ಗುವಾಹಟಿ:
ಪೊಲೀಸ್ ಗುಂಡೇಟಿಗೆ ೩ ಬಲಿ, ಮೇಘಾಲಯಕ್ಕೂ ವ್ಯಾಪಿಸಿದ ಹಿಂಸಾಚಾರ
ನವದೆಹಲಿ:
ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕಾವು ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ತೀವ್ರಗೊಂಡಿದ್ದು 2019 ಡಿಸೆಂಬರ್ 12ರ ಗುರುವಾರ ಪೊಲೀಸ್
ಗೋಲಿಬಾರಿಗೆ ಮೂರು ಮಂದಿ ಬಲಿಯಾದರು. ಇದೇ ವೇಳೆಗೆ ಪ್ರತಿಭಟನೆ ಹಾಗೂ ಹಿಂಸಾಚಾರ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಗೂ ವ್ಯಾಪಿಸಿದೆ ಎಂದು
ವರದಿಗಳು ತಿಳಿಸಿದವು.
ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ಹಿಂಸಾಚಾರ ನಿರತ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡ ಕನಿಷ್ಠ ಮೂವರು ಗಾಯಗೊಂಡಿದ್ದು, ಬಳಿಕ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದರು.
ಒಬ್ಬ
ವ್ಯಕ್ತಿಯನ್ನು ಆಸ್ಪತ್ರೆಗೆ ತರುವಾಗಲೇ ಆತ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ
ಗಾಯಗಳ ಪರಿಣಾಮವಾಗಿ ಚಿಕಿತ್ಸೆ ಕಾಲದಲ್ಲಿ ಸಾವನ್ನಪ್ಪಿದ ಎಂದು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.
ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ಹಿಂಸಾಚಾರ ನಿರತ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡ ಕನಿಷ್ಠ ಮೂವರು ಗಾಯಗೊಂಡಿದ್ದು, ಬಳಿಕ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದರು.
ಹಿಂಸಾಚಾರ
ಮುಂದುವರೆದ ಹಿನ್ನೆಲೆಯಲ್ಲಿ ಅಸ್ಸಾಂ ರಾಜಧಾನಿಗೆ ಸೇನೆಯನ್ನು ಕರೆಸಲಾಗಿದೆ. ಪೊಲೀಸರು ಮತ್ತು ಅರೆ ಸೇನಾ ಪಡೆಗಳ ಜೊತೆಗೆ ಸಹಸ್ರಾರು ಪ್ರತಿಭಟನಕಾರರು ನೇರ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ವರದಿಗಳು ಹೇಳಿವೆ.
No comments:
Post a Comment