Saturday, December 21, 2019

ಮುಷರಫ್ ಕುರಿತ ತೀರ್ಪು: ಪಾಕ್ ಸರ್ಕಾರ ಕೆಂಡಾಮಂಡಲ

ಮುಷರಫ್ ಕುರಿತ ತೀರ್ಪು: ಪಾಕ್ ಸರ್ಕಾರ ಕೆಂಡಾಮಂಡಲ
ಮಾನಸಿಕ ಅನರ್ಹನ್ಯಾಯಮೂರ್ತಿಯ ಪದಚ್ಯುತಿಗೆ ಕೋರಿಕೆ
ಇಸ್ಲಾಮಾಬಾದ್:   ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ಗೆ ಗಲ್ಲು ಶಿಕ್ಷೆ ವಿಧಿಸಿ, ಶವವನ್ನು ಸಂಸತ್ತಿಗೆ ತಂದು ಮೂರು ದಿನಗಳ ಕಾಲ ಬಹಿರಂಗವಾಗಿ ನೇತುಹಾಕಬೇಕು ಎಂದು ಪೇಷಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಖರ್ ಅಹ್ಮದ್ ಸೇಠ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ತೀರ್ಪಿನಿಂದ ಇರುಸುಮುರುಸಿಗೆ ಒಳಗಾಗಿ ಸಿಟ್ಟಿಗೆದ್ದಿರುವ ಪಾಕಿಸ್ತಾನಿ ಸರ್ಕಾರವುಮಾನಸಿಕವಾಗಿ ಅನರ್ಹನಾದ ನ್ಯಾಯಾಧೀಶನನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಇಚ್ಛಿಸಿತು.

ಮಾನಸಿಕ ಅನರ್ಹನ್ಯಾಯಾಧೀಶನನ್ನು ಪದಚ್ಯುತಗೊಳಿಸುವಂತೆ ಸರ್ಕಾರವು ಸುಪ್ರೀಂಕೋರ್ಟ್ ಜ್ಯುಡಿಷಿಯಲ್ ಕೌನ್ಸಿಲ್ಗೆ ಅರ್ಜಿ ಸಲ್ಲಿಸಲಿದೆ ಎಂದು ಸರ್ಕಾರೀ ಮೂಲಗಳು 2019 ಡಿಸೆಂಬರ್ 20ರ ಶುಕ್ರವಾರ ತಿಳಿಸಿದವು.
ಪೇಷಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಖರ್ ಅಹ್ಮದ್ ಸೇಠ್ ಅವರು 2019 ಡಿಸೆಂಬರ್ 19ರ ಗುರುವಾರ ಬಹಿರಂಗೊಳಿಸಿರುವ ತನ್ನ ೧೬೭ ಪುಟಗಳ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯವುಶಿಕ್ಷಿತ ಅಪರಾಧಿಯನ್ನು ಪ್ರತಿ ಆಪಾದನೆಗೂ ಆತ ಸಾಯುವವರೆಗೆ ಕೊರಳಿಗೆ ಉರುಳು ಹಾಕಿ ನೇತಾಡಿಸಬೇಕುಎಂದು ಹೇಳಿದೆ.

ಶಿಕ್ಷಿತ ಅಪರಾಧಿಗೆ ಆತ ಸತ್ತದ್ದನ್ನು ಖಚಿತಪಡಿಸಿಕೊಳ್ಳುವವರೆಗೂ ಶಿಕ್ಷೆ ವಿಧಿಸಲು ಸರ್ವ ಪ್ರಯತ್ನ ಮಾಡಬೇಕು ಮತ್ತು ಆತನ ಶವವನ್ನು ಪಾಕಿಸ್ತಾನದ ಇಸ್ಲಾಮಾಬಾದಿನ ಡಿ-ಚೌಕಕ್ಕೆ ಎಳೆದು ತಂದು ಅಲ್ಲಿ ದಿನಗಳ ಕಾಲ ನೇತಾಡಿಸಬೇಕುಎಂದು ಮುಖ್ಯ ನ್ಯಾಯಮೂರ್ತಿ ಸೇಠ್ ತೀರ್ಪಿನಲ್ಲಿ ಬರೆದಿದ್ದಾರೆ.

ಡಿ-ಚೌಕ ಅಥವಾ ಡೆಮಾಕ್ರಸಿ ಚೌಕವು ಹಲವಾರು ಮಹತ್ವದ ಸರ್ಕಾರಿ ಕಟ್ಟಡಗಳು ಇರುವ ಪ್ರದೇಶವಾಗಿದ್ದು, ಅಧ್ಯಕ್ಷರ ಭವನ, ಪ್ರಧಾನಿ ಕಚೇರಿ, ಸಂಸತ್ತು ಮತ್ತು ಸುಪ್ರೀಂಕೋರ್ಟ್ ಪ್ರದೇಶದಲ್ಲಿಯೇ ಇವೆ.

ವಿಸ್ತೃತ ತೀರ್ಪು ಹೊರಬಿದ್ದೊಡನೆಯೇ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಕಾನೂನು ತಂಡದ ಜೊತೆಗೆ ಸಮಾಲೋಚಿಸಿದರು ಮತ್ತು ಸಭೆಯ ನಿರ್ಧಾರವನ್ನು ಅವರ ಉನ್ನತ ಸಹಾಯಕ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸೇಠ್ ಅವರುಮಾನಸಿಕವಾಗಿ ಅನರ್ಹಎಂಬುದನ್ನು ತೀರ್ಪು ತೋರಿಸಿದೆ. ಮುಷರಫ್ ಅವರು ಶಿಕ್ಷೆ ಜಾರಿಗೆ ಮುನ್ನವೇ ಅಸು ನೀಗಿದರೆ ಅವರ ಮೃತದೇಹವನ್ನು ನೇತುಹಾಕಬೇಕು ಎಂಬುದಾಗಿ ನ್ಯಾಯಮೂರ್ತಿ ಸಲಹೆ ಮಾಡಿದ್ದಾರೆಎಂದು ಕಾನೂನು ಸಚಿವ ಫರೋಗ್ ನಸೀಮ್ ಹೇಳಿದರು.

ಇಂತಹ ಶಿಕ್ಷೆಯು ಪಾಕಿಸ್ತಾನದ ಯಾವುದೇ ಕಾನೂನಿಗೆ ವಿರುದ್ಧವಾದದ್ದು ಎಂದು ಅವರು ನುಡಿದರು.

ವ್ಯಕ್ತಿ ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶನಾಗಿ ಇರಲು ಸಾಧ್ಯವಿಲ್ಲ ಎಂಬುದಾಗಿ ಸರ್ಕಾರ ನಂಬುವುದರಿಂದ ಸುಪ್ರೀಂ ಜ್ಯುಡಿಷಿಯಲ್ ಕೌನ್ಸಿಲ್ ಮೆಟ್ಟಿಲೇರಲು ಫೆಡರಲ್ ಸರ್ಕಾರ ನಿರ್ಧರಿಸಿದೆ. ನ್ಯಾಯಾಧೀಶರೊಬ್ಬರು ಇಂತಹ ತೀರ್ಪನ್ನು ನೀಡುತ್ತಾರೆ ಎಂದಾದರೆ, ಆತ ಮಾನಸಿಕವಾಗಿ ಅನರ್ಹ ಮತ್ತು ಅದಕ್ಷ ಎಂದೇ ಅರ್ಥಎಂದು ನಸೀಮ್ ಹೇಳಿದರು.

ಪಾಕಿಸ್ತಾನದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟಿನ ನ್ಯಾಯಾಧೀಶನನ್ನು ಕಿತ್ತು ಹಾಕುವ ಅಧಿಕಾರ ಇರುವ ಏಕೈಕ ಸಂಸ್ಥೆ ಸುಪ್ರೀಂ ಜ್ಯುಡಿಷಿಯಲ್ಲ ಕೌನ್ಸಿಲ್.

‘ಇದು
ನ್ಯಾಯಾಧೀಶರೊಬ್ಬರಿಂದ ಹೊರಬಂದಿರುವ ಹಿಂದೆಂದೂ ನಡೆಯದ, ತುಚ್ಛವಾದ ತೀರ್ಪು  ಆಗಿರುವುದರಿಂದ ನ್ಯಾಯಮೂರ್ತಿ ಸೇಠ್ ಅವರನ್ನು ಕರ್ತವ್ಯಗಳನ್ನು ನಿರ್ವಹಿಸದಂತೆ ಪ್ರತಿಬಂಧಿಸಬೇಕು ಎಂಬುದಾಗಿಯೂ ಸರ್ಕಾರವು ಉನ್ನತ ನ್ಯಾಯಾಂಗ ಮಂಡಳಿಯನ್ನು ಕೋರಲಿದೆ  ಎಂದು ನಸೀಮ್ ಹೇಳಿದರು.

ಇಮ್ರಾನ್ ಖಾನ್ ಅವರ ಇನ್ನೊಬ್ಬ ನಿಕಟವರ್ತಿ ಶೆಹಜಾದಾದ್ ಅಕ್ಬರ್ ಅವರು ತೀರ್ಪು ಕಾನೂನಿನ ಎಲ್ಲ ಎಲ್ಲೆಗಳಿಗೂ ವಿರುದ್ಧವಾಗಿದೆ. ಆದ್ದರಿಂದ ತೀರ್ಪಿನ ವಿರುದ್ಧ ಕೂಡಾ ಸರ್ಕಾರವು ಮೇಲ್ಮನವಿ ಸಲ್ಲಿಸಲಿದೆಎಂದು ನುಡಿದರು.

‘ತೀರ್ಪನ್ನು
ಅವಸರ ಅವಸರವಾಗಿ ನೀಡಲಾಗಿದೆ. ಆರೋಪಿಗೆ ನ್ಯಾಯೋಚಿತ ವಿಚಾರಣೆಯ ಹಕ್ಕನ್ನು ನೀಡಿಲ್ಲಎಂದೂ ಅವರು ಹೇಳಿದರು.

ಇದಕ್ಕೂ ಮುನ್ನ, ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರು ಜನರಲ್ (ನಿವೃತ್ತ) ಮುಷರಫ್ ಅವರಿಗೆ ಶಿಕ್ಷೆ ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ವಿಸ್ತೃತ ಮಾತುಕತೆ ನಡೆಸಿದ್ದು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಹೇಳಿದ್ದರು.

ಗುರುವಾರ ಪ್ರಕಟಿಸಲಾದ ವಿಸ್ತೃತ ತೀರ್ಪು ಸೇನೆಯನ್ನು ಸಿಟ್ಟಿಗೆಬ್ಬಿಸಿದೆ. ತೀರ್ಪು ಎಲ್ಲ ಮಾನವೀಯ, ಧಾರ್ಮಿಕ ಮತ್ತು ನಾಗರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸೇನೆ ಅಭಿಪ್ರಾಯ ಪಟ್ಟಿದೆ.

ಡಿಸೆಂಬರ್ ೧೭ರಂದು ನೀಡಲಾಗಿದ್ದ ಸಂಕ್ಷಿಪ್ತ ತೀರ್ಪಿನ ಕುರಿತು ಉಂಟಾಗಿದ್ದ ಅನುಮಾನಗಳು ಸರಿ ಎಂಬುದಾಗಿ ಡಿಸೆಂಬರ್ ೧೯ರ ವಿಸ್ತೃತ ತೀರ್ಪು ಸಾಬೀತು ಮಾಡಿದೆ. ವಿಸ್ತೃತ ತೀರ್ಪಿನಲ್ಲಿ ತಿಳಿಸಲಾಗಿರುವ ನಿರ್ಧಾರ ಮತ್ತು ವಿಶೇಷವಾಗಿ ಬಳಕೆ ಮಾಡಲಾಗಿರುವ ಪದಗಳು ಮಾನವತೆ, ಧರ್ಮ, ನಾಗರಿಕತೆ ಮತ್ತು ಇತರ ಯಾವುದೇ ಮೌಲ್ಯಕ್ಕೆ ವಿರುದ್ಧವಾಗಿದೆಎಂದು ಗಫೂರ್ ಹೇಳಿದರು.

ಮುಷರಫ್ ಅವರು ತಮ್ಮ ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ ಕೆಲವೇ ಗಂಟೆಗಳ ಬಳಿಕ ವಿಸ್ತೃತ ತೀರ್ಪು ಹೊರಬಿದ್ದಿತ್ತು. ’ ತೀರ್ಪು ನನ್ನ ಬಗೆಗಿನ ಕೆಲವು ವ್ಯಕ್ತಿಗಳ ವೈರತ್ವವನ್ನು ಆಧರಿಸಿದ್ದಾಗಿದೆಎಂದು ಮುಷರಫ್ ಹೇಳಿದ್ದರು.

ಉನ್ನತ ಕಚೇರಿಗಳಲ್ಲಿ ಇರುವ ಕೆಲವು ವ್ಯಕ್ತಿಗಳು ವ್ಯಕ್ತಿಯೊಬ್ಬನನ್ನು ಗುರಿ ಮಾಡಲು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಅಸಿಫ್ ಸಯೀದ್ ಖೋಸಾ ಅವರನ್ನು ಉಲ್ಲೇಖಿಸುತ್ತಾ ಮುಷರಫ್ ಹೇಳಿದ್ದರು.

ಶುಕ್ರವಾರ
ನಿವೃತ್ತರಾಗುತ್ತಿರುವ ಖೋಸಾ ಅವರು ಕಳೆದ ತಿಂಗಳು೨೦೦೯ರ ಬಳಿಕದ ನ್ಯಾಯಾಂಗವು ಒಬ್ಬ ಪ್ರಧಾನಿಯನ್ನು (ಯೂಸುಫ್ ರಜಾ ಗಿಲಾನಿ) ಶಿಕ್ಷಿಸಿದೆ, ಇನ್ನೊಬ್ಬರನ್ನು (ನವಾಜ್ ಷರೀಫ್) ಅನರ್ಹಗೊಳಿಸಿದೆ; ಮತ್ತು ಶೀಘ್ರದಲ್ಲೇ ಮಾಜಿ ಸೇನಾ ಮುಖ್ಯಸ್ಥರ (ಮುಷರಫ್) ವಿರುದ್ಧದ ದೇಶದ್ರೋಹ ಪ್ರಕರಣವನ್ನು ನಿರ್ಧರಿಸಲಿದೆಎಂದು ಕಳೆದ ತಿಂಗಳು ಹೇಳಿದ್ದರು.

No comments:

Advertisement