ಜೇಟ್ಲಿ,
ಸುಷ್ಮಾ, ಜಾರ್ಜ್, ಪೇಜಾವರ ಸ್ವಾಮೀಜಿಗೆ ಮರಣೋತ್ತರ
ಪದ್ಮ ವಿಭೂಷಣ ಗೌರವ
ನವದೆಹಲಿ: ದೇಶದ
ಎರಡನೇ ಅತ್ಯುನ್ನತ ಪ್ರಶಸ್ತಿ ಎಂದು ಕರೆಸಿಕೊಂಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ ಏಳು
ಮಂದಿಗೆ ನೀಡಲಾಗಿದ್ದು, ಕೇಂದ್ರದ ಮಾಜಿ ಸಚಿವರಾದ ದಿವಂಗತ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಜಾರ್ಜ್ ಫರ್ನಾಂಡಿಸ್ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದ ಸ್ವಾಮೀಜಿ ಅವರಿಗೆ ಪ್ರಸಕ್ತ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಕಟಿಸಲಾಯಿತು.
ಮನೋಹರ್ ಪರಿಕ್ಕರ್ ಅವರಿಗೂ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.
ಮನೋಹರ್ ಪರಿಕ್ಕರ್ ಅವರಿಗೂ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.
ಗಣರಾಜ್ಯೋತ್ಸವದ
ಮುನ್ನಾದಿನವಾದ 2020 ಜನವರಿ 25ರ
ಶನಿವಾರ ರಾತ್ರಿ ಕೇಂದ್ರವು
ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಜಾರ್ಜ್ ಫರ್ನಾಂಡಿಸ್ ಮತ್ತು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಅವರಿಗೆ
ಮರಣೋತ್ತರ ಪ್ರಶಸ್ತಿ ಸೇರಿದಂತೆ ಒಟ್ಟು ೭ ಮಂದಿಗೆ ಪದ್ಮವಿಭೂಷಣ
ಪ್ರಶಸ್ತಿಯನ್ನು ಪ್ರಕಟಿಸಿತು.
ಪದ್ಮವಿಭೂಷಣ
ಪ್ರಶಸ್ತಿ ಪುರಸ್ಕೃತರಲ್ಲಿ ಮಾರಿಷಸ್ ಮಾಜಿ ಪ್ರದಾನಿ ಸರ್ ಅನಿರುದ್ಧ ಜಗನ್ನಾಥ್, ಮಹಿಳಾ ಬಾಕ್ಸರ್ ಚಾಂಪಿಯನ್ ಎಂ.ಸಿ. ಮೇರಿಕೋಮ್
(ಮಣಿಪುರ), ಶಾಸ್ತ್ರೀಯ ಗಾಯಕ ಪಂಡಿತ್ ಶ್ರೀ ಚನ್ನೂಲಾಲ್ ಮಿಶ್ರ (ಉತ್ತರಪ್ರದೇಶ) ಅವರೂ ಸೇರಿದ್ದಾರೆ.
ಮನೋಹರ ಪರಿಕ್ಕರ್
ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ೧೬
ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಸರ್ಕಾರ ಪ್ರಕಟಿಸಿತು. ಸಿಂಧು ಅವರಿಗೂ ಪದ್ಮಭೂಷಣ
ಪ್ರಶಸ್ತಿ ಲಭಿಸಿತು.
ರಾಜ್ಯದ 9
ಮಂದಿಗೆ ಪದ್ಮಗೌರವ:
ಉಡುಪಿಯ
ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ
ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ರಾಜ್ಯದ ಒಂಭತ್ತು ಮಂದಿಗೆ ಪದ್ಮ ಗೌರವ ಸಂದಿತು.
ಈ
ಬಾರಿ ಏಳು ಮಂದಿಗೆ ಪದ್ಮವಿಭೂಷಣ, ೧೬ ಮಂದಿಗೆ ಪದ್ಮಭೂಷಣ
ಮತ್ತು ೧೧೮ ಮಂದಿಗೆ ಪದ್ಮಶ್ರೀ ಗೌರವ ನೀಡಲಾಗಿದೆ. ಇದರಲ್ಲಿ ೩೪ ಮಂದಿ ಮಹಿಳೆಯರು
ಮತ್ತು ೧೮ ಮಂದಿ ವಿದೇಶಿಯರು
ಸೇರಿದ್ದಾರೆ. ಅಷ್ಟೇ ಅಲ್ಲ, ೧೨ ಮಂದಿಗೆ ಮರಣೋತ್ತರವಾಗಿ
ಪ್ರಶಸ್ತಿ ನೀಡಲಾಯಿತು.
ಈ
ಬಾರಿ ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಗೌರವ ದೊರಕಿತು. ಅದರಲ್ಲೂ ಸಮಾಜ ಸೇವೆ ವಿಭಾಗದಲ್ಲಿ ತುಳಸಿಗೌಡ ಮತ್ತು ಹರೇಕಳ ಹಾಜಬ್ಬ ಅವರಿಗೆ ಪ್ರಶಸ್ತಿ ನೀಡುವ ಮೂಲಕ ತೆರೆ ಮರೆಯ ಕಾಯಿಯಂತಿದ್ದವರನ್ನೂ ಗುರುತಿಸಲಾಯಿತು.
ಕರ್ನಾಟಕಕ್ಕೆ
೮ ಪದ್ಮ ಗೌರವ
೧.
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು, ಪೇಜಾವರ ಮಠ, ಉಡುಪಿ
೨.
ಎಂ.ಪಿ.ಗಣೇಶ್- ಕ್ರೀಡೆ
೩.
ಡಾ. ಬೆಂಗಳೂರು ಗಂಗಾಧರ - ವೈದ್ಯಕೀಯ
೪.
ಭರತ್ ಗೋಯೆಂಕಾ - ವ್ಯಾಪಾರ ಮತ್ತು ಉದ್ಯಮ
೫.
ತುಳಸಿಗೌಡ - ಸಮಾಜ ಸೇವೆ
೬.
ಹರೇಕಳ ಹಾಜಬ್ಬ- ಸಮಾಜಸೇವೆ
೭.
ಕೆ.ವಿ.ಸಂಪತ್ಕುಮಾರ್
ಮತ್ತು ವಿದುಶಿ ಜಯಲಕ್ಷ್ಮೀ ಕೆ.ಎಸ್- ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ
೮.
ವಿಜಯ ಸಂಕೇಶ್ವರ, ವ್ಯಾಪಾರ ಮತ್ತು ಉದ್ಯಮ
ಅಕ್ಷರ
ಸಂತ ಎಂದೇ ಪ್ರಸಿದ್ಧರಾಗಿರುವ ಹರೇಕಳ ಹಾಜಬ್ಬ, ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ಘೋಷಿಸುವುದರೊಂದಿಗೆ ಈ ಬಾರಿಯೂ ಎಲೆಮರೆಯ
ಕಾಯಿಗಳನ್ನು ಗುರುತಿಸಿದಂತಾಗಿದೆ.
ಕಿತ್ತಳೆ ಮಾರುವ
ಹರೇಕಳ ಹಾಜಬ್ಬ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಅನಕ್ಷರಸ್ಥರಾಗಿದ್ದರೂ
ತಮ್ಮೂರಿನಲ್ಲಿ ಶಾಲೆ ಸ್ಥಾಪಿಸಿ ಊರ ಮಂದಿಗೆ ಅಕ್ಷರದಾನ ಮಾಡಿದ ಅನಾಮಧೇಯ ಸಮಾಜ
ಸೇವಕರಾಗಿದ್ದಾರೆ. ಸಮಾಜಸೇವೆ
(ಶಿಕ್ಷಣ) ಕ್ಷೇತ್ರದಲ್ಲಿ ಅವರು
ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯವರಾದ ತುಳಸಿ ಗೌಡ ಅವರಿಗೆ ಸಮಾಜ ಸೇವೆ (ಪರಿಸರ) ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗಿದೆ.
No comments:
Post a Comment