ಈಕ್ವಡೋರ್‌ನಲ್ಲಿ ನಿತ್ಯಾನಂದನಿಂದ
'ಕೈಲಾಸ’ ದ್ವೀಪರಾಷ್ಟ್ರ ಸ್ಥಾಪನೆ
'ಕೈಲಾಸ’ ದ್ವೀಪರಾಷ್ಟ್ರ ಸ್ಥಾಪನೆ
ಬೆಂಗಳೂರು: ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪಾಸ್ ಪೋರ್ಟ್ ಇಲ್ಲದೆಯೇ ಭಾರತದಿಂದ ಪರಾರಿಯಾಗಿರುವ ವಿವಾದಾತ್ಮಕ ’ದೇವ ಮಾನವ’ ನಿತ್ಯಾನಂದ ಸೆಂಟ್ರಲ್ ಲ್ಯಾಟಿನ್ ಅಮೆರಿಕದ ಈಕ್ವಡೋರ್ನಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ’ಕೈಲಾಸ’ ಎಂಬ ಹೆಸರು ಇಟ್ಟು ಅದನ್ನು ಭೂಮಿಯ ಮೇಲಿನ ಮಹಾನ್ ಹಿಂದೂ ರಾಷ್ಟ್ರ ಎಂಬುದಾಗಿ ಹೇಳಿಕೊಂಡಿರುವುದು 2019 ಡಿಸೆಂಬರ್ 03ರ ಮಂಗಳವಾರ ವರದಿಯಾಯಿತು.
‘ಕೈಲಾಸ’ ರಾಷ್ಟ್ರಕ್ಕೆ
ಸ್ವಂತ ಪಾಸ್ ಪೋರ್ಟ್ ಇದ್ದು, ಅದಕ್ಕಾಗಿ ’ನೇಷನ್’ ಹೆಸರಿನ ಸ್ವಂತ ವೆಬ್ ಸೈಟ್ ಒಂದನ್ನು ಕೂಡಾ ಆರಂಭಿಸಲಾಗಿದೆ ಎಂದು ವರದಿ ಹೇಳಿತು.
’ಕೈಲಾಸವು ತಮ್ಮ ಸ್ವಂತ ರಾಷ್ಟ್ರಗಳಲ್ಲಿಯೇ ಅಧಿಕೃತವಾಗಿ ಹಿಂದುತ್ವ ಆಚರಣೆಯ ಹಕ್ಕನ್ನು ಕಳೆದುಕೊಂಡ, ವಿಶ್ವಾದ್ಯಂತದಿಂದ ಹೊರತಳ್ಳಲ್ಪಟ್ಟ ಹಿಂದುಗಳಿಂದ ಸೃಷ್ಟಿಯಾಗಿರುವ ಗಡಿರಹಿತವಾದ ಸ್ವತಂತ್ರ ನೂತನ ರಾಷ್ಟ್ರ ಎಂಬುದಾಗಿ ವೆಬ್ ಸೈಟ್ ಬಣ್ಣಿಸಿದೆ’
ಎಂದು ದೃಢಪಡದ ವರದಿಗಳು ತಿಳಿಸಿದವು.
‘ಕೈಲಾಸ
ರಾಷ್ಟ್ರ’ವು
ಸ್ವಂತ ಪಾಸ್ ಪೋರ್ಟ್ ಹೊಂದಿದೆ ಎಂದು ತಿಳಿಸಲಾಗಿದ್ದು ನಿತ್ಯಾನಂದ ಈಗಾಗಲೇ ಅದರ ಮಾದರಿಯನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿರುವುದಾಗಿ ಹೇಳಲಾಯಿತು.
‘ನೂತನ
ರಾಷ್ಟ್ರವು ದೇಗುಲ ಆಧಾರಿತ ಪರಿಸರ ವ್ಯವಸ್ಥೆ, ಮೂರನೇ ಕಣ್ಣಿನ ಹಿಂದಿನ ವಿಜ್ಞಾನ, ಯೋಗ, ಧ್ಯಾನ ಮತ್ತು ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದು ವೆಬ್ ಸೈಟ್ ಹೇಳಿದೆ. ಇಷ್ಟೇ ಅಲ್ಲ, ಸಾರ್ವತ್ರಿಕ ಆರೋಗ್ಯ ಕಾಳಜಿ, ಉಚಿತ ಶಿಕ್ಷಣ, ಉಚಿತ ಆಹಾರ ಮತ್ತು ಎಲ್ಲರಿಗೂ ದೇಗುಲ ಆಧಾರಿತ ಜೀವನ ಶೈಲಿಯನ್ನು ಒದಗಿಸುತ್ತದೆ ಎಂದೂ ವೆಬ್ ಸೈಟ್ ತಿಳಿಸಿದೆ ಎನ್ನಲಾಯಿತು.
ನಿತ್ಯಾನಂದ
ಈಗ ತನ್ನ ’ರಾಷ್ಟ್ರದ’
ಪ್ರಜೆಗಳಾಗುವಂತೆ
ಜನರಿಗೆ ಆಹ್ವಾನ ನೀಡುತ್ತಿದ್ದು, ’ರಾಷ್ಟ್ರವನ್ನು’ ನಡೆಸಲು
ದೇಣಿಗೆಯನ್ನು ಕೋರುತ್ತಿರುವುದಾಗಿಯೂ ವರದಿ ಹೇಳಿತು.
ಮೂಲತಃ
ರಾಜಶೇಖರನ್ ಹೆಸರು ಹೊಂದಿದ್ದ ನಿತ್ಯಾನಂದ ತಮಿಳುನಾಡಿನ ವ್ಯಕ್ತಿಯಾಗಿದ್ದು, ೨೦೦೦ನೇ ಇಸವಿಯ ಆದಿಯಲ್ಲಿ ಬೆಂಬಗಳೂರಿನ ಬಳಿ ಆಶ್ರಮ ಸ್ಥಾಪಿಸಿದ ಬಳಿಕ ಖ್ಯಾತಿ ಪಡೆದಿದ್ದ. ಆತನ ಪ್ರವಚನಗಳು ಓಶೋ ರಜನೀಶ್ ಸಿದ್ಧಾಂತವನ್ನು ಆಧರಿಸಿದ್ದವು.
೨೦೧೦ರಲ್ಲಿ
ಚಿತ್ರನಟಿಯೊಬ್ಬಳೊಂದಿಗೆ
ಆತ ರಾಸಕ್ರೀಡೆ ನಡೆಸುತ್ತಿದ್ದ ವಿಡಿಯೋ ಬಹಿರಂಗಗೊಂಡಾಗ ನಿತ್ಯಾನಂದನ ಹೆಸರು ಪತ್ರಿಕೆಗಳಲ್ಲಿ
ರಾರಾಜಿಸಿತ್ತು. ಬಳಿಕ ಆತನ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿ ಬಂಧಿಸಲ್ಪಟ್ಟಿದ್ದ. ಅತ್ಯಾಚಾರದ ಇನ್ನೊಂದು ಪ್ರಕರಣದಲ್ಲೂ ಬಂಧಿಸಲ್ಪಟ್ಟ ಆತನ ವಿರುದ್ಧ ದೋಷಾರೋಪ ಪಟ್ಟಿಯೂ ದಾಖಲಾಗಿತ್ತು.
ಲೈಂಗಿಕ
ಹಗರಣದ ಬಳಿಕ ಆಹ್ಮದಾಬಾದಿನ ಆಶ್ರಮದ ಸಮೀಪ ಬಾಲಕಿಯರನ್ನು ದುರುಪಯೋಗ ಮಾಡಿದ ಆರೋಪ
ಆತನ ವಿರುದ್ಧ ಕಳೆದ ತಿಂಗಳು ಕೇಳಿ ಬಂದಿತ್ತು. ನಿತ್ಯಾನಂದ ಈಗ ಭಾರತದಲ್ಲಿ ಇಲ್ಲ
ಎಂದು ಗುಜರಾತ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಕರ್ನಾಟಕ
ಪೊಲೀಸ್ ಮೂಲಗಳ ಪ್ರಕಾರ ನಿತ್ಯಾನಂದ ೨೦೧೮ರ ಕೊನೆಯಲ್ಲಿ ಜಾಮೀನು ಷರತ್ತನ್ನು ಉಲ್ಲಂಘಿಸಿ ಭಾರತದಿಂದ ಪರಾರಿಯಾಗಿರಬಹುದು ಎನ್ನಲಾಗಿದೆ. ಆತನ ಪಾಸ್ ಪೋರ್ಟ್ ಅವಧಿ ೨೦೧೮ರಲ್ಲಿ ಮುಗಿದಿದ್ದು, ನವೀಕರಿಸುವಂತೆ ಮಾಡಿದ್ದ ಆತನ ಮನವಿಯನ್ನು ಅಧಿಕಾರಿಗಳು ತಳ್ಳಿ ಹಾಕಿದ್ದರು.
ಹಲವಾರು ಮಂದಿ ಮಾಜಿ ಭಕ್ತರ ಪ್ರಕಾರ ನಿತ್ಯಾನಂದನ ಆಶ್ರಮ ಎಲ್ಲ ಮಾದರಿಯ ಅಕ್ರಮ ಅನೈತಿಕ ಚಟುವಟಿಕೆಗಳ ಕೇಂದ್ರವೆಂದು ಕುಖ್ಯಾತವಾಗಿತ್ತು. ಪಾಸ್ಪೋರ್ಟ್ಇಲ್ಲದೆಯೇ ಆತ ರಾಷ್ಟ್ರದಿಂದ ಪರಾರಿಯಾಗಿರುವುದು ಹೇಗೆ ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ ಎಂದು ವರದಿಗಳು ಹೇಳಿವೆ.
No comments:
Post a Comment