Wednesday, December 25, 2019

ಎನ್ ಪಿ ಆರ್ ಗೆ ಕೇಂದ್ರದ ಹಸಿರು ನಿಶಾನೆ, ದಾಖಲೆ, ಬಯೋಮೆಟ್ರಿಕ್ಸ್ ಸಂಗ್ರಹ ಇಲ್ಲ

ಯುಪಿಎ ಆರಂಭಿಸಿದ್ದ ಎನ್ಪಿಆರ್ ಯೋಜನೆ, ಜನಗಣತಿಗೆ ರೂ.೧೩,೦೦೦ ಕೋಟಿ
ಎನ್ ಪಿ ಆರ್ ಗೆ ಕೇಂದ್ರದ ಹಸಿರು ನಿಶಾನೆ, ದಾಖಲೆ, ಬಯೋಮೆಟ್ರಿಕ್ಸ್ ಸಂಗ್ರಹ ಇಲ್ಲ
ನವದೆಹಲಿ: ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ ಚಾಲನೆ ನೀಡಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆ ಮತ್ತು ಜನಗಣತಿಗೆ ಕೇಂದ್ರ ಸಚಿವ ಸಂಪುಟವು 2019 ಡಿಸೆಂಬರ್ 24ರ ಮಂಗಳವಾರ ಒಟ್ಟು ೧೩,೦೦೦  ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು.
ಪ್ರಧಾನಿ
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜನಗಣತಿಗೆ ಮುಂಚಿತವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸುವ ನಿರ್ಧಾರಕ್ಕೆ ತನ್ನ ಒಪ್ಪಿಗೆ ನೀಡಿತು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಣದ ಪ್ರಕ್ರಿಯೆ ಕಾಲದಲ್ಲಿ ಯಾವುದೇ ದಾಖಲೆಗಳು ಅಥವಾ ಬಯೋಮೆಟ್ರಿಕ್ಸ್ ಪಡೆಯಲಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಕೇಂದ್ರ ಸಚಿವ ಸಂಪುಟ ನಿರ್ಧಾರವನ್ನು ಪ್ರಕಟಿಸುತ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿವಾದಾತ್ಮಕ ರಾಷ್ಟ್ರೀಯ ಪೌರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರುಮುಂಬರುವ ಎನ್ಪಿಆರ್, ೨೦೧೦ರಲ್ಲಿ ಯುಪಿಎ ಸರ್ಕಾರ ನಡೆಸಿದ್ದ ಎನ್ಪಿಆರ್ ಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿರುವುದಿಲ್ಲಎಂದು ಹೇಳಿದರು.

೨೦೨೧ರ ಫೆಬ್ರುವರಿಯಲ್ಲಿ ಆರಂಭವಾಗಲಿರುವ ಜನಗಣತಿಗೆ ಮುನ್ನ ೨೦೨೦ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ಎನ್ಪಿಆರ್ ನವೀಕರಣ ಪ್ರಕ್ರಿಯೆಯು ನಡೆಯಲಿದೆ.

ಸರ್ಕಾರವು
ಎನ್ಪಿಆರ್ ಮತ್ತು ಜನಗಣತಿಗೆ ಒಟ್ಟು ೧೩,೦೦೦ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಪೈಕಿ ,೭೫೪ ಕೋಟಿ ರೂಪಾಯಿಗಳು ಜನಗಣತಿಗೆ ಮತ್ತು ೩೯೪೧ ಕೋಟಿ ರೂಪಾಯಿಗಳು ಎನ್ಪಿಆರ್ಗೆ ಎಂದು ಜಾವಡೇಕರ್ ಹೇಳಿದರು.

ಎಲ್ಲ ರಾಜ್ಯಗಳೂ ಈಗಾಗಲೇ ಎನ್ಪಿಆರ್ ನವೀಕರಣ ಪ್ರಕ್ರಿಯೆ ನಡೆಸಲು ಒಪ್ಪಿದ್ದು, ಅವರ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ನುಡಿದರು.

ಎನ್ಪಿಆರ್ ನವೀಕರಣ ಪ್ರಕ್ರಿಯೆ ವೇಳೆಯಲ್ಲಿ ಯಾವುದೇ ದಾಖಲೆ ಅಥವಾ ಬಯೋಮೆಟ್ರಿಕ್ ಸಂಗ್ರಹಿಸಲಾಗುವುದಿಲ್ಲ ಎಂದು ಜಾವಡೇಕರ್ ಭರವಸೆ ನೀಡಿದರು.  ’ಜನರು ಏನು ಹೇಳುತ್ತಾರೋ ಅದನ್ನು ಅಂಗೀಕರಿಸಲಾಗುವುದುಎಂದು ಅವರು ಹೇಳಿದರು.

ಏನಿದು ಎನ್ಪಿಆರ್?
ರಾಷ್ಟೀಯ ಜನಸಂಖ್ಯಾ ನೋಂದಣಿ ಅಥವಾ ಎನ್ಪಿಆರ್ ದೇಶದಸಾಮಾನ್ಯ ನಿವಾಸಿಗಳಪಟ್ಟಿಯಾಗಿದೆ. ಎನ್ಪಿಆರ್ ಉದ್ದೇಶಕ್ಕಾಗಿ ಸಾಮಾನ್ಯ ನಿವಾಸಿ ಅಂದರೆ ನಿರ್ದಿಷ್ಟ ಪ್ರದೇಶದಲ್ಲಿ ಹಿಂದಿನ ಆರು ತಿಂಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸವಾಗಿರುವ ಅಥವಾ ಅದೇ ಪ್ರದೇಶದಲ್ಲಿ ಮುಂದಿನ ಆರು ತಿಂಗಳ ಕಾಲ ಅಥವಾ ಅದಕ್ಕೂ ಹೆಚ್ಚು ಕಾಲ ವಾಸವಾಗಿರಲು ಉದ್ದೇಶಿಸಿರುವ ವ್ಯಕ್ತಿ.

ರಾಷ್ಟ್ರೀಯ
ಜನಸಂಖ್ಯಾ ನೋಂದಣಿಗೆ ೨೦೧೦ರಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು. ೨೦೧೧ರಲ್ಲಿ ಜನಗಣತಿಯ ಹಂತದಲ್ಲಿ ಮನೆಗಳ ಪಟ್ಟಿ ಮಾಡಲಾಗಿತ್ತು.

ಮಾಹಿತಿಯನ್ನು ಮನೆ ಮನೆ ಸಮೀಕ್ಷೆ ನಡೆಸುವ ಮೂಲಕ ೨೦೧೫ರಲ್ಲಿ ನವೀಕರಿಸಲಾಗಿತ್ತು. ನವೀಕೃತ ಮಾಹಿತಿಯ ಡಿಜಿಟಲೀಕರಣ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ.

ಈಗ ೨೦೨೧ರ ಜನಗಣತಿಗಾಗಿ ಮನೆಗಳ ಪಟ್ಟಿ ಜೊತೆಗೇ ರಾಷ್ಟೀಯ ಜನಸಂಖ್ಯಾ ನೋಂದಣಿಯನ್ನೂ ೨೦೨೦ರ ಏಪ್ರಿಲ್ - ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ನವೀಕರಿಸಲು ನಿರ್ಧರಿಸಲಾಗಿದೆ. ಅಸ್ಸಾಮ್ ರಾಜ್ಯವನ್ನು ಹೊರತು ಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ಪಿಆರ್ ನವೀಕರಣ ಪ್ರಕ್ರಿಯೆ ನಡೆಯಲಿದೆ ಎಂದು ಜನಗಣತಿ ಆಯುಕ್ತರು ಮತ್ತು ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯ ವೆಬ್ ಸೈಟ್ ತಿಳಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ವರ್ಷ ಆಗಸ್ಟ್ ತಿಂಗಳಲ್ಲಿ ಗಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಸ್ಥಳೀಯ
(ಗ್ರಾಮ/ಉಪ-ಪಟ್ಟಣ), ಉಪ-ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ೧೯೫೫ರ ಪೌರತ್ವ ಕಾಯ್ದೆಯ ವಿಧಿಗಳು ಮತ್ತು ೨೦೦೩ರ ಪೌರತ್ವ (ಪೌರರ ನೋಂದಣಿ ಮತ್ತು ರಾಷ್ಟ್ರೀಯ ಗುರುತು ಚೀಟಿ ವಿತರಣೆ) ನಿಯಮಾವಳಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನವೀಕರಣವನ್ನು ನಡೆಸಲಾಗುವುದು.

ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (ಎನ್ಪಿಆರ್) ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಸರ್ಕಾರದ ಪ್ರಕಾರ ಎನ್ಪಿಆರ್ ಉದ್ದೇಶ ದೇಶದಲ್ಲಿನ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯ ಸಮಗ್ರ ಗುರುತು ಮಾಹಿತಿನೆಲೆಯನ್ನು ಸೃಷ್ಟಿಸುವುದಾಗಿದೆ.

ಹಿಂದಿನ ಯುಪಿಎ ಸರ್ಕಾರವು ಚಾಲನೆ ನೀಡಿದ್ದ ಎನ್ಪಿಆರ್, ಬಳಿಕ ಪೌರ ನೋಂದಣಿ ಪ್ರಕ್ರಿಯೆಗೆ ಮೊದಲ ಹೆಜ್ಜೆಯಾಗುತ್ತಿದೆ ಎಂಬ ಕಾರಣಕ್ಕಾಗಿ ವಿವಾದ ಎದ್ದಿತ್ತು.

೧೧ ರಾಜ್ಯಗಳು ಈವರೆಗೆ ತಾವು ರಾಷ್ಟ್ರೀಯ ಪೌರ ನೋಂದಣಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು  ಘೋಷಿಸಿವೆ. ಆದರೆ ಸಂಸತ್ತಿನ ಬೇರೆ ಯಾವ ಅನುಮೋದನೆಯ ಅಗತ್ಯವೂ ಇಲ್ಲದ ಪೌರ ನೋಂದಣಿಯನ್ನು ರಾಜ್ಯಗಳು ಹೇಗೆ ತಡೆ ಹಿಡಿಯುತ್ತವೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯೂ ಇಲ್ಲ.

ಮಾಹಿತಿ ಸಂಗ್ರಾಹಕರು ಎಲ್ಲ ಮನೆಗಳ ಪಟ್ಟಿ ಮಾಡಲು ಮನೆ ಮನೆಗೆ ತೆರಳುವಾಗ ಎನ್ಪಿಆರ್ ಎರಡನೇ ಫಾರಂನ್ನೂ ತಮ್ಮ ಜೊತೆಗೆ ಒಯ್ಯಲಿದ್ದಾರೆ.

ಮನೆ ಮತ್ತು ಅಲ್ಲಿ ವಾಸವಾಗಿರುವ ಜನರ ಆಸ್ತಿಪಾಸ್ತಿ ವಿವರವನ್ನು ಮನೆ ಪಟ್ಟಿ ಫಾರಂ ಭರ್ತಿ ಮಾಡಿದ ಬಳಿಕ ಮಾಹಿತಿ ಸಂಗ್ರಾಹಕರು ಜನರಿಂದ ೧೪-೨೦ ಪ್ರಶ್ನೆಗಳಿಗೆ ಉತ್ತರ ಸಂಗ್ರಹಿಸಲಿದ್ದಾರೆ.
ಜನಸಂಖ್ಯಾ ನೋಂದಣಿ ಪ್ರಶ್ನಾವಳಿಗಳನ್ನು ಉತ್ತರಿಸುವುದು ಜನರಿಗೆ ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

ಪಶ್ಚಿಮ
ಬಂಗಾಳ ಮತ್ತು ಕೇರಳವನ್ನು ಹೊರತುಪಡಿಸಿ, ಹಲವಾರು ರಾಜ್ಯಗಳು ಗಜೆಟ್ ಪ್ರಕಟಣೆಯ ಬಳಿಕ ಎನ್ಪಿಆರ್  ನವೀಕರಣ ಪ್ರಕ್ರಿಯೆಯನ್ನು ಆರಂಭವಿಸಿವೆ. ಪಶ್ಚಿಮಬಂಗಾಳ ಮತ್ತು ಕೇರಳ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಇತ್ತೀಚಿನ ಭಾರೀ ಪ್ರತಿಭಟನೆಯ ಬಳಿಕ ನವೀಕರಣ ಪ್ರಕಿಯೆಯನ್ನು ಸ್ಥಗಿತಗೊಳಿಸಿವೆ.

ಪಶ್ಚಿಮ ಬಂಗಾಳ ಸರ್ಕಾರವು ತನ್ನ ಆದೇಶದಲ್ಲಿ ೨೦೨೧ರ ಜನಗಣತಿ ಪ್ರಕ್ರಿಯೆ ಮತ್ತು ಎನ್ಪಿಆರ್ಗೆ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿದ್ದರೆ, ಕೇರಳ ಸರ್ಕಾರವು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಎನ್ಪಿಆರ್ ನವೀಕರಣವು ವಿವಾದಾತ್ಮಕ ಎನ್ಆರ್ಸಿಗೆ ದಾರಿ ಮಾಡಿಕೊಡಬಹುದು ಎಂಬುದಾಗಿ ವ್ಯಕ್ತವಾದ ಸಾರ್ವಜನಿಕ ಭೀತಿಗಳನ್ನು ಅನುಸರಿಸಿ ಎನ್ಪಿಆರ್ ನವೀಕರಣ ಕೆಲಸವನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

No comments:

Advertisement