Tuesday, December 24, 2019

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ, ಸೌದಿ ನ್ಯಾಯಾಲಯದಿಂದ ಐವರಿಗೆ ಗಲ್ಲು ಶಿಕ್ಷೆ

ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ, ಸೌದಿ ನ್ಯಾಯಾಲಯದಿಂದ ಐವರಿಗೆ ಗಲ್ಲು ಶಿಕ್ಷೆ
ರಿಯಾದ್: ಸೌದಿ ಅರೇಬಿಯಾದ ಮೂಲದ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್ ಖಶೋಗಿಯವರನ್ನು ಹತ್ಯೆ ಮಾಡಿದ್ದ ಐವರಿಗೆ ಸೌದಿ ನ್ಯಾಯಾಲಯ 2019 ಡಿಸೆಂಬರ್ 23ರ ಸೋಮವಾರ ಗಲ್ಲು ಶಿಕ್ಷೆ ವಿಧಿಸಿತು. ಆದರೆ ಇಬ್ಬರು ಪ್ರಮುಖ ಆರೋಪಗಳಿಗಳನ್ನು ದೋಷಮುಕ್ತಗೊಳಿಸಿತು.

ಸೌದಿ ಅರೇಬಿಯಾ ರಾಜಮನೆತನದ ಟೀಕಾಕಾರರಾಗಿದ್ದ ಜಮಾಲ್ ಖಶೋಗಿಯನ್ನು ಕಳೆದ ಅಕ್ಟೋಬರಿನಲ್ಲಿ ಟರ್ಕಿಯ ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಯೊಳಗೆ ಹತ್ಯೆ ಮಾಡಲಾಗಿತ್ತು.

"ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಐವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ,” ಎಂಬುದಾಗಿ ಸರ್ಕಾರಿ ವಕೀಲ ಶಲಾನ್ ಅಲ್ ಶಲಾನ್ ಹೇಳಿದರು.

ರಾಜಮನೆತನದ ನ್ಯಾಯಾಲಯದ ಮಾಧ್ಯಮ ಮುಖ್ಯಸ್ಥ ಸೌದ್ ಅಲ್ ಖತಾನಿ ನಿರ್ದೇಶನದ ಮೇರೆಗೆ ಗುಪ್ತಚರ ಇಲಾಖೆ ಉಪ ಮುಖ್ಯಸ್ಥ ಅಹಮದ್ ಅಲ್ ಅಸ್ಸಿರಿ ಹತ್ಯೆಯ ಮೇಲುಸ್ತುವಾರಿ ವಹಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಇಬ್ಬರನ್ನೂ ಆರೋಪದಿಂದ ಮುಕ್ತಗೊಳಿಸಲಾಯಿತು.

ಕೊಲೆ ನಡೆದ ಸಮಯದಲ್ಲಿ ಇಸ್ತಾಂಬುಲ್ನ ರಾಯಭಾರಿಯಾಗಿದ್ದ ಮೊಹಮ್ಮದ್ ಅಲ್ ಒತೈಬಿಯನ್ನೂ ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಒಟ್ಟಾರೆ
೧೧ ಆರೋಪಿಗಳಲ್ಲಿ ಐವರಿಗೆ ಗಲ್ಲು ಶಿಕ್ಷೆ, ಮೂರು ಜನರಿಗೆ ೨೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಉಳಿದವರನ್ನು ಆರೋಪಮುಕ್ತಗೊಳಿಸಲಾಯಿತು.

ಪ್ರಕರಣದ ವಿಚಾರಣೆಯನ್ನು ಗೌಪ್ಯವಾಗಿ ನಡೆಸಲಾಗಿದ್ದು ಟರ್ಕಿ ರಾಯಭಾರಿ ಸೇರಿ ಕೆಲವೇ ಕೆಲವು ರಾಯಭಾರಿಗಳು ಮತ್ತು ಖಶೋಗಿ ಕುಟುಂಬಸ್ಥರಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು.

No comments:

Advertisement