ಪೌರತ್ವ ಕಾಯ್ದೆ:
ಬಿಜೆಪಿಯಿಂದ ಸಮೂಹ
ಸಂಪರ್ಕ ಅಭಿಯಾನ, ಮುಂಬೈಯಲ್ಲಿ ಪರ ಪ್ರದರ್ಶನ
ನವದೆಹಲಿ/ ಮುಂಬೈ:
ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ರಾಷ್ಟ್ರವಾಪಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೇಳುತ್ತಿದ್ದಂತೆಯೇ, ಕಾಯ್ದೆ
ವಿಚಾರವಾಗಿ ರಾಷ್ಟ್ರವ್ಯಾಪಿ ಸಮೂಹ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲು ಬಿಜೆಪಿ 2019 ಡಿಸೆಂಬರ್ 21ರ ಶನಿವಾರ ನಿರ್ಧರಿಸಿತು. ಇದೇ
ವೇಳೆಗೆ ಕಾಯ್ದೆ ಪರವಾಗಿ
ಪ್ರದರ್ಶನಗಳೂ ನಡೆಯಲು ಆರಂಭವಾದವು.
ಮುಂಬೈಯ ದಾದರ್ ರೈಲ್ವೇ ನಿಲ್ದಾಣದ ಹೊರಭಾಗದಲ್ಲಿ 2019 ಡಿಸೆಂಬರ್ 21ರ ಶನಿವಾರ ನೂರಾರು ಮಂದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಪ್ರದರ್ಶನ ನಡೆಸಿದರು.
ಪ್ರದರ್ಶನಕಾರರು ಕಾಯ್ದೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಘೋಷಣೆಗಳನ್ನು ಕೂಗಿದರು.
ಮುಂಬೈಯ ದಾದರ್ ರೈಲ್ವೇ ನಿಲ್ದಾಣದ ಹೊರಭಾಗದಲ್ಲಿ 2019 ಡಿಸೆಂಬರ್ 21ರ ಶನಿವಾರ ನೂರಾರು ಮಂದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಪ್ರದರ್ಶನ ನಡೆಸಿದರು.
ಪ್ರದರ್ಶನಕಾರರು ಕಾಯ್ದೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಘೋಷಣೆಗಳನ್ನು ಕೂಗಿದರು.
ಪ್ರದರ್ಶನವನ್ನು
ಸಂಘಟಿಸಿದ ’ಸಂವಿಧಾನ ಸಂಮಾನ ಮಂಚ್’ ಜನತೆಗೆ ಶಾಂತಿಯುತವಾಗಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯನ್ನು ಬೆಂಬಲಿಸುವಂತೆ ಮನವಿ ಮಾಡಿತು.
ಶಿಕ್ಷಣ ತಜ್ಞರ
ಬೆಂಬಲ:
ಈ ಮಧ್ಯೆ, ದೇಶಾದ್ಯಂತದ ವಿವಿಧ ವಿಶ್ವ ವಿದ್ಯಾಲಯಗಳ ಸುಮಾರು ೧೦೦೦ ಮಂದಿ ಶಿಕ್ಷಣ ತಜ್ಞರು ಶನಿವಾರ ಪೌರತ್ವ ತಿದುಪಡಿ ಕಾಯ್ದೆಯನ್ನು ಬೆಂಬಲಿಸಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದರು.
ಬಿಜೆಪಿಯಿಂದ ಸಮೂಹ
ಸಂಫರ್ಕ:
ಏತನ್ಮಧ್ಯೆ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ದೇಶಾದ್ಯಂತ ೩ ಕೋಟಿ ಕುಟುಂಬಗಳನ್ನು
ಸಂಪರ್ಕಿಸಲು ನಿರ್ಧರಿಸಿತು.
ಬಿಜೆಪಿಯ
ದೆಹಲಿ ಘಟಕದ ನಾಯಕ ಭೂಪೇಂದರ್ ಯಾದವ್ ಅವರು ನಮ್ಮ ಪಕ್ಷವು ಮುಂದಿನ ೧೦ ದಿನಗಳಲ್ಲಿ ಪೌರತ್ವ
ತಿದ್ದುಪಡಿ ಕಾಯ್ದೆ ಬಗ್ಗೆ ಜನ ಜಾಗೃತಿ ಮೂಡಿಸುವ
ಸಲುವಾಗಿ ೩
ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ’ವಿಶೇಷ ಸಮೂಹ ಸಂಪರ್ಕ ಅಭಿಯಾನ’ವನ್ನು ನಡೆಸಲಿದೆ ಎಂದು ಟ್ವೀಟ್ ಮಾಡಿದರು.
‘ದೇಶಾದ್ಯಂತ
ಸುಮಾರು ೨೫೦ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾವು ಕಾಯ್ದೆಗೆ ಬೆಂಬಲವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದೇವೆ’ ಎಂದೂ
ಅವರು ತಿಳಿಸಿದರು.
ಕಾಂಗ್ರೆಸ್
ಪಕ್ಷದ ತುಷ್ಠೀಕರಣ ನೀತಿ ಮತ್ತು ವಿರೋಧ ಪಕ್ಷಗಳ ಸುಳ್ಳುಗಳನ್ನು ಬಯಲಿಗೆಳೆಯಲು ’ಸಮೂಹ
ಸಂಪರ್ಕ’ ಅಭಿಯಾನವನ್ನು
ಬಿಜೆಪಿ ಹಮ್ಮಿಕೊಂಡಿದೆ ಎಂದು ಬಿಜೆಪಿ ನಾಯಕ ಭೂಪೇಂದರ್ ಯಾದವ್ ಬಳಿಕ
ಸುದ್ದಿಗಾರರ ಜೊತೆ
ಮಾತನಾಡುತ್ತಾ ತಿಳಿಸಿದರು.
ಬಿಜೆಪಿ
ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಬಿಜೆಪಿ ಸಮೂಹ ಸಂಪರ್ಕ ಅಭಿಯಾನದ ವಿಚಾರವನ್ನು ಪ್ರಕಟಿಸಲಾಯಿತು. ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ರಾಜ್ಯಗಳಿಂದ ಬಂದಿದ್ದ ಸಂಘಟನಾ ನಾಯಕರು ಪಾಲ್ಗೊಂಡಿದ್ದರು.
‘ಕಾಂಗ್ರೆಸ್,
ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಸೇರಿದಂತೆ
ವಿರೋಧ ಪಕ್ಷಗಳ ’ಫಿತೂರಿಯನ್ನು’ ಅನಾವರಣಗೊಳಿಸಲು
ಮತ್ತು ಅವರ ಹಿಂಸೆ ಮತ್ತು ದ್ವೇಷ ರಾಜಕಾರಣವನ್ನು ಮೂಲೆಗುಂಪು ಮಾಡಲು ಶ್ರಮಿಸಬೇಕು
ಎಂದು ಜೆಪಿ ನಡ್ಡಾ ಅವರು ಸಭೆಯಲ್ಲಿ ಪಕ್ಷದ ನಾಯಕರಿಗೆ ತಿಳಿಸಿದರು.
ಸಚಿವರ ಜೊತೆ
ಪ್ರಧಾನಿ
ಚರ್ಚೆ:
ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕೊನೆಹಾಡಲು ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಈದಿನ ತಮ್ಮ
ಸಂಪುಟದ ಸಚಿವರ ಜೊತೆಗೆ ಸಮಾಲೋಚನೆ ನಡೆಸಿದರು ಎಂದು ಸರ್ಕಾರಿ ಮೂಲಗಳು ತಿಳಿಸಿದವು.
ಡಿಸೆಂಬರ್
೧೧ರಂದು ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದಂದಿನಿಂದ ಈವರೆಗೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಸಂಭವಿಸಿರುವ ದೇಶವ್ಯಾಪಿ ಘರ್ಷಣೆಗಳಲ್ಲಿ ಕನಿಷ್ಠ ೧೮ ಮಂದಿ ಸಾವನ್ನಪ್ಪಿದ್ದಾರೆ.
ಕಾಯ್ದೆಯು ಭಾರತದ ಜಾತ್ಯತೀತ ಸಂವಿಧಾನವನ್ನು ಕಡೆಗಣಿಸಿದೆ ಎಂದು ಅದರ ಟೀಕಾಕಾರರು ಟೀಕಿಸುತ್ತಿದ್ದಾರೆ.
ಮೊತ್ತ
ಮೊದಲ ಬಾರಿಗೆ ೨೦೧೪ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ, ಕೇಂದ್ರದ ವಿರುದ್ಧ ವ್ಯಕ್ತವಾಗಿರುವ ಮೊತ್ತ ಮೊದಲ ಭಾರಿ ಪ್ರಮಾಣದ ರಾಷ್ಟ್ರವ್ಯಾಪಿ ಪ್ರತಿಭಟನೆ ಇದಾಗಿದೆ.
ಕೇರಳದಲ್ಲಿ ಲಾಠಿ ಪ್ರಹಾರ: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು ಎಂದು ವರದಿಗಳು ತಿಳಿಸಿದವು.
ಕೇರಳದಲ್ಲಿ ಲಾಠಿ ಪ್ರಹಾರ: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು ಎಂದು ವರದಿಗಳು ತಿಳಿಸಿದವು.
ರಾಜಘಾಟ್ ನಲ್ಲಿ
ಕಾಂಗ್ರೆಸ್
ಧರಣಿ:
ಕಾಂಗ್ರೆಸ್ ಪಕ್ಷವು 2019 ಡಿಸೆಂಬರ್ 22ರ ಭಾನುವಾರ ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ
೮ ಗಂಟೆಯವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ ಆರ್ ಸಿ) ವಿರುದ್ಧ ರಾಜಘಾಟ್ನಲ್ಲಿ ’ಧರಣ’ ನಡೆಸಲಿದೆ.
ಪಕ್ಷದ ಹಂಗಾಮೀ
ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಧರಣಿಯಲ್ಲಿ ಪಾಲ್ಗೊಳ್ಳುವರು ಎಂದು ಪಕ್ಷವು ತಿಳಿಸಿತು.
No comments:
Post a Comment