Monday, December 30, 2019

ಅಮಿತಾಭ್ ಬಚ್ಚನ್‌ಗೆ ’ದಾದಾಸಾಹೇಬ್ ಫಾಲ್ಕೆ’ ಗೌರವ

ಅಮಿತಾಭ್ ಬಚ್ಚನ್ಗೆದಾದಾಸಾಹೇಬ್ ಫಾಲ್ಕೆಗೌರವ
ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ:  ಹಿರಿಯ ಚಿತ್ರನಟ ಅಮಿತಾಭ್ ಬಚ್ಚನ್ ಅವರನ್ನು ಚಲನಚಿತ್ರ ಜಗತ್ತಿಗೆ ನೀಡಿದ ಅಪ್ರತಿಮ ಕೊಡುಗೆಗಾಗಿ 2019 ಡಿಸೆಂಬರ್ 29ರ ಭಾನುವಾರ  ದಾದಾಸಾಹೇಬ್ ಫಾಲ್ಕೆಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವವಾದ ಪ್ರಶಸ್ತಿಯನ್ನು ಬಚ್ಚನ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರು.

ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಜನಕ ಧುಂಡಿರಾಜ್ ಗೋವಿಂದ ಫಾಲ್ಕೆ ಅವರ ಹೆಸರಿನಲ್ಲಿ ೧೯೬೯ರಿಂದ ನೀಡಲಾಗುತ್ತಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸಲ್ಲಿಸಿದ ಅಪ್ರತಿಮ ಸೇವೆಯನ್ನು ಪರಿಗಣಿಸಿ ಸರ್ಕಾರವು  ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು ಸ್ವರ್ಣ ಕಮಲ ಮತ್ತು ೧೦ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

ಅಮಿತಾಭ್
ಬಚ್ಚನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಹೆಸರು ಘೋಷಣೆಯಾದಾಗ ಬಾಲಿವುಡ್ ಗಣ್ಯರು ಮತು ಅಭಿಮಾನಿಗಳಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.

ಹಿರಿಯ
ನಟನ ಜೊತೆಗೆ ನಟಿಸಿದ್ದ ಹೇಮಾ ಮಾಲಿನಿ ಅವರುಪ್ರಶಸ್ತಿಗೆ ಇದಕ್ಕಿಂತ ಹೆಚ್ಚಿನ ಸೂಕ್ತ ವ್ಯಕ್ತಿಯನ್ನು ನಾಮಕರಣ ಮಾಡುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲಎಂದು ಹೇಳಿದ್ದರು.

ಪುತ್ರ ಅಭಿಷೇಕ್ ಬಚ್ಚನ್, ರಜನೀಕಾಂತ್, ಲತಾ ಮಂಗೇಶ್ಕರ್, ಆಶಾ ಬೋಸ್ಲೆ, ಅನಿಲ್ ಕಪೂರ್, ಕರಣ್ ಜೋಹರ್, ರೀತೀಶ್ ದೇಶಮುಖ್, ವಿವೇಕ ಓಬೆರಾಯ್, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ಹುಮಾ ಖುರೇಶಿ ಮತ್ತು ಕಾರ್ತಿಕ್ ಆರ್ಯನ್ ಸೇರಿದಂತೆ ಚಿತ್ರರಂಗದ ಗಣ್ಯರು ಅಮಿತಾಭ್ ಅವರನ್ನು ಅಭಿನಂದಿಸಿದವರಲ್ಲಿ ಸೇರಿದ್ದರು.

ಸುದ್ದಿಗೆ
ಪ್ರತಿಕ್ರಿಯಿಸಿದ್ದ ಅಮಿತಾಭ್ ಅವರು ತಮ್ಮ ಬ್ಲಾಗ್ನಲ್ಲಿಹರಿದು ಬರುತ್ತಿರುವ ಔದಾರ್ಯಕ್ಕೆ ಉತ್ತರ ನೀಡಲು ಪದಗಳಿಗಾಗಿ ತಡಕಾಡುತ್ತಿದ್ದೇನೆ..  ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಮತ್ತು ಅತ್ಯಂತ ವಿನೀತನಾಗಿದ್ದೇನೆ. ನನ್ನ ಪ್ರಾಮಾಣಿಕ ಕೃತಜ್ಞತೆಗಳುಎಂದು ಬರೆದಿದ್ದರು.

ಕೊನೆಯದಾಗಿಬದ್ಲಾದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ಚಿತ್ರನಟ, ’ಅಗ್ನಿಪಥ  ಬ್ಲ್ಯಾಕ್, ’ಪಾ ಮತ್ತು ಪಿಕುಚಿತ್ರಗಳಿಗಾಗಿ ನಾಲ್ಕು  ರಾಷ್ಟ್ರ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.

ಅಮಿತಾಭ್
ಬಚ್ಚನ್ ಅವರುಸಾತ್ ಹಿಂದುಸ್ತಾನಿಚಿತ್ರದ ಮೂಲಕ ೧೯೬೯ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ಅವರನ್ನು ೨೦೧೫ರಲ್ಲಿ ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದಪದ್ಮವಿಭೂಷಣ್ಪ್ರದಾನ ಮೂಲಕ ಗೌರವಿಸಲಾಗಿತ್ತು.

೫೦ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿಯವರಿಂದ ರಾಷ್ಟ್ರಪತಿ ಭವನದಲ್ಲಿ ಪಡೆಯುವ ವೇಳೆಯಲ್ಲಿ ಸಮಾರಂಭದಲ್ಲಿ  ಅಮಿತಾಭ್ ಅವರ ಜೊತೆಗೆ ಪತ್ನಿ ಜಯಾಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರೂ ಹಾಜರಿದ್ದರು.

೭೭ರ ಹರೆಯದ ನಟ ಅಮಿತಾಭ್ ಅವರಿಗೆ ಅನಾರೋಗ್ಯದ ಕಾರಣ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಪ್ರಶಸ್ತಿ ಸ್ವೀಕಾರದ ಬಳಿಕ ಬಚ್ಚನ್ ಅವರುಜಬ್ ಇಸ್ ಪುರಸ್ಕಾರ್ ಕೊ ಘೋಷಣಾ ಹುಯಿ ತೊ ಮೇರೆ ಮನ್ ಮೇ ಎಕ್ ಸಂದೇಹ್ ಉಠಾ ಕಿ ಕ್ಯಾ ಕಹೀಂ ಯೆ ಸಂಕೇತ್ ಹೈ ಮೇರೇ ಲಿಯೆ ಕಿ ಭಾಯಿ ಸಾಹೇಬ್ ಆಪ್ನೆ ಬಹುತ್ ಕಾಮ್ ಕರ್ ಲಿಯಾ, ಅಬ್ ಘರ್ ಬೈಕ್ ಕೆ ಆರಾಮ್ ಕರ್ ಲೀಜಿಯೇ. ಕ್ಯೂಂಕಿ ಅಭಿ ಭಿ ಥೋಡಾ ಕಾಮ್ ಬಾಕಿ ಹೈ ಜಿಸೆ ಮುಜ್ಹೆ ಪೂರಾ ಕರ್ನಾ ಹೈ (’ ಪ್ರಶಸ್ತಿಯ ಘೋಷಣೆಯಾದಾಗ ನನ್ನ ಮನಸ್ಸಿನಲ್ಲಿ ಒಂದು ಸಂದೇಹ ಮೂಡಿತು ಏನೆಂದರೆ ಸಹೋದರ ಸಾಹೇಬ ತಾವು ಬಹಳಷ್ಟು ಕೆಲಸ ಮಾಡಿದ್ದೀರಿ, ಈಗ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯಿರಿ ಎಂದು ಸಂಕೇತ ನೀಡಲಾಗುತ್ತಿದೆಯೇ ಎಂದು. ಏಕೆಂದರೆ ಈಗಾ ಕೂಡಾ ಸ್ವಲ್ಪ ಕೆಲಸ ಬಾಕಿ ಇದೆ. ನನಗೆ ಅವುಗಳನ್ನು ಪೂರೈಸಬೇಕಾಗಿದೆ) ಎಂದು ಹೇಳಿದರು.

ಪ್ರಸ್ತುತ
ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬಚ್ಚನ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದ್ದರು. ’ಎರಡು ತಲೆಮಾರುಗಳನ್ನು ರಂಜಿಸಿ ದಂತಕತೆಯಾಗಿರುವ ಅಮಿತಾಭ್ ಬಚ್ಚನ್ ಅವರನ್ನು ಸರ್ವಾನುಮತದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಡೀ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂತಸವಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳುಎಮದು ಜಾವಡೆಕರ್ ಟ್ವೀಟ್ ಮಾಡಿದ್ದರು.

ಜ್ವರದ ಕಾರಣ ತಮಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ, ಇದಕ್ಕಾಗಿ ವಿಷಾದವಿದೆ ಎಂದು ಅಮಿತಾಭ್ ಬಚ್ಚನ್ ಅವರು ತಮಗೆ ಬಂದ ಅಭಿನಂದನೆಗಳಿಗೆ ಪ್ರತಿಕ್ರಿಯಿಸುತ್ತಾ ಟ್ವೀಟ್ ಮಾಡಿದ್ದರು.

೬೬ನೇ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿಜೇತರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಳೆದ ವಾರ ಪ್ರದಾನ ಮಾಡಿದ್ದರು.

No comments:

Advertisement