Friday, December 20, 2019

‘ಗ್ರೂಪ್ ಅಡ್ಮಿನ್’ ಗಳಿಗೆ ಖಡಕ್ ಎಚ್ಚರಿಕೆ

ಗ್ರೂಪ್ ಅಡ್ಮಿನ್ಗಳಿಗೆ  ಖಡಕ್  ಎಚ್ಚರಿಕೆ

ಮಂಗಳೂರು : ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲಿ ನಗರ ಪೊಲೀಸ್ ಕಮಿಷನರ್ ಹರ್ಷ ಅವರು 2019 ಡಿಸೆಂಬರ್ 19ರ ಗುರುವಾರ ವಾಟ್ಸಪ್ ಗ್ರೂಪ್ ಅಡ್ಮಿನ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧವೂ ಸಹ ನಗರ ಪೊಲೀಸ್ ಕಮಿಷನರ್ ಅವರು ಎಚ್ಚರಿಸಿದರು.

ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳು ಹರಿದಾಡುತಿವೆ, ಇಂತಹ ಸಂದೇಶಗಳ ಮೇಲೆ ನಿಗಾ ಇರಿಸಲಾಗಿದೆ. ಇಂತಹ ಸಂದೇಶಗಳನ್ನು ಹರಡುವ ಗ್ರೂಪ್ ಅಡ್ಮಿನ್ ಗಳ ಮೇಲೆ ಐಪಿಸಿ ಸೆಕ್ಷನ್ ೧೫೩ (), ೨೯೫ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

No comments:

Advertisement