Sunday, December 29, 2019

‘ನಿಮ್ಮ ಕೆಲಸ ನೋಡಿಕೊಳ್ಳಿ’: ಸೇನಾ ಮುಖ್ಯಸ್ಥ ಜನರಲ್ ರಾವತ್‌ಗೆ ಚಿದಂಬರಂ ಸಲಹೆ

ನಿಮ್ಮ ಕೆಲಸ ನೋಡಿಕೊಳ್ಳಿ: ಸೇನಾ ಮುಖ್ಯಸ್ಥ ಜನರಲ್ ರಾವತ್ಗೆ ಚಿದಂಬರಂ ಸಲಹೆ
ನವದೆಹಲಿ: ತಮ್ಮ ಮಿತಿಗೆ ಸೀಮಿತ ಪಡಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು 2019 ಡಿಸೆಂಬರ್ 28ರ ಶನಿವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ತಿರುವನಂತಪುರಂನಲ್ಲಿ ಸಲಹೆ ಮಾಡಿದರು.

ಪೌರತ್ವ
(ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ದೇಶದ ವಿವಿಧ ಕಡೆಗಳಲ್ಲಿ ಹಿಂಸೆಗೆ ತಿರುಗಿದ್ದನ್ನು ಅನುಸರಿಸಿ ಜನರಲ್ ರಾವತ್ ಅವರು ಗುರುವಾರ  ಜನಸಮೂಹವನ್ನು ಕಿಚ್ಚಿಡುವಿಕೆ ಮತ್ತು ಹಿಂಸಾಚಾರದತ್ತ ಒಯ್ಯುವವರು ಜನ ನಾಯಕರಲ್ಲಎಂಬುದಾಗಿ ಹೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳನ್ನು ಗುರುವಾರ ಟೀಕಿಸಿದ್ದ ಜನರಲ್ ಬಿಪಿನ್ ರಾವತ್ ಅವರು ಅಸಮರ್ಪಕ ದಿಕ್ಕಿನತ್ತ ಜನ ಸಮೂಹವನ್ನು  ಒಯ್ಯುತ್ತಿರುವುದಕ್ಕಾಗಿ ನಾಯಕತ್ವವನ್ನು ಪ್ರಶ್ನಿಸಿದ್ದರು.

ಚಿದಂಬರಂ ಅವರು ನಿವೃತ್ತರಾಗುತ್ತಿರುವ ಸೇನಾ ಮುಖ್ಯಸ್ಥ ರಾವತ್ ಅವರಿಗೆರಾಜಕಾರಣಿಗಳು ಸೇನಾ ಅಧಿಕಾರಿಗಳಿಗೆ ಅವರ ಕೆಲಸ ಮಾಡುವ ಬಗೆ ಹೇಗೆ ಎಂದು ಹೇಳುವುದಿಲ್ಲಎಂದು ಶನಿವಾರ ನೆನಪಿಸಿದರು.

ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಮತ್ತು ಸೇನಾ ಜನರಲ್ಗಳಿಗೆ ಸರ್ಕಾರವನ್ನು ಬೆಂಬಲಿಸುವಂತೆ ಹೇಳಲಾಗುತ್ತಿದೆ. ಇದು ನಾಚಿಕೆಗೇಡು. ನೀವು ಸೇನಾ ಮುಖ್ಯಸ್ಥರಾಗಿದ್ದೀರಿ ಮತ್ತು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಾನು ಜನರಲ್ ರಾವತ್ ಅವರಿಗೆ ಮನವಿ ಮಾಡಬಯಸುತ್ತೇನೆಎಂದು ಚಿದಂಬರಂ ಅವರು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಮಹಾ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು.

ಯುದ್ಧ ಮಾಡುವುದು ಹೇಗೆ ಎಂದು ನಿಮಗೆ ಹೇಳುವುದು ಹೇಗೆ ನಮ್ಮ ಕೆಲಸ ಅಲ್ಲವೋ ಹಾಗೆಯೇ ರಾಜಕಾರಣಿಗಳಿಗೆ ನಾವು ಏನು ಮಾಡಬೇಕು ಎಂದು ಹೇಳುವುದು ಸೇನೆಯ ಕೆಲಸವಲ್ಲಎಂದು ಕಾಂಗ್ರೆಸ್ ನಾಯಕ ನುಡಿದರು.

ದೇಶಾದ್ಯಂತ
ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಗೆ ತಿರುಗಿದಾಗ ಹಲವರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಮಾನತು ಪಡಿಸಬೇಕು ಮತ್ತು ರಾಷ್ಟ್ರೀಯ ಪೌರ ನೋಂದಣಿಯನ್ನು (ಎನ್ಆರ್ಸಿ) ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಅವುಗಳು ಅತಾರ್ಕಿಕವಷ್ಟೇ ಅಲ್ಲ ಸಂವಿಧಾನಬಾಹಿರ ಕೂಡಾಎಂದು ಚಿದಂಬರಂ ನುಡಿದರು.

ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆಎಂದು ಕಾಂಗ್ರೆಸ್ ನಾಯಕ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ನಮ್ಮ ಸಂವಿಧಾನದ ಅಡಿಪಾಯವನ್ನೇ ನಾಶ ಮಾಡುತ್ತದೆ. ಅವರಿಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಇದ್ದಿದ್ದರೆ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಿದ್ದರುಎಂದು ಚಿದಂಬರಂ ನುಡಿದರು.

ಕೇಂದ್ರದಲ್ಲಿನ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು ಸಂವಿಧಾನವನ್ನು ತಿದ್ದುಪಡಿ ಮಾಡಲು ಅಶಕ್ತವಾಗಿರುವುದರಿಂದ ಅವರುಹಿಂಬಾಗಿಲಮೂಲಕ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದೂರಿದರು.

ಚಿದಂಬರಂ ಅವರು ಟೀಕೆ ಮಾಡುವುದಕ್ಕೆ ಮುನ್ನ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರುಒಬ್ಬನ ಕಚೇರಿಯ ಮಿತಿಗಳನ್ನು ತಿಳಿದುಕೊಂಡಿರಬೇಕುಎಂದು ಜನರಲ್ ರಾವತ್ ಅವರಿಗೆ ಸೂಚಿಸಿದ್ದರು.

ಅಖಿಲ
ಭಾರತ ಕಾಂಗ್ರೆಸ್ ಸಮಿತಿಯು (ಏಐಸಿಸಿ) ಕೇರಳದಲ್ಲಿ ಸಂಘಟಿಸಿದ  ಸಂವಿಧಾನ ರಕ್ಷಿಸಿ- ಭಾರತ ರಕ್ಷಿಸಿಅಭಿಯಾನದ ಅಂಗವಾಗಿ ಪ್ರತಿಭಟನಾ ಪ್ರದರ್ಶನ ಸಂಘಟಿಸಲಾಗಿತ್ತು.ಕಾಂಗ್ರೆಸ್ ಪಕ್ಷವು ಪೌರತ್ವ ಕಾಯ್ದೆ ವಿರುದ್ಧದ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಶನಿವಾರ  ಕೇರಳ ಕಾಂಗ್ರೆಸ್ ಘಟಕದ ಮುಖ್ಯಸ್ಥ ಮುಲ್ಲಂಪಲ್ಲಿ ರಾಮಚಂದ್ರನ್ ಮತ್ತು ಕೇರಳ ವಿಧಾನಸಭೆಯಲ್ಲಿ ವಿರೋಧಿ ನಾಯಕರಾದ ರಮೇಶ ಚೆನ್ನಿತ್ತಲ ಸೇರಿದಂತೆ ನೂರಾರು ಮಂದಿ ಪಕ್ಷ ಕಾರ್ಯಕರ್ತರು, ಶಾಸಕರು ಮತ್ತು ಕಾನೂನು ಕರ್ತರು ಪ್ರತಿಭಟನಾ  ಪ್ರರ್ಶನದಲ್ಲಿ  ಪಾಲ್ಗೊಂಡಿದ್ದರು..

No comments:

Advertisement