ಘಟಿಕೋತ್ಸವದಲ್ಲಿ
ಪೌರತ್ವ ಕಾಯ್ದೆ ಪ್ರತಿ ಹರಿದ ವಿದ್ಯಾರ್ಥಿನಿ
ಜಾಧವಪುರ
ವಿಶ್ವವಿದ್ಯಾಲಯದಲ್ಲಿ ಕಾಯ್ದೆ ವಿರೋಧಿ ಪ್ರತಿಭಟನೆ
ಕೋಲ್ಕತ: ಜಾಧವಪುರ
ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಸ್ವೀಕಾರದ ವೇಳೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ಪ್ರತಿಯನ್ನು ಹರಿದುಹಾಕಿದ ಘಟನೆ 2019 ಡಿಸೆಂಬರ್
25ರ ಮಂಗಳವಾರ ಘಟಿಸಿತು.
'ವಿವಾದಾತ್ಮಕ ಕಾಯ್ದೆಯ ವಿರುದ್ಧ ಪ್ರತಿಭಟಿಸುವ ನನ್ನ ಮಾರ್ಗ ಇದು’ ಎಂದು ಘೋಷಿಸಿ ಆ ವಿದ್ಯಾರ್ಥಿನಿ ಕಾಯ್ದೆಯನ್ನು ಹರಿದು ಹಾಕಿದ್ದಾಳೆ ಎಂದು ವರದಿ ತಿಳಿಸಿತು..
ತನ್ನನ್ನು ದೆಬೊಸ್ಮಿತ ಚೌಧರಿ ಎಂಬುದಾಗಿ ಸ್ವತಃ ಪರಿಚಯ ಮಾಡಿಕೊಂಡ ವಿಶ್ವ ವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹರಿದು ತನ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಲು ಸಮಾರಂಭ ತಾಣದಲ್ಲಿ ಉಪ ಕುಲಪತಿ, ಪ್ರೊ-ವಿಸಿ ಮತ್ತು ರಿಜಿಸ್ಟ್ರಾರ್ ಅವರು ಕುಳಿತಿದ್ದ ವೇದಿಕೆ ಮುಂದಿನ ಪೋಡಿಯಂನ್ನೇ ಬಳಸಿಕೊಂಡರು.
ಪ್ರಾಮಾಣಿಕ ಪೌರರಿಗೆ ತಮ್ಮ ರಾಷ್ಟ್ರೀಯತೆ ಸಾಬೀತು ಪಡಿಸುವಂತೆ ಮಾಡಿರುವ ಕಾರಣಕ್ಕಾಗಿ ತಾನು ಈ ಕೃತ್ಯ ಎಸಗುತ್ತಿರುವುದಾಗಿ ಚೌಧರಿ ಹೇಳಿದರು.

‘ಯಾವುದೇ
ಗೊಂದಲ ಮೂಡುವುದು ಬೇಡ. ನಾನು ಜಾಧವಪುರ ವಿಶ್ವವಿದ್ಯಾಲಯಕ್ಕೆ ಯಾವುದೇ ಅಗೌರವ ತೋರಿಸುತ್ತಿಲ್ಲ. ನನ್ನ ಒಲವಿನ ಸಂಸ್ಥೆಯಲ್ಲಿ ಈ ಪದವಿ ಪಡೆದಿರುವುದಕ್ಕಾಗಿ
ನನಗೆ ಹೆಮ್ಮೆ ಇದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲು ನಾನು ಈ ಪೋಡಿಯಂನ್ನು ಆಯ್ಕೆ
ಮಾಡಿಕೊಳ್ಳುತ್ತಿದ್ದೇನೆ.
ನನ್ನ ಗೆಳೆಯರು ಘಟಿಕೋತ್ಸವ ಸಮಾರಂಭ ಸ್ಥಳದ ದ್ವಾರದ ಬಳಿ ಧರಣಿ ನಡೆಸುತ್ತಿದ್ದಾರೆ’ ಎಂದು
ದೆಬೊಸ್ಮಿತ ಚೌಧರಿ ನುಡಿದರು.
ವಿಭಾಗದ
ಇನ್ನೊಬ್ಬ ವಿದ್ಯಾರ್ಥಿ ಅರ್ಕೊಪ್ರೊಭೊ ದಾಸ್ ಅವರು ತಮ್ಮ ೨೫ ಮಂದಿ ಸಹಪಾಠಿಗಳು
ತಮ್ಮ ಪದವಿಗಳನ್ನು ಪಡೆಯಲು ಪೋಡಿಯಂಗೆ ಹೋಗುವುದಿಲ್ಲ ಎಂದು ಹೇಳಿದರು.
‘ನಾವು ಘಟಿಕೋತ್ಸವ ಗೌನುಗಳನ್ನು ಧರಿಸಿದ್ದೇವೆ, ಆದರೆ ನಮ್ಮ ಹೆಸರುಗಳನ್ನು ಕರೆದಾಗ ನಾವು ಪೋಡಿಯಂಗೆ ಹೋಗುವುದಿಲ್ಲ. ಇದು ನಮ್ಮ ಪ್ರತಿಭಟನೆಯ ರೀತಿ’ ಎಂದು ಅವರು ನುಡಿದರು.
ಇದಕ್ಕೆ ಮುನ್ನ ಪ್ರತಿಭಟನಕಾರರು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಜಾಧವಪುರ ವಿಶ್ವ ವಿದ್ಯಾಲಯಕ್ಕೆ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ತಡೆದಿದ್ದರು. ಈ ಘಟನೆಯನ್ನು ರಾಜ್ಯಪಾಲರು ’ಕಾನೂನು ಆಳ್ವಿಕೆಯ ಸಂಪೂರ್ಣ ಕುಸಿತ’ ಎಂಬುದಾಗಿ ಬಣ್ಣಿಸಿದ್ದರು.

ಮಮತಾ
ಬ್ಯಾನರ್ಜಿ ಸರ್ಕಾರದ ಜೊತೆಗಿನ ನಿರಂತರ ಘರ್ಷಣೆಗಳ ಮಧ್ಯೆ ಧನ್ಕರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಪ್ರತಿಭಟನೆಗಳ ಕೇಂದ್ರವಾಗಿರುವ ವಿಶ್ವ ವಿದ್ಯಾಲಯಕ್ಕೆ ಆಗಮಿಸಿದ್ದರು. ಆದರೆ ಆಡಳಿತಾರೂಢ ತೃಣಮೂಲ ಕಾಂಗೆಸ್ಸಿನ ಟ್ರೇಡ್ ಯೂನಿಯನ್ ಘಟಕಕ್ಕೆ ಸೇರಿದ ಶಿಕ್ಷಾ ಬಂಧು ಸಮಿತಿಯ ಸದಸ್ಯರಾದ ಸುಮಾರು ೫೦ ಮಂದಿ ವಿಶ್ವ
ವಿದ್ಯಾಲಯ ಆವರಣ ಪ್ರವೇಶಿಸದಂತೆ ಮಾರ್ಗ ಮಧ್ಯದಲ್ಲೇ ತಡೆದಿದ್ದರು.
No comments:
Post a Comment