Friday, December 27, 2019

‘ಟುಕಡೆ ಟುಕಡೆ ಗ್ಯಾಂಗ್’ ಗೆ ಶಿಕ್ಷೆ ನೀಡಿ: ಆಪ್, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ದ್ವಿಮುಖ ದಾಳಿ

ಟುಕಡೆ ಟುಕಡೆ ಗ್ಯಾಂಗ್ಗೆ  ಶಿಕ್ಷೆ ನೀಡಿ: ಆಪ್, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ದ್ವಿಮುಖ ದಾಳಿ
ನವದೆಹಲಿ: ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು (ಆಪ್) ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ ಎಂದು 2019 ಡಿಸೆಂಬರ್ 26ರ ಗುರುವಾರ ಇಲ್ಲಿ ಆಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಕಾಂಗ್ರೆಸ್ ಪಕ್ಷದ ನೆರವಿನೊಂದಿಗೆ ಹಿಂಸಾಚಾರಕ್ಕೆ ಕಾರಣವಾದಟುಕಡೆ ಟುಕಡೆ ಗ್ಯಾಂಗ್ನ್ನು ಶಿಕ್ಷಿಸಲು ಇದು ಸಕಾಲ. ದೆಹಲಿಯ ಜನತೆ ಅವರಿಗೆ ಶಿಕ್ಷೆ ವಿಧಿಸಬೇಕುಎಂದು ಹೇಳಿದರು.

ದೆಹಲಿ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಭಾಷಣದ ಅಂಶಗಳನ್ನು ಕೈಗೆತ್ತಿಕೊಂಡು ಉಭಯ ಪಕ್ಷಗಳ ವಿರುದ್ಧ ತಮ್ಮ ದಾಳಿಯನ್ನು ಮುಂದುವರೆಸಿದರು.

ತಿದ್ದುಪಡಿಗೊಂಡ ಪೌರತ್ವ ಕಾಯ್ದೆ ವಿರುದ್ಧ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೇಳಲು ಉಭಯ ಪಕ್ಷಗಳು ಸೃಷ್ಟಿಸಿದ ಗೊಂದಲವೇ ಕಾರಣ ಎಂದು ಅಮಿತ್ ಶಾ ಆಪಾದಿಸಿದರು.

೨೦೧೬ರಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಆರ್ಎಸ್ಎಸ್  ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಮತ್ತು ವಿದ್ಯಾರ್ಥಿಗಳ ಗುಂಪೊಂದರ ಮಧ್ಯೆ ಘರ್ಷಣೆ ಸಂಭವಿಸಿದ ಸಂದರ್ಭದಲ್ಲಿ  ಟುಕಡೆ ಟುಕಡೆ ಗ್ಯಾಂಗ್ಚಾಟೂಕ್ತಿ ಅಥವಾ  ನುಡಿಗಟ್ಟನ್ನು ಬಿಜೆಪಿಯು ಸೃಷ್ಟಿಸಿತ್ತು. 
ಎಡಪಕ್ಷಗಳ ವಿದ್ಯಾರ್ಥಿಗಳು ರಾಷ್ಟ್ರವನ್ನು ತುಂಡು ತುಂಡಾಗಿ ಒಡೆಯುವಂತೆ ಘೋಷಣೆಗಳನ್ನು ಕೂಗಿದರು ಎಂದು ಎಬಿವಿಪಿ ಆಪಾದಿಸಿತ್ತು ಮತ್ತು ಪೊಲೀಸರಿಗೆ ದೂರು ನೀಡಿತ್ತು. ಇದು ಹಲವಾರು ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹದ ಆಪಾದನೆಯಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಲು ಕಾರಣವಾಗಿತ್ತು.

ಪೊಲೀಸ್ ದಮನ ಕಾರ್ಯಾಚರಣೆಯನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದ ಬಿಜೆಪಿವಿರೋಧ ಪಕ್ಷಗಳು ರಾಷ್ಟ್ರವನ್ನು ವಿಭಜಿಸಲು ಹೊರಟಿದ್ದ ವ್ಯಕ್ತಿಗಳನ್ನು ಬೆಂಬಲಿಸಿವೆಎಂದು ಆಪಾದಿಸಿತ್ತು.  ಬಳಿಕ ಬಿಜೆಪಿ ನಾಯಕರು ಹಲವಾರು ಬಾರಿ ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಟುಕಡೆ ಟುಕಡೆ ಗ್ಯಾಂಗ್ಚಾಟೂಕ್ತಿಯನ್ನು ಪ್ರಯೋಗಿಸುತ್ತಲೇ ಬಂದಿದೆ.

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಗೊಂದಲವನ್ನು ಸೃಷ್ಟಿಸಿದೆ. ಕಾಯ್ದೆ ಬಗ್ಗೆ ಜನರನ್ನು ದಾರಿ ತಪ್ಪಿಸುವ ಮೂಲಕ ವಿರೋಧ ಪಕ್ಷಗಳು ದೆಹಲಿಯ ಶಾಂತ ಪರಿಸ್ಥಿತಿಯನ್ನು  ಕದಡಿವೆಎಂದು ಅಮಿತ್ ಶಾ ಅವರು ಇತ್ತೀಚಿನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಉಲ್ಲೇಖಿಸಿದರು. ಪ್ರತಿಭಟನೆಗಳು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಮತ್ತು ಸೀಲಂಪುರದಂತಹ ಪ್ರದೇಶಗಳಲ್ಲಿ ಹಿಂಸಾತ್ಮಕ ರೂಪ ಪಡೆದಿತ್ತು.

ಶಾ ಅವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿ ಬಗ್ಗೆ ತಮ್ಮ ಬಾಷಣದಲ್ಲಿ ಹೆಚ್ಚು ವಿವರಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೆಹಲಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ಪೌರ ನೋಂದಣಿ ಬಗೆಗಿನ ಜನರ ಕಳವಳವನ್ನು ನಿವಾರಿಸಲು ಯತ್ನಿಸಿದ್ದರು. ಹಿಂಸಾಚಾರಕ್ಕಾಗಿ ವಿರೋಧ ಪಕ್ಷಗಳನ್ನು ದೂಷಿಸಿದ್ದ ಪ್ರಧಾನಿರಾಷ್ಟ್ರಿಯ ಪೌರ ನೋಂದಣಿಯ ವಿಚಾರವನ್ನು ತಮ್ಮ ಸಂಪುಟವಾಗಲೀ, ಸಂಸತ್ ಆಗಲೀ ಚರ್ಚಿಸಿಯೇ ಇಲ್ಲಎಂದು ಸ್ಪಷ್ಟ ಪಡಿಸಿದ್ದರು.

ಎರಡು
ದಿನಗಳ ಬಳಿಕ, ಮೋದಿ ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ನವೀಕರಣಕ್ಕಾಗಿ ,೯೦೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಆದರೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೂ (ಎನ್ಪಿಆರ್) ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿಗೂ (ಎನ್ಆರ್ಸಿ) ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟ ಪಡಿಸಿತ್ತು.

ಅಮಿತ್ ಶಾ ಅವರು ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಚಾರದಲ್ಲಿ ಬೆಂಬಲಿಸಿದ್ದರು ಮತ್ತು ಪೌರತ್ವ ನೋಂದಣಿ ಮತ್ತು ಜನಸಂಖ್ಯಾ ನೋಂದಣಿಗೆ ಸಂಬಂಧವಿಲ್ಲ ಎಂದು ಹೇಳಿದ್ದರು.

ತಮ್ಮ ಗುರುವಾರದ ಭಾಷಣದಲ್ಲಿ ಅಮಿತ್ ಶಾ ಅವರು ಅರವಿಂದ ಕೇಜ್ರಿವಾಲ್ ಸರ್ಕಾರವು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಶ್ರೇಯಸ್ಸನ್ನು ಕದಿಯುತ್ತಿದೆ ಎಂದು ಆಪಾದಿಸಿದರು.

ನಿರ್ದಿಷ್ಟವಾಗಿ
ದೆಹಲಿಯ ಅನಧಿಕೃತ ಕಾಲೋನಿಗಳ ನಿವಾಸಿಗಳಿ ಮಾಲೀಕತ್ವ ಒದಗಿಸಿದ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಉಲ್ಲೇಖಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಸಂಪುಟ ಟಿಪ್ಪಣಿಯ ಮೂಲಕ ೧೩ ಕಾನೂನು ಅಡಚಣೆಗಳನ್ನು ಕಿತ್ತು ಹಾಕಿ, ರಾಷ್ಟ್ರದ ರಾಜಧಾನಿ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವ ೪೦ ಲಕ್ಷ ಮಂದಿಗೆ ಮಾಲಿಕತ್ವ ಹಕ್ಕುಗಳನ್ನು ನೀಡಿದರುಎಂದು ಶಾ ಹೇಳಿದರು.

ಸಿಖ್
ವಿರೋಧಿ ದಂಗೆಗಳ ಬಳಿಕ ಕೇಂದ್ರದಲ್ಲಿ ಬಹಳ ವರ್ಷಗಳವರೆಗೆ ಕಾಂಗ್ರೆಸ್ ಸರ್ಕಾರವಿತ್ತು, ಆದರೆ ಜನರಿಗೆ ನ್ಯಾಯ ಸಿಗಲಿಲ್ಲ.  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ನಾವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನಿವೃತ್ತ ನ್ಯಾಯಮೂರ್ತಿ ಜಿ.ಪಿ. ಮಾಥುರ್ ನೇತೃತ್ವದಲ್ಲಿ ರಚಿಸಿದೆವು. ಈಗ ದಂಗೆಕೋರರೆಲ್ಲರೂ ಕಂಬಿಗಳ ಹಿಂದಿದ್ದಾರೆಎಂದು ಗೃಹ ಸಚಿವರು ಪ್ರತಿಪಾದಿಸಿದರು.

No comments:

Advertisement