ಮೀರಾಬಾಯಿ ಚಾನು ‘ಸ್ವರ್ಣ’ ಸಾಧನೆ
ದೋಹಾ
(ಕತಾರ್): ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ೬ನೇ “ಕತಾರ್ ಇಂಟರ್ನ್ಯಾಶನಲ್
ಕಪ್ ವೇಟ್ಲಿಫ್ಟಿಂಗ್’ ಟೂರ್ನಿಯಲ್ಲಿ
2019 ಡಿಸೆಂಬರ್ 20ರ ಶುಕ್ರವಾರ ಚಿನ್ನದ ಪದಕ ಗೆದ್ದು ಭಾರತದ
ಖಾತೆ ತೆರೆದರು. ವನಿತೆಯರ ೪೯ ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.
ಒಟ್ಟು ೧೯೪ ಕೆಜಿ ಭಾರವನ್ನೆತ್ತಿದ ೨೫ರ ಹರೆಯದ ಮೀರಾಬಾಯಿ ಚಾನು ಬಂಗಾರಕ್ಕೆ ಕೊರಳೊಡ್ಡಿದರು. ಅವರು ಸ್ನ್ಯಾಚ್ನಲ್ಲಿ ೮೩ ಕೆಜಿ, ಕ್ಲೀನ್ ಮತ್ತು ಜರ್ಕ್ನಲ್ಲಿ ೧೧೧ ಕೆಜಿ ಭಾರ ಎತ್ತಿದರು. ಫ್ರಾನ್ಸಿನ ಅನೈಸ್ ಮೈಕೆಲ್ ಬೆಳ್ಳಿ (೧೭೨ ಕೆಜಿ) ಮತ್ತು ಮಾನನ್ ಲೊರೆಂಜ್ ಕಂಚು ಗೆದ್ದರು (೧೬೫ ಕೆಜಿ).

ಆದರೆ ಇದು ಚಾನು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ಕಡಿಮೆ
ಮಟ್ಟದ್ದಾಗಿತ್ತು. ಇದೇ ವರ್ಷ ಥಾಯ್ಲೆಂಡಿನಲ್ಲಿ ನಡೆದ
ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಅವರು ೨೦೧ ಕೆಜಿ
ಭಾರವೆತ್ತಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು.
ಒಲಿಂಪಿಕ್ಸ್ ಅರ್ಹತೆ
ಮೀರಾಬಾಯಿ ಚಾನು ಅವರ ಈದಿನದ ಸಾಧನೆ ಒಲಿಂಪಿಕ್ಸ್ ಅರ್ಹತಾ
ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮೀಸಲಾದ ಸ್ಪರ್ಧೆಯಾಗಿತ್ತು.ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ಗೆ
ಅರ್ಹತೆ ಪಡೆಯಬೇಕಾದರೆ ವೇಟ್ಲಿಫ್ಟರ್ಗಳು ೬ ತಿಂಗಳ ಅವಧಿಯಲ್ಲಿ ನಡೆಯುವ (ನ. ೨೦೧೮ರಿಂದ ಎ. ೨೦೨೦)
ಒಟ್ಟು ೬ ಕೂಟಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆಲ್ಲಬೇಕು.
No comments:
Post a Comment