Monday, December 30, 2019

ಇಂದಿನ ಯುವಜನತೆ ಅಸ್ಥಿರತೆ, ಸ್ವಜನ ಪಕ್ಷಪಾತ ಸಹಿಸದು: ಪ್ರಧಾನಿ ಮೋದಿ

ಇಂದಿನ ಯುವಜನತೆ ಅಸ್ಥಿರತೆ, ಸ್ವಜನ ಪಕ್ಷಪಾತ ಸಹಿಸದು: ಪ್ರಧಾನಿ ಮೋದಿ
೨೦೧೯ರ ಸಾಲಿನ ಕೊನೆಯಮನ್ ಕಿ  ಬಾತ್
ನವದೆಹಲಿ:ಮಿಲೆನಿಯಲ್ಸ್, ಸೋಶಿಯಲ್ ಮೀಡಿಯಾ ತಲೆಮಾರು ಮತ್ತು  ಝಡ್ ತಲೆಮಾರು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇಂದಿನ ಯುವಕರು ವ್ಯವಸ್ಥೆಯ ಅಸ್ಥಿರತೆ ಮತ್ತು ಸ್ವಜನ ಪಕ್ಷಪಾತವನ್ನು ಸಹಿಸುವುದಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಡಿಸೆಂಬರ್ 29ರ ಭಾನುವಾರ ಹೇಳಿದರು.

೨೦೧೯ರ ಸಾಲಿನ ತಮ್ಮ ಕೊನೆಯಮನ್ ಕಿ ಬಾತ್  ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥೆಯನ್ನು ನಂಬುವ ದೇಶದ ಯುವಕರ ನಿರೀಕ್ಷೆಗಳು ಮತ್ತು ಇತರ ವ್ಯಾಪಕ ವಿಷಯಗಳ ಕುರಿತು ಮಾತನಾಡಿದರು.

ಮುಂಬರುವ ದಶಕದಲ್ಲಿ ಯುವ ಭಾರತವು ಮಹತ್ವದ ಪಾತ್ರ ವಹಿಸಲಿದೆ. ಇಂದಿನ ಯುವಜನತೆ ವ್ಯವಸ್ಥೆಯನ್ನು ನಂಬುತ್ತದೆ ಮತ್ತು ವ್ಯಾಪಕ ವಿಷಯಗಳ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ಹೊಂದಿದೆ. ಇದು ಮಹಾನ್ ವಿಷಯ ಎಂದು ನಾನು ಪರಿಗಣಿಸುತ್ತೇನೆಎಂದು ಪ್ರಧಾನಿ ಹೇಳಿದರು.
ಇಂದಿನ ಯುವಕರು ಅಸ್ಥಿರತೆ, ಅರಾಜಕತೆ, ಸ್ವಜನಪಕ್ಷಪಾತವನ್ನು ದ್ವೇಷಿಸುತ್ತಾರೆ ಎಂದು ಅವರು ಹೇಳಿದರು.

ಬಿಹಾರಿನ ಪಶ್ಚಿಮ ಚಂಪಾರಣ್ ಜಿಲ್ಲೆಯ ಭೈರಗಂಜ್ ಆರೋಗ್ಯ ಕೇಂದ್ರದ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ಶಾಲೆಯೊಂದರ ಹಳೆ ವಿದ್ಯಾರ್ಥಿ ಸಂಘವು ಸಂಘಟಿಸಿದ ಆರೋಗ್ಯ ಶಿಬಿರಕ್ಕೆ ನೆರೆಯ ಗ್ರಾಮಗಳ ಸಹಸ್ರಾರು ಮಂದಿ ಆರೋಗ್ಯ ತಪಾಸಣೆಗಾಗಿ ಹೇಗೆ ಬರುತ್ತಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡರು.

ಇದು ಸರ್ಕಾರಿ ಕಾರ್ಯಕ್ರಮವಲ್ಲ, ಇಲ್ಲವೇ ಸರ್ಕಾರಿ ಉಪಕ್ರಮವೂ ಅಲ್ಲ. ಇದು ಸ್ಥಳೀಯ ಕೆಆರ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ  ಸಂಘದ ಸಭೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ. ಅವರು ಇದಕ್ಕೆಸಂಕಲ್ಪ ೯೫ಎಂಬ ಹೆಸರು ಇಟ್ಟಿದ್ದಾರೆಎಂದು ಹೇಳಿದ ಪ್ರಧಾನಿ, ಒಳ್ಳೆಯ ಕೆಲಸಗಳಿಗಾಗಿ ಯುವಕರು ಇಂತಹ ಹಳೆ ವಿದ್ಯಾರ್ಥಿ ಸಂಘಗಳನ್ನು ಬಳಸಬೇಕು ಎಂದು ಸೂಚಿಸಿದರು.

ಶನಿವಾರ ಪ್ರಧಾನಿಯವರು ಟ್ವೀಟ್ ಮೂಲಕ೨೦೧೯ರ ಸಾಲಿನ ಕೊನೆಯ ಮನ್ ಕಿ ಬಾತ್ ನಾಳೆ ೧೧ ಗಂಟೆಗೆ ನಡೆಯಲಿದೆ. ಪಾಲ್ಗೊಳ್ಳಿಎಂದು ಕೋರಿದ್ದರು.

ನವೆಂಬರ್ ೨೪ರ ತಮ್ಮ ತಮ್ಮ ಹಿಂದಿನ ಮನ್ ಕಿ ಬಾತ್ ಭಾಷಣದಲ್ಲಿ ಪ್ರಧಾನಿಯವರು ರಾಷ್ಟ್ರಾದ್ಯಂತ ಶಾಲೆಗಳಲ್ಲಿಫಿಟ್ ಇಂಡಿಯಾ ಗ್ರೇಡಿಂಗ್ ಸಿಸ್ಟಮ್ಆರಂಭವನ್ನು ಪ್ರಕಟಿಸಿದ್ದರು.

ಮಾತೃಭಾಷೆ ಬಳಕೆಗೆ ಕೂಡಾ ಪ್ರಧಾನಿಯವರು ಪ್ರೋತ್ಸಾಹ ನೀಡಿದರು. ’ಒಬ್ಬನ ಮಾತೃಭಾಷೆಯನ್ನು ನಿರ್ಲಕ್ಷಿಸಿ ಮಾಡುವ ಎಲ್ಲ ಪ್ರಗತಿಗಳೂ ಅರ್ಥರಹಿತಎಂದು ಅವರು ಹೇಳಿದರು.

ಪ್ರಧಾನಿ
ನರೇಂದ್ರ ಮೋದಿ ಅವರಮನ್ ಕಿ ಬಾತ್ಬಾನುಲಿ ಕಾರ್ಯಕ್ರಮವು ಪ್ರತಿತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತಿದ್ದು, ಕಾರ್ಯಕ್ರಮದ ಮೂಲಕ ಪ್ರಧಾನಿಯವರು ಸಲಹೆಗಳು, ಕಥೆಗಳು ಮತ್ತು ಕಲ್ಪನೆಗಳನ್ನು ಜನರಿಂದ ಆಹ್ವಾನಿಸುತ್ತಾರೆ

No comments:

Advertisement