Thursday, December 26, 2019

ರಾಷ್ಟ್ರದ ವಿತ್ತಸ್ಥಿತಿ ಸರಿಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತ ಖಚಿತ: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

ರಾಷ್ಟ್ರದ ವಿತ್ತಸ್ಥಿತಿ ಸರಿಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತ ಖಚಿತ: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ
ನವದೆಹಲಿ: ದೇಶದ ವಿತ್ತ ಪರಿಸ್ಥಿತಿ ಕೆಟದಾಗಿದ್ದು ಅದನ್ನು ಸರಿದಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ಎಂಬುದು ವಾಸ್ತವ ರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚು ಎಂದು ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ ವರಿಷ್ಠರಿಗೆ 2019 ಡಿಸೆಂಬರ್ 26ರ ಬುಧವಾರ ಕಠಿಣ ಎಚ್ಚರಿಕೆ ನೀಡಿದರು.

ದೇಶದ
ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಲಹೆ ನೀಡುತ್ತಿರುವವರ ವಿರುದ್ದ ಡಾ. ಸ್ವಾಮಿ ಕೆಂಡ ಕಾರಿದರು.

ಸಲಹೆಗಾರರು ಪ್ರಧಾನಿಯನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ. ಆರ್ಥಿಕತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಈಗ ಏನಾದರೂ ಕ್ರಮ ಕೈಗೊಳ್ಳದೇ ಇದ್ದರೆ ಬಿಜೆಪಿ ಮುಕ್ತ ಭಾರತ ವಾಸ್ತವ ರೂಪದಲ್ಲಿ ಎದುರಾಗಲಿದೆಎಂದು ಸ್ವಾಮಿ ಕಟು ಭವಿಷ್ಯ ನುಡಿದರು.

ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವವರು ಯಾರು? ಎಂಬುದು ತಮಗೆ ಗೊತ್ತಿಲ್ಲ. ಪ್ರಧಾನಿಗೆ ದೇಶದ ಆರ್ಥಿಕ ಸ್ಥಿತಿ ಗತಿಯ ಸತ್ಯವನ್ನು ಮಾತ್ರ ಅವರು ಹೇಳುತ್ತಿಲ್ಲ ಎಂದು ಬಿಜೆಪಿ ನಾಯಕ ಆಪಾದಿಸಿದರು.

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದರು.

ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿ ಕೂಟವು ಜಾರ್ಖಂಡ್ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ವಿಫಲವಾಗಿದೆ. ಹರಿಯಾಣದಲ್ಲಿ ಜೆಜೆಪಿಯ ಬೆಂಬಲದಿಂದ ಬಿಜೆಪಿ ಸರ್ಕಾರ ರಚಿಸಿದೆ.

No comments:

Advertisement