Saturday, December 28, 2019

'ಪೌರತ್ವ’ ವಾಸ್ತವಾಂಶ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲು

'ಪೌರತ್ವವಾಸ್ತವಾಂಶ: ರಾಹುಲ್ ಗಾಂಧಿಗೆ ಅಮಿತ್ ಶಾ ಸವಾಲು
ನೂತನ ಕಾಯ್ದೆ ಬಗ್ಗೆ ಕಾಂಗೆಸ್ ಅಪಪ್ರಚಾರ
ಶಿಮ್ಲಾ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 27ರ ಶುಕ್ರವಾರ ವಿರೋಧಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವದಂತಿಗಳನ್ನು ಹರಡುತ್ತಾ ಜನರನ್ನು ದಾರಿತಪ್ಪಿಸಿ ದೇಶದ ಶಾಂತಿಯನ್ನು ಕದಡುತ್ತಿವೆ ಎಂದು ಆಪಾದಿಸಿದರು.

ಹಿಮಾಚಲ
ಪ್ರದೇಶದಲ್ಲಿ ಜೈರಾಮ್ ಥಾಕೂರ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಸಂಘಟಿಸಲಾಗಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾಪೌರತ್ವ (ತಿದ್ದುಪಡಿ) ಕಾಯ್ದೆಯು ಅಲ್ಪಸಂಖ್ಯಾತರನ್ನು ಪೌರತ್ವ ವಂಚಿತರನ್ನಾಗಿ ಮಾಡುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಖಾತರಿ ನೀಡಿದ್ದಾರೆಎಂದು ಹೇಳಿದರು.

ಕಾಂಗೆಸ್ ಮತ್ತು ಕಂಪೆನಿಯು ಅದು (ಪೌರತ್ವ ತಿದ್ದುಪಡಿ ಕಾಯ್ದೆ) ಅಲ್ಪಸಂಖ್ಯಾತರು, ಮುಸ್ಲಿಮ್ ಬಾಂಧವರನ್ನು ಪೌರತ್ವ ವಂಚಿತರನ್ನಾಗಿ ಮಾಡುತ್ತದೆ ಎಂಬುದಾಗಿ ವದಂತಿಗಳನ್ನು ಹರಡುತ್ತಿವೆಎಂದು ಹೇಳಿದ ಅಮಿತ್ ಶಾಕಾಯ್ದೆಯಲ್ಲಿ ಅಂತಹ ಒಂದೇ ಒಂದು ವಿಧಿ ಇದ್ದರೆ ಅದನ್ನು ತೋರಿಸಿಕೊಡಿ ಎಂದು ನಾನು ರಾಹುಲ್ ಬಾಬಾ (ಗಾಂಧಿ) ಅವರಿಗೆ ಸವಾಲು ಹಾಕುತ್ತೇನೆಎಂದು ಹೇಳಿದರು.

ಇಂತಹ ಅಪಪ್ರಚಾರವನ್ನು ನಿಲ್ಲಿಸಿಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ ಅವರು, ’ನಿಮ್ಮ ಬಳಿ ವಾಸ್ತವಾಂಶಗಳು ಇದ್ದರೆ ಆಗ ಜನರ ಮುಂದೆ ಹೋಗಿಎಂದು ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆಎಂದು ಅವರು ಪುನರುಚ್ಚರಿಸಿದರು.

ಉಭಯ
ರಾಷ್ಟ್ರಗಳು ತಮ್ಮ ತಮ್ಮ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವ ಸಲುವಾಗಿ ೧೯೫೦ರಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿದ ನೆಹರೂ -ಲಿಯಾಖತ್ ಒಪ್ಪಂದವನ್ನು ಉಲ್ಲೇಖಿಸಿದ ಬಿಜೆಪಿ ಮುಖ್ಯಸ್ಥಭಾರತವು ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಸಂವಿಧಾನವೇ ನಮಗೆ ವಹಿಸಿದ ಕರ್ತವ್ಯವಾದ್ದರಿಂದ ಅದನ್ನು ಪಾಲಿಸುವ ಮೂಲಕ ಒಪ್ಪಂದವನ್ನು ಅಕ್ಷರಶಃ ಜಾರಿ ಮಾಡಿತುಎಂದು ಹೇಳಿದರು.

ಆದಾಗ್ಯೂ
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆ ಕ್ರಮವಾಗಿ ಶೇಕಡಾ ಮತ್ತು ಶೇಕಡಾ ೭ಕ್ಕೆ ಕುಸಿಯಿತು ಎಂದು ಅವರು ನುಡಿದರು.

ದಮನಕ್ಕೆ
ಒಳಗಾದ ಲಕ್ಷಾಂತರ ಮತ್ತು ಕೋಟ್ಯಂತರ ಜನರು ಭಾರತಕ್ಕೆ ಓಡಿ ಬಂದು ಇಲ್ಲಿ ಆಶ್ರಯ ಪಡೆದರು. ದೇಶರಹಿತರಾದ ಜನರಿಗೆ ಪೌರತ್ವ ಒದಗಿಸುವ ದಿಟ್ಟ ಕ್ರಮವನ್ನು ಪ್ರಧಾನಿ ಮೋದಿ ಅವರು ಕೈಗೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.

೩೭೦ನೇವಿಧಿಗೆ ಸಂಬಂಧಿಸಿದಂತೆ ೧೩ರ ಹರೆಯದ ಬಾಲಕನೊಬ್ಬಏಕ್ ದೇಶ್ ಮೆ ದೊ ವಿಧಾನ್, ದೊ ಪ್ರಧಾನ್ ನಹೀ ಔರ್ ದೋ ನಿಶಾನ್ ನಹೀ ಚಲೇಂಗೆ (ಒಂದು ರಾಷ್ಟ್ರವು ಎರಡು ರೀತಿಯ ಕಾನೂನು, ಇಬ್ಬರು ನಾಯಕರು ಮತ್ತು ಎರಡು ಲಾಂಛನಗಳನ್ನು ಹೊಂದಿರಲು ಸಾಧ್ಯವಿಲ್ಲ) ಎಂಬುದಾಗಿ ಘೋಷಣೆ ಕೂಗಿದ್ದನ್ನು ಗೃಹ ಸಚಿವರು ಪ್ರಸ್ತಾಪಿಸಿದರು.

೩೭೦ನೇ
ವಿಧಿಯನ್ನು ರದ್ದು ಪಡಿಸಿ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಕಳುಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಬಿಜೆಪಿ ಮುಖ್ಯಸ್ಥಇವತ್ತು ಕಾಶ್ಮೀರವು ನಮ್ಮ ಏಕೀಕೃತ ರಾಷ್ಟ್ರದ ಝಗಮಗಿಸುವ ಕಿರೀಟವಾಗಿದೆಎಂದು ನುಡಿದರು.

ರಾಷ್ಟ್ರದ
ಭದ್ರತೆಗೆ ಸಂಬಂಧಿಸಿದಂತೆ ಮೋದಿಯವರ ನಿರ್ಧಾರಗಳನ್ನುಐತಿಹಾಸಿಕಎಂಬುದಾಗಿ ಬಣ್ಣಿಸಿದ ಶಾ, ಯುಪಿಎ ಆಡಳಿತಾವಧಿಯಲ್ಲಿ ಪಾಕ್ ಕಡೆಯಲ್ಲಿನ ಭಾರತದ ಗಡಿಗಳು ಸುರಕ್ಷಿತವಾಗಿರಲಿಲ್ಲ. ಪಾಕಿಸ್ತಾನಿ ಭಯೋತ್ಪಾದಕರು ತಮಗೆ ಇಚ್ಛೆ ಬಂದಂತೆ ದೇಶವನ್ನು ಪ್ರವೇಶಿಸಿ ಭಾರತೀಯ ಯೋಧರನ್ನು ಕೊಂದು ಹಾಕುತ್ತಿದ್ದರು ಎಂದು ಹೇಳಿದರು.

ಏನಿದ್ದರೂ
, ಬಿಜೆಪಿ ಆಡಳಿತಾವಧಿಯಲ್ಲಿ ಉರಿ ಮತ್ತು ಪುಲ್ವಾಮದಲ್ಲಿ ದಾಳಿ ನಡೆಸಿದಾಗ ಅವರು ೫೬ ಅಂಗುಲದ ವ್ಯಕ್ತಿಯೊಬ್ಬರು ಅಧಿಕಾರದಲ್ಲಿ ಇದ್ದಾರೆ ಎಂಬುದನ್ನು ಮರೆತು ಬಿಟ್ಟಿದ್ದರು. ಮೋದಿ ಸರ್ಕಾರವು ೧೦ ದಿನಗಳ ಒಳಗಾಗಿ ಸರ್ಜಿಕಲ್ ದಾಳಿ ನಡೆಸುವ ಮೂಲಕ ಉತ್ತರ ಕೊಟ್ಟಿತು ಮತ್ತು ಪಾಕಸ್ತಾನಿ ನೆಲದಿಂದ ಭಾರತವನ್ನು ಪ್ರವೇಶಿಸುತ್ತಿದ್ದ ಭಯೋತ್ಪಾದಕರನ್ನು ಕೊಂದು ಹಾಕಿತುಎಂದು ಅಮಿತ್ ಶಾ ಹೇಳಿದರು.

ಇವತ್ತು ಭಾರತವು ಅಮೆರಿಕ ಮತ್ತು ಇಸ್ರೇಲಿನ ಬಳಿಕ ತನ್ನ ನೆಲದ ರಕ್ಷಣೆಗಾಗಿ ಇಂತಹ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಇರುವ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದಕ್ಕೆಲ್ಲ ಕಾರಣ ಮೋದಿ ಅವರ ಇಚ್ಛಾ ಶಕ್ತಿಎಂದು ಅಮಿತ್ ಶಾ ನುಡಿದರು. 

No comments:

Advertisement