Friday, December 20, 2019

೨೦೦೩ರಲ್ಲಿ ಪೌರತ್ವ ಕುರಿತು ಡಾ. ಮನಮೋಹನ್ ಸಿಂಗ್ ಹೇಳಿದ್ದೇನು?

೨೦೦೩ರಲ್ಲಿ ಪೌರತ್ವ ಕುರಿತು ಡಾ. ಮನಮೋಹನ್ ಸಿಂಗ್ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಬಿಜೆಪಿ ಬತ್ತಳಿಕೆಯಿಂದ ಹೊಸ ಬಾಣ 
ನವದೆಹಲಿ:  ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆ, ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 19ರ ಗುರುವಾರ ತನ್ನ ಬತ್ತಳಿಕೆಯಿಂದಪೌರತ್ವಕ್ಕೆ ಡಾ. ಮನಮೋಹನ್ ಸಿಂಗ್ ಬೆಂಬಲ ಹೊಸ ವಿಡಿಯೋ ಬಾಣವನ್ನು ಹೊರತೆಗೆದು ಪ್ರಯೋಗಿಸಿತು.

ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ಬೆಂಬಲವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತನಾಡಿದ ಹಳೆಯ ವಿಡಿಯೋವನ್ನು ಬಿಜೆಪಿ ನಾಯಕರು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕೆ ಹರಿಯಬಿಟ್ಟರು.

ಸಂಸತ್ತಿನ ೨೦೦೩ರ ವಿಡಿಯೋಗಳ ಸಂಗ್ರಹದಿಂದ ಡಾ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಮಾತನಾಡಿದ ವಿಡಿಯೋ ದೃಶ್ಯಾವಳಿಯನ್ನು ಬಿಜೆಪಿ ಬಹಿರಂಗಗೊಳಿತು.

೨೦೦೩ರಲ್ಲಿ, ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಆಗ ವಿರೋಧ ಪಕ್ಷದ ನಾಯಕರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿಚಾರದಲ್ಲಿ ಉದಾರವಾದ ಧೋರಣೆ ಅನುಸರಿಸಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಮಾಡಿರುವುದು ಅದನ್ನೇಎಂದು ಟ್ವೀಟ್ ಮಾಡಿದ ಬಿಜೆಪಿ ಟ್ವೀಟಿಗೆ ಮನಮೋಹನ್ ಸಿಂಗ್ ಭಾಷಣದ ವಿಡಿಯೋ ದೃಶ್ಯಾವಳಿಯನ್ನು ಲಗತ್ತಿಸಿತು.

ವಿಡಿಯೋದಲ್ಲಿ ಡಾ. ಸಿಂಗ್ ಅವರು ಹೀಗೆ ಹೇಳಿದ್ದು ಕೇಳಿಸುತ್ತದೆ: ’ ವಿಷಯಕ್ಕೆ ಸಂಬಂಧಿಸಿದಂತೆ, ಮೇಡಮ್, ನಾನು ನಿರಾಶ್ರಿತರನ್ನು ಕಾಣುವ ರೀತಿ ಬಗ್ಗೆ ಕೆಲವೊಂದು ವಿಚಾರಗಳನ್ನು ಹೇಳಬಯಸುತ್ತೇನೆ. ನಮ್ಮ ದೇಶದ ವಿಭಜನೆಯ ಬಳಿಕ, ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳಗಳನ್ನು ಎದುರಿಸಿದ್ದಾರೆ, ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ನಮ್ಮ ರಾಷ್ಟ್ರದಲ್ಲಿ ಆಶ್ರಯ ಕೋರಿರುವ  ಇಂತಹ ದುರದೃಷ್ಟಕರ ಜನರಿಗೆ ನೆರವಾಗಬೇಕಾದದ್ದು ನಮ್ಮ ನೈತಿಕ ಹೊಣೆಗಾರಿಕೆಯಾಗುತ್ತದೆ. ದುರದೃಷ್ಟಕರ  ವ್ಯಕ್ತಿಗಳಿಗೆ ಪೌರತ್ವ ನೀಡಿಕೆಯ ಬಗೆಗಿನ ನಮ್ಮ ಧೋರಣೆ ಹೆಚ್ಚು ಉದಾರವಾಗಿರಬೇಕು...’

೨೦೦೩ರಲ್ಲಿ
, ಮನಮೋಹನ್ ಸಿಂಗ್ ಅವರು ಮಾತುಗಳನ್ನು ಹೇಳಿದಾಗ, ಆಗ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸರ್ಕಾರದ ಕಡೆಯ ಆಸನಗಳಲ್ಲಿ ಮುಂಭಾಗದ ಸಾಲಿನಲ್ಲಿದ್ದರು.

ಗೌರವಾನ್ವಿತ ಉಪ ಪ್ರಧಾನಿಯವರು ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ  ಭವಿಷ್ಯದ ಕ್ರಮ ಕೈಗೊಳ್ಳುವಾಗ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಹಾರೈಸುತ್ತೇನೆಎಂದೂ ಡಾ. ಸಿಂಗ್ ಭಾಷಣದಲ್ಲಿ ಹೇಳಿದ್ದರು.

ಪೌರತ್ವ ಕಾಯ್ದೆಯ ವಿರುದ್ಧ ಉಗ್ರವಾಗಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್ಸನ್ನು ಮಣಿಸಲು ಬಿಜೆಪಿ ಇದೀಗ ವಿಡಿಯೋವನ್ನು ಬಳಸಿಕೊಂಡಿತು.
ಪೌರತ್ವ
ತಿದ್ದುಪಡಿ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಬಹಿರಂಗ ಹೋರಾಟಕ್ಕೆ ಇಳಿದಿರುವುದಷ್ಟೇ ಅಲ್ಲ, ಪಕ್ಷದ ಪ್ರಮುಖ ನಾಯಕರೊಬ್ಬರು ಅದರ ವಿರುದ್ಧ ಸುಪ್ರೀಂಕೋರ್ಟಿನಲ್ಲೂ ಅರ್ಜಿ ಸಲ್ಲಿಸಿದ್ದಾರೆ.

೨೦೦೩ರಲ್ಲಿ, ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಡಾ. ಮನಮೋಹನ್ ಸಿಂಗ್, ಆಗಿನ ವಿರೋಧ ಪಕ್ಷದ ನಾಯಕರು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿಚಾರದಲ್ಲಿ ಉದಾರ ಧೋರಣೆ ಅನುಸರಿಸಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ಅದನ್ನಷ್ಟೇ ಮಾಡುತ್ತಿದೆ..’ ಎಂದು ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಹೊತ್ತಿರುವ ಅಮಿತ್ ಮಾಳವೀಯ ಟ್ವೀಟ್ ಮಾಡಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಸುಲಭವಾಗಿ ಭಾರತೀಯ ನಾಗರಿಕರಾಗಲು ಅವಕಾಶ ಕಲ್ಪಿಸಿರುವ ನೂತನ ಪೌರತ್ವ ಕಾಯ್ದೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿದೆ.

ಮುಸ್ಲಿಮರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ತಾರತಮ್ಯ ಮತ್ತು ಸಂವಿಧಾನವು ಪ್ರತಿಪಾದಿಸಿರುವ ಸಮಾನತೆ ಹಾಗೂ ಜಾತ್ಯತೀತತೆಯ ತತ್ವಗಳ ಉಲ್ಲಂಘನೆ ಎಂದು ರಾಜಕೀಯ ಪಕ್ಷಗಳು ಮತ್ತು ಚಳವಳಿ ನಿರತ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.

No comments:

Advertisement