ನೂತನ ಸಿಡಿಎಸ್
ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರ
ಇಲಾಖೆಗೂ ಮುಖ್ಯಸ್ಥ
ನವದೆಹಲಿ: ಭಾರತದ ಮೂರು ರಕ್ಷಣಾ ಪಡೆಗಳ ಪ್ರಪ್ರಥಮ
ಮುಖ್ಯಸ್ಥರಾಗಿ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು 2020 ಜನವರಿ 01ರ ಬುಧವಾರ
ಅಧಿಕಾರ ವಹಿಸಿಕೊಳ್ಳಲಿದ್ದು, ಇದೇ ವೇಳಗೆ ಕೇಂದ್ರ
ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿದ್ದು, ಇದರ ಮುಖ್ಯಸ್ಥರನ್ನಾಗಿಯೂ ಜನರಲ್ ರಾವತ್
ಅವರನ್ನೆ ನೇಮಕ ಮಾಡಿತು.
ರಕ್ಷಣಾ ಪಡೆಗಳ
ಮುಖ್ಯಸ್ಥರೇ (ಸಿಡಿಎಸ್) ಸೇನಾ ವ್ಯವಹಾರಗಳ ಇಲಾಖೆಗೂ ಮುಖ್ಯಸ್ಥರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ
ಆದೇಶ ತಿಳಿಸಿತು.
ಸರ್ಕಾರದ ಆದೇಶದಂತೆ
ಸಿಡಿಎಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರಗಳ ಇಲಾಖೆಯ
ಇಲಾಖೆಯ ನೇತೃತ್ವ ವಹಿಸಲಿದ್ದಾರೆ.
ಹೊಸ ಇಲಾಖೆಯ
ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ
ನಿರ್ವಹಿಸುತ್ತದೆ.
ಜನರಲ್ ಬಿಪಿನ್
ರಾವತ್ ಅವರು ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ 2020 ಜನವರಿ 01 ರ ಬುಧವಾರ
ಅಧಿಕಾರ ವಹಿಸಿಕೊಳ್ಳುವರು.
ಕೆಲ ದಿನಗಳ
ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ರಕ್ಷಣಾ
ಪಡೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮೂರೂ ವಿಭಾಗಗಳಲ್ಲಿ ಸಹಕಾರ- ಸಮನ್ವಯ ಸಾಧನೆಯ ಜವಾಬ್ದಾರಿ
ಸಿಡಿಎಸ್ ಆವರದಾಗಿರುತ್ತದೆ. ಮೂರೂ ಇಲಾಖೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಸಿಡಿಎಸ್ ಅವರೇ
ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ.
ಮೂರೂ ರಕ್ಷಣಾ
ಪಡೆಗಳ ಮುಖ್ಯಸ್ಥರಾಗಿರುವ ಜನರಲ್ ರಾವತ್ ಅವರು ೨೦೧೭ರಲ್ಲಿ ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡು
ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವಾವಧಿ ಈದಿನಕ್ಕೆ ಮುಕ್ತಾಯಗೊಂಡಿತ್ತು.
ಜನರಲ್ ಬಿಪಿನ್
ರಾವತ್ ಅವರ ಸ್ಥಾನಕ್ಕೆ, ಭೂಸೇನಾ ದಂಡನಾಯಕರಾಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್
ನರವಣೆ ಅವರೂ ಮಂಗಳವಾರ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ವಹಿಸಿಕೊಂಡ
ಬೆನ್ನಲ್ಲೆ ನರವಣೆ ಅವರು ’ಭಯೋತ್ಪಾದನೆಯ ಮೂಲಗಳ ವಿರುದ್ಧ ಮುಂಚಿತವಾಗಿಯೇ ದಾಳಿ ನಡೆಸುವ ತನ್ನ ಹಕ್ಕುಗಳನ್ನು
ಭಾರತ ಮೀಸಲಿರಿಸಿಕೊಂಡಿದೆ’ ಎಂಬುದಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ
ನೀಡಿದರು.
ಕಾಂಗ್ರೆಸ್ ಟೀಕೆ: ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಈ ಮೂಲಕ ತಪ್ಪು ಹೆಜ್ಜೆಯಿಡುತ್ತಿದೆ ಎಂದು ದೂರಿತು.
ಕಾಂಗ್ರೆಸ್ ಟೀಕೆ: ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಈ ಮೂಲಕ ತಪ್ಪು ಹೆಜ್ಜೆಯಿಡುತ್ತಿದೆ ಎಂದು ದೂರಿತು.
ಈ ಕುರಿತು
ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ, ’ಸಿಡಿಎಸ್ ನೇಮಿಸುವ ಮೂಲಕ ಸರ್ಕಾರ ತಪ್ಪು
ಹೆಜ್ಜೆಯಿಟ್ಟಿದೆ. ಸಮಯವೇ ಅದರ ಪರಿಣಾಮಗಳನ್ನು ಬಹಿರಂಗಪಡಿಸಲಿದೆ’ ಎಂದು
ಹೇಳಿದರು.
No comments:
Post a Comment