್ನು ಬಲಿ ತೆಗೆದುಕೊಂಡ, ನೂತನ ಪೌರತ್ವ ಕಾಯ್ದೆ ವಿರೋಧಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಕಾಂಗ್ರೆಸ್ ಪಕ್ಷವು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ವದಂತಿಗಳನ್ನು ಹರಡುತ್ತಿದೆ ಎಂದು ಆಪಾದಿಸಿದ್ದರು.

ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದವು. ’ತಮ್ಮ ಸುಳ್ಳುಗಳನ್ನು ಪತ್ತೆ ಹಚ್ಚಲು ಭಾರತೀಯರು ಸರಳವಾಗಿ ಗೂಗಲ್ ಶೋಧ ಮಾಡಲಾರರು ಎಂದು ಪ್ರಧಾನಿ ಮೋದಿ ನಂಬಿದ್ದಾರೆಯೇ? ಬಂಧನ ಕೇಂದ್ರಗಳು ವಾಸ್ತವ
ಮತ್ತು ಈ ಸರ್ಕಾರ ಅಧಿಕಾರದಲ್ಲಿ
ಇರುವವರೆಗೂ ಮುಂದುವರೆಯಲಿವೆ’ ಎಂದು
ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್
ಮಾಡಿತ್ತು.
ಸಂಸತ್ತಿನಲಿ
ಡಿಸೆಂಬರ್ ೧೧ ರಂದು ಪೌರತ್ವ
(ತಿದ್ದುಪಡಿ) ಕಾಯ್ದೆ ಅನಮೋದನೆ ಪಡೆದ ಬಳಿಕ ಅದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದು, ಹಲವರು ಸಾವನ್ನಪ್ಪಿದರೆ ಬೆಂಕಿ ಹಚ್ಚಿದ್ದರ ಪರಿಣಾಮವಾಗಿ ಹಲವಾರ ಸ್ಥಿರ ಮತ್ತು ಚರ ಆಸ್ತಿಗಳು ನಾಶವಾಗಿದ್ದವು.
ರಾಹುಲ್ ಗಾಂಧಿಯವರ ಟ್ವೀಟಿಗೆ ಉತ್ತರವಾಗಿ ಬಿಜೆಪಿ ಪ್ರಕಟಿರುವ ಟ್ವೀಟಿನ ಜೊತೆಗೆ ಲಗತ್ತಿಸಲಾಗಿರುವ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ), ಭಾರತ ಸರ್ಕಾರ, ಗೃಹ ವ್ಯವಹಾರಗಳ ಸಚಿವಾಲಯದ ೨೦೧೧ರ ಡಿಸೆಂಬರ್ ೧೩ರ ದಿನಾಂಕದ ಹೇಳಿಕೆಯಲ್ಲಿ ಅಸ್ಸಾಮ್ ಸರ್ಕಾರವು ಘೋಷಿತ ವಿದೇಶೀಯರು / ಅಕ್ರಮ ವಲಸೆಗಾರರನ್ನು ಅವರ ಮೂಲಸ್ಥಳಗಳಿಗೆ ಗಡೀಪಾರು ಮಾಡುವವರೆಗೆ ಇರಿಸುವ ಸಲುವಾಗಿ ಗೋಪಾಲಪುರ, ಕೋಕ್ರಜಾರ್ ಮತ್ತು ಸಿಲ್ಚಾರ್ನಲ್ಲಿ ಮೂರು ’ಬಂಧನ ಶಿಬಿರ’ಗಳನ್ನು ಸ್ಥಾಪಿಸಿದೆ. ಒಟ್ಟು ೩೬೨ ಮಂದಿ ಘೋಷಿತ ವಿದೇಶೀಯರು/ ಅಕ್ರಮ ವಲಸೆಗಾರರನ್ನು ೨೦೧೧ರ ನವೆಂಬರ್ವರೆಗೆ ಈ ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ. ಬಂಧನ ಶಿಬಿರಗಳಿಗೆ ಕಳುಹಿಸಲಾಗಿರುವ ಘೋಷಿತ ವಿದೇಶೀಯರು/ ಅಕ್ರಮ ವಲಸೆಗಾರರ ಸಂಖ್ಯೆ ಗೋಪಾಲಪುರದಲ್ಲಿ ೨೨೧, ಕೋಕ್ರಜಾರ್ನಲ್ಲಿ ೭೯ ಮತ್ತು ಸಿಲ್ಚಾರ್ ನಲ್ಲಿ ೬೨. ಈ ಪೈಕಿ ಒಟ್ಟು ೭೮ ಜನರನ್ನು ೨೦೧೧ರ ನವೆಂಬರ್ ವರೆಗೆ ಅವರ ಮೂಲಸ್ಥಳಗಳಿಗೆ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದೆ.
ಶಿಕ್ಷಿತ ವ್ಯಕ್ತಿಗಳನ್ನು ಹಸ್ತಾಂತರಿಸುವ ಬಗ್ಗೆ ಭಾರತ ಸರ್ಕಾರ ಮತ್ತು ಬಾಂಗ್ಲಾದೇಶದ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಅದು ೨೦೧೧ರ ಜನವರಿ ೧೩ರಿಂದ ಜಾರಿಯಲ್ಲಿದೆ. ಘೋಷಿತ ಅಕ್ರಮ ವಲಸೆಗಾರರನ್ನು ಹಿಂದಕ್ಕೆ ಕಳುಹಿಸುವ ವಿಚಾರವನ್ನು ಕೂಡಾ ಬಾಂಗ್ಲಾದೇಶ ಸರ್ಕಾರದ ಜೊತೆಗೆ ಎತ್ತಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಈ ವಿಷಯವನ್ನು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದೂ ೮ ವರ್ಷಗಳ ಹಿಂದಿನ ಪಿಐಬಿ ಪ್ರಕಟಣೆ ತಿಳಿಸಿದೆ.

No comments:
Post a Comment