ಕೇರಳ:
ಅತ್ಯಾಚಾರ ಆರೋಪಿಗೆ ಸಾರ್ವಜನಿಕರಿಂದ ಏಟು
ತಿರುವನಂತಪುರಂ: ಕೇರಳದಲ್ಲಿ ನಡೆದಿದ್ದ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಜನರ ಗುಂಪು ಹಿಗ್ಗಾಮುಗ್ಗ ಥಳಿಸಿದ ಘಟನೆ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2019 ಡಿಸೆಂಬರ್ 07ರ ಶನಿವಾರ ಬೆಳಗ್ಗೆ ಘಟಿಸಿತು.
ಆರೋಪಿಗಳಲ್ಲಿ
ಒಬ್ಬನಾದ ಸಿ. ಮಧು, ಸಾರ್ವಜನಿಕರ ಆಕ್ರೋಶಕ್ಕೆ ತುತಾಗಿದ್ದು, ಸಾರ್ವಜನಿಕರ ದಾಳಿಯಲ್ಲಿ ಗಾಯಗೊಂಡ ಆತನನ್ನು ಪಾಲಕ್ಕಾಡಿನಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅತ್ಯಾಚಾರ
ಪ್ರಕರಣದ ಆರೋಪಿ ಮತ್ತು ೪-೫ ಜನರ
ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಈ ಗಲಾಟೆಯೇ ಹಲ್ಲೆಗೆ
ಕಾರಣ ಎಂದು ಪೊಲೀಸರು ಹೇಳಿದರು. ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಥಳಿಸಿದ ಬಳಿಕ ಆತನನ್ನು ರಸ್ತೆಯ ಬದಿಯಲ್ಲಿ ಹಾಗೆಯೇ ಬಿಟ್ಟು ಹೋಗಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಎರಡು
ವರ್ಷದ ಹಿಂದೆ ಕೇರಳವನ್ನು ತಲ್ಲಣಗೊಳಿಸಿದ್ದ ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಆದರೆ ಎಲ್ಲ ಮೂರೂ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ ಆರೋಪದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೇರಳ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.
ಕೇರಳದಲ್ಲಿ
ಪಾಲಕ್ಕಾಡಿನ ವಲಯಾರ್ ಪ್ರದೇಶದಲ್ಲಿ ೧೩ ವರ್ಷದ ಬಾಲಕಿಯ
ಮೃತದೇಹ ಆಕೆಯ ಶಿಥಿಲವಾದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಲವು ವ್ಯಕ್ತಿಗಳು ಆಕೆಯ ಮೇಲೆ ಹಲವು ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಆಕೆಯ
ಸಾವಿನ ಬಳಿಕ ಆಕೆಯ ೯ ವರ್ಷದ ತಂಗಿ,
ಆಕೆ ಸತ್ತ ದಿನ ಇಬ್ಬರು ವ್ಯಕ್ತಿಗಳು ಮನೆಯಿಂದ ಹೊರಗೆ ಓಡಿದ್ದನ್ನು ಕಂಡಿದ್ದಾಗಿ ಹೇಳಿದ್ದಳು.
ಎರಡು
ತಿಂಗಳ ಬಳಿಕ ಆ ತಂಗಿ ಕೂಡ
ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಈ ಘಟನೆ ಕೇರಳದಲ್ಲಿ
ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಒತ್ತಡಕ್ಕೆ ಬಿದ್ದ ಪೊಲೀಸರು, ಆ ಕುಟುಂಬವಿದ್ದ ಮನೆಗೆ
ನಿರಂತರವಾಗಿ ಭೇಟಿ ನೀಡುತ್ತಿದ್ದ ಮೂವರನ್ನು ಬಂಧಿಸಿದ್ದರು.
No comments:
Post a Comment