Monday, December 9, 2019

ದೆಹಲಿ ಅಗ್ನಿದುರಂತ: ೧೧ ಜನರ ಜೀವ ಉಳಿಸಿದ ರಾಜೇಶ್ ಶುಕ್ಲ

ದೆಹಲಿ ಅಗ್ನಿದುರಂತ: ೧೧ ಜನರ ಜೀವ ಉಳಿಸಿದ ರಾಜೇಶ್ ಶುಕ್ಲ
ನವದೆಹಲಿ: ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ 2019 ಡಿಸೆಂಬರ್ 08ರ ಭಾನುವಾರ ಅಗ್ನಿ ದುರಂತ ಸಂಭವಿಸಿದಾಗ ಉರಿಯುತ್ತಿದ್ದ ಕಟ್ಟಡದೊಳಗೆ ನುಗ್ಗಿ ೧೧ ಮಂದಿಯ ಪ್ರಾಣ ಉಳಿಸಿದ್ದ ವ್ಯಕ್ತಿ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲ. ಕಾರ್ಯಾಚರಣೆಯ ವೇಳೆಯಲ್ಲಿ ಅವರ ಕಾಲಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಧಗಧಗಿಸುತ್ತಿದ್ದ ಬೆಂಕಿಯ ಮಧ್ಯೆ ಸಿಕ್ಕಿಹಾಕಿಕೊಂಡು ಹಲವಾರು  ಮಂದಿ ಕಟ್ಟಡದೊಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಜೀವದ ಹಂಗು ತೊರೆದು ಶುಕ್ಲ ಕಟ್ಟಡದೊಳಕ್ಕೆ ಪ್ರವೇಶಿಸಿದ್ದರು ಮತ್ತು ಒಬ್ಬರ ಬಳಿಕ ಇನ್ನೊಬ್ಬರಂತೆ ೧೧ ಮಂದಿಯನ್ನು ಹೊರಕ್ಕೆ ಕರೆತಂದಿದ್ದರು.

ರಾಜೇಶ್ ಶುಕ್ಲ ಅವರ ಕಾರ್ಯವನ್ನು ಶ್ಲಾಘಿಸಿದ ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರುಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಶುಕ್ಲ ನಿಜವಾದ ಹೀರೊ. ಉರಿಯುತ್ತಿರುವ ಕಟ್ಟಡದೊಳಗೆ ಮೊದಲು ಪ್ರವೇಶಿಸಿದ ಅವರು ೧೧ ಮಂದಿಯ ಪ್ರಾಣ ಉಳಿಸಿದ್ದಾರೆ. ರಕ್ಷಣಾ ಕಾರ್ಯದ ನಡುವೆ ಅವರಿಗೆ ಗಾಯವಾದರೂ ಅದನ್ನು ಲೆಕ್ಕಿಸಿದೆ  ಜನರ ರಕ್ಷಣೆ ಮಾಡಿದ್ದಾರೆ. ಧೀರನಿಗೆ ನಮನಗಳುಎಂದು ಟ್ವೀಟ್ ಮಾಡಿದರು.

ರಕ್ಷಣಾ
ಕಾರ್ಯಾಚರಣೆ ವೇಳೆ ಕಾಲಿಗೆ ಏಟು ತಗುಲಿದ ರಾಜೇಶ್ ಶುಕ್ಲ ಅವರು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಚಿವರು ಅಲ್ಲಿಗೆ ಭೇಟಿ ನೀಡಿದ್ದರು.

ದೆಹಲಿಯ ರಾಣಿ ಝಾನ್ಸಿ ರಸ್ತೆಯಲ್ಲಿರುವ ಅನಾಜ್ ಮಂಡಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ೪೩ ಮಂದಿ ಸಾವಿಗೀಡಾಗಿದ್ದಾರೆ. ೫೦ ಮಂದಿಯನ್ನು ರಕ್ಷಿಸಲಾಗಿದೆ. ಶಾರ್ಟ್ ಸರ್ಕಿಟ್ನಿಂದಾಗಿ ಅಗ್ನಿ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿದ್ದವು.

No comments:

Advertisement