Monday, December 2, 2019

ಕರ್ತಾರಪುರ ಕಾರಿಡಾರ್: ಪಾಕಿಸ್ತಾನದ ’ದುಷ್ಟ ಯೋಜನೆ ಅನಾವರಣ

ಕರ್ತಾರಪುರ ಕಾರಿಡಾರ್: ಪಾಕಿಸ್ತಾನದ
'ದುಷ್ಟ ಯೋಜನೆ' ಅನಾವರಣ
ಪಾಕ್ ರೈಲ್ವೇ ಸಚಿವನ ಹೇಳಿಕೆಗೆ ಸಿಟ್ಟಿಗೆದ್ದ ಪಂಜಾಬ್ ಮುಖ್ಯಮಂತ್ರಿ
ಚಂಡೀಗಢ:ಕರ್ತಾರಪುರ ಕಾರಿಡಾರ್ಯೋಜನೆಯು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸುಎಂಬ ಮಾಹಿತಿಯನ್ನು ಪಾಕಿಸ್ತಾನಿ ರೈಲ್ವೇ ಸಚಿವ ಶೇಖ್ ರಶೀದ್ ಬಹಿರಂಗ ಪಡಿಸುವುದರೊಂದಿಗೆ ಪಾಕಿಸ್ತಾನದ ಉಪಕ್ರಮದ ಹಿಂದಿನಕ್ರೂರ ಉದ್ದೇಶ ಇದೀಗ ಅನಾವರಣಗೊಂಡಿತು.

ಉಭಯ ದೇಶಗಳ ಮಧ್ಯೆ ಶಾಂತಿಯ ಸೇತುವೆಯಾಗಬಲ್ಲುದು ಎಂಬುದಾಗಿ ಭಾವಿಸಲಾಗಿದ್ದ ಕರ್ತಾರಪುರ ಕಾರಿಡಾರ್ ಯೋಜನೆಯು ಭಾರತವು ತನ್ನ ಮೇಲಾದ ಗಾಯವನ್ನು ಎಂದಿಗೂ ಮರೆಯಂದಂತಹ ಘಾಸಿಯನ್ನು ಮಾಡಲಿದೆ. ಇದು ಜನರಲ್ ಬಜ್ವಾ ರೂಪಿಸಿರುವ ಯೋಜನೆಎಂಬುದಾಗಿ ಪಾಕ್ ಸಚಿವ ಹೇಳಿರುವುದು ಮಾಧ್ಯಮಗಳಲ್ಲಿ  2019 ಡಿಸೆಂಬರ್ 01ರ ಭಾನುವಾರ ವರದಿಯಾಗಿದೆ.

ಕರ್ತಾರಪುರ ಕಾರಿಡಾರ್ ಯೋಜನೆಯು ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸು ಎಂಬುದಾಗಿ ಪಾಕಿಸ್ತಾನಿ ಸಚಿವರು ಹೇಳಿರುವ ಹಿನ್ನೆಲೆಯಲ್ಲಿ ಪಾಕ್ ದುರುದ್ದೇಶದ ಬಗ್ಗೆ ಪಂಜಾಬಿನ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರೀಂದರ್ ಸಿಂಗ್ ಭಾನುವಾರ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದರು.

ಪಾಕಿಸ್ತಾನದ ದುಷ್ಟ ಯೋಜನೆಸ್ವತಃ ಪಾಕಿಸ್ತಾನದ ಸಚಿವನಿಂದಲೇ ಅನಾವರಣಗೊಂಡಿರುವುದು ಅತ್ಯಂತ ಕಳವಳದ ವಿಷಯ. ಪಾಕ್ ರೈಲ್ವೇ ಸಚಿವನ ಹೇಳಿಕೆಯು ವಿಷಯಕ್ಕೆ ಸಂಬಂಧಿಸಿದಂತೆ ನಾನು ಪ್ರಾರಂಭದಿಂದಲೇ ನೀಡುತ್ತಾ ಬಂದಿರುವ ಅಭಿಪ್ರಾಯವನ್ನು ಸಮರ್ಥಿಸಿದೆಎಂದು ಕ್ಯಾಪ್ಟನ್ ಹೇಳಿದರು.

ಉಭಯ ರಾಷ್ಟ್ರಗಳ ನಡುವಣ ಶಾಂತಿಯ ಸೇತುವಾಗಬಲ್ಲುದು ಎಂಬುದಾಗಿ ಭಾರತವು ಹಾರೈಸಿದ ಕರ್ತಾರಪುರ ಕಾರಿಡಾರ್ ಯೋಜನೆಯು ಪಾಕಿಸ್ತಾನ ಕ್ರೂರವಾದ ದುಷ್ಟ ಯೋಜನೆಯಾಗಿದೆ ಎಂಬುದು ಪಾಕ್ ಸಚಿವ ರಶೀದ್ ಹೇಳಿಕೆಯಿಂದ ಸ್ಪಷ್ಟಗೊಂಡಿದೆ ಎಂದು ಅವರು ನುಡಿದರು.

ಭಾರತವು ತನ್ನ ಮೇಲಾದ ಗಾಯವನ್ನು ಎಂದಿಗೂ ಮರೆಯಲಾಗದಂತಹ ರೀತಿಯ ಘಾಸಿಯನ್ನು ಕಾರಿಡಾರ್ ರಾಷ್ಟ್ರದ ಮೇಲೆ ಮಾಡಲಿದೆ. ಇದು ಕರ್ತಾರಪುರ ಕಾರಿಡಾರ್ಗೆ ಸಂಬಂಧಿಸಿದಂತೆ ಜನರಲ್ ಬಜ್ವಾ ಅವರು ರೂಪಿಸಿರುವ ಯೋಜನೆಎಂಬುದಾಗಿ ರಶೀದ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.

ಇದು ಭಾರತದ ಭದ್ರತೆ ಮತು ಸಮಗ್ರತೆಯ ಮೇಲಿನ ಬಹಿರಂಗ ನಿರ್ದಯ ಬೆದರಿಕೆಎಂಬುದಾಗಿ ಬಣ್ಣಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಯಾವುದೇ ದುಸ್ಸಾಹಸದ ಯತ್ನಕ್ಕೆ ಇಳಿಯದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಕಾರಿಡಾರ್ ತೆರೆದುದಕ್ಕಾಗಿ ನಾವು ವ್ಯಕ್ತ ಪಡಿಸಿರುವ ಕೃತಜ್ಞತೆಯನ್ನು ನಮ್ಮ ದೌರ್ಬಲ್ಯ ಎಂಬುದಾಗಿ ಅರ್ಥ ಮಾಡಿಕೊಳ್ಳುವ ತಪ್ಪು ಮಾಡಬೇಡಿ. ತನ್ನ ಗಡಿ ಅಥವಾ ಜನರ ಮೇಲೆ ಪಾಕಿಸ್ತಾನ ನಡೆಸುವ ಯಾವುದೇ ದಾಳಿಯ ಯತ್ನಕ್ಕೆ ಭಾರತ ತಕ್ಕ ಉತ್ತರ ನೀಡುತ್ತದೆಎಂದು ಸಿಂಗ್ ದೃಢವಾಗಿ ಎಚ್ಚರಿಕೆ ನೀಡಿದರು.

ಭಾರತದ ವಿರುದ್ಧ ರೂಪಿಸಲಾಗಿರುವ ಪಾಕಿಸ್ತಾನದ ತುಚ್ಛ ಮಹತ್ವಾಕಾಂಕ್ಷೆಗಳು ಈಡೇರಲು ಭಾರತ ಎಂದಿಗೂ ಅವಕಾಶ ನೀಡುವುದಿಲ್ಲ. ಪಾಕಿಸ್ತಾನದ ಇಂತಹ ಯಾವುದೇ ಯತ್ನಕ್ಕೆ ತನ್ನನ್ನು ಎಂದಿಗೂ ರಕ್ಷಿಸಿಕೊಳ್ಳಲು ಸಾಧ್ಯವಾಗದಂತಹ ರೀತಿಯ ಸೇಡಿನ ಕ್ರಮವನ್ನು ಭಾರತ ಕೈಗೊಳ್ಳುತ್ತದೆಎಂದು ಪಂಜಾಬ್ ಮುಖ್ಯಮಂತ್ರಿ ಘೋಷಿಸಿದರು.

ಭಾರತದ ಭಕ್ತರಿಗೆ ಚಾರಿತ್ರಿಕ ಕರ್ತಾರಪುರ ಗುರುದ್ವಾರಕ್ಕೆ ತಲುಪಲು ಸಾಧ್ಯವಾಗುವಂತೆ ಕಾರಿಡಾರ್ ತೆರೆದುದಕ್ಕೆ ಒಬ್ಬ ಸಿಕ್ಖನಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ. ಆದರೆ ಅದು ನಮ್ಮ ರಾಷ್ಟ್ರಕ್ಕೆ ನೀಡಿರುವ ಬೆದರಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದಾಗಿ ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆಎಂದು ಅಮರೀಂದರ್ ಸಿಂಗ್ ನುಡಿದರು.

ವಾಸ್ತವವಾಗಿ ಮುಖ್ಯಮಂತ್ರಿಯವರು ವಿಷಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರುವಂತೆ ನಿರಂತರ ಹೇಳುತ್ತಲೇ ಬಂದಿದ್ದರು. ಪಾಕಿಸ್ತಾನವು ಕಾರಿಡಾರ್ ತೆರೆಯುವ ಮೂಲಕ ಸಿಕ್ಖರ ಸಹಾನುಭೂತಿ ಗಳಿಸಲು ಯತ್ನಿಸುತ್ತಿದೆ. ಆದರೆ ಅದರ ಉದ್ದೇಶ ಐಎಸ್ ಬೆಂಬಲದರೆಫರೆಂಡಮ್ ೨೦೨೦ಕಾರ್ಯಸೂಚಿಯ ಅನುಷ್ಠಾನ ಎಂದು ಮುಖ್ಯಮಂತ್ರಿ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.

ವಿವಿಧ ವಾಸ್ತವಾಂಶಗಳಿಂದ ಇದು ಖಚಿತಗೊಂಡಿದೆ. ಅತ್ಯಂತ ಪ್ರಮುಖವಾಗಿ ಜನರಲ್ ಬಜ್ವಾ ಅವರು ಕಾರಿಡಾರ್ ನಿರ್ಮಿಸುವ ಪಾಕಿಸ್ತಾನದ ನಿರ್ಧಾರವನ್ನು ಆಗಿನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾರಂಭದ ಸಂದರ್ಭದಲ್ಲೇ ಬಹಿರಂಗ ಪಡಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.

ಇಮ್ರಾನ್ ಖಾನ್ ಅವರು ಆಗ ಅಧಿಕಾರ ಸ್ವೀಕಾರವನ್ನೇ ಮಾಡಿರಲಿಲ್ಲ. ಆದರೂ, ಅವರ ಸೇನಾ ಮುಖ್ಯಸ್ಥ ವಿಚಾರದ ಬಗ್ಗೆ ಸಿಧು ಅವರ ಜೊತೆಗೆ ಮಾತನಾಡಿದ್ದರು. ಬಜ್ವಾ ಅವರು ಕಾರಿಡಾರ್ ನಿರ್ಧಾರದ ಹಿಂದಿನ ವ್ಯಕ್ತಿಗಳಲ್ಲಿ ಒಬ್ಬರಲ್ಲವಾದರೆ, ಇದು ಹೇಗೆ ಸಾಧ್ಯವಿತ್ತು?’ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ತಾವು ಬಗ್ಗೆ ಹಿಂದೆಯೇ ಹೇಳಿದ್ದುದನ್ನು ನೆನಪಿಸುತ್ತಾ ನುಡಿದರು.

ಪಾಕಿಸ್ತಾನಿ ಸಚಿವ ಅನಾವರಣಗೊಳಿಸಿರುವ ದುಷ್ಟ ಸಂಚಿನ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ಜೊತೆಗಿನ ತಮ್ಮ ವ್ಯವಹಾರಗಳ ಬಗ್ಗೆ  ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಸಿಧು ಅವರನ್ನು ಆಗ್ರಹಿಸಿದರು.

ಪಾಕಿಸ್ತಾನಿ ಪ್ರಧಾನಿ ಜೊತೆಗಿನ ತಮ್ಮ ವೈಯಕ್ತಿಕ ಗೆಳೆತನವು ಭಾರತದ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂತಹ ವಿಚಾರಗಳಲ್ಲಿ ತಮ್ಮ ತೀರ್ಮಾನಗಳ ಮೇಲೆ ಪ್ರಭಾವ ಬೀರದಂತೆ ಸಿಧು ಅವರು ನೋಡಿಕೊಳ್ಳಬೇಕು ಎಂದು ಕ್ಯಾಪ್ಟನ್ ಕಿವಿಮಾತು ಹೇಳಿದರು.

No comments:

Advertisement